»   » 'ಹಾಲು ತುಪ್ಪ' ಚಿತ್ರದ ವಿರುದ್ಧ ಸಿಡಿದೆದ್ದ ಸೆಂಚುರಿಗೌಡ

'ಹಾಲು ತುಪ್ಪ' ಚಿತ್ರದ ವಿರುದ್ಧ ಸಿಡಿದೆದ್ದ ಸೆಂಚುರಿಗೌಡ

Posted By: ಮೈಸೂರು ಪ್ರತಿನಿಧಿ: ಯಶಸ್ವಿನಿ ಎಂ.ಕೆ
Subscribe to Filmibeat Kannada
Century gowda expressed his displeasure against haalu thuppa team | Filmibeat Kannada

'ತಿಥಿ' ಚಿತ್ರದ ನಂತರ ಹಿರಿಯ ಕಲಾವಿದರಾದ ಸೆಂಚುರಿ ಗೌಡ ಮತ್ತು ಗಡ್ಡಪ್ಪ ಪಾತ್ರಧಾರಿಗಳನ್ನ ಅಸಭ್ಯ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು.

ಆದ್ರೆ, ಹಳ್ಳಿ ಜನ ಒಳ್ಳೆ ಜನ ಎಂಬಂತೆ, ನಿರ್ದೇಶಕರು ಹೇಳಿದಂತೆ ಅಭಿನಯಿಸುತ್ತಿದ್ದೇವೆ ಎಂದು ಸೆಂಚುರಿ ಗೌಡ ಮತ್ತು ಗಡ್ಡಪ್ಪ ಮುಗ್ದತೆ ತೋಡಿಕೊಂಡಿದ್ದರು. ಆದ್ರೀಗ, ನನ್ನನ್ನ ಅಸಭ್ಯವಾಗಿ ಬಂಬಿಸಿದ್ದಾರೆ, ನನ್ನನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸೆಂಚುರಿ ಗೌಡ ಸಿಡಿದೆದ್ದಿದ್ದಾರೆ.

ಇನ್ಮುಂದೆ ನನ್ನನ್ನ ಅಸಭ್ಯವಾಗಿ ಬಳಸಿಕೊಳ್ಳುವ ಚಿತ್ರಗಳಲ್ಲಿ ನಟಿಸುವುದಿಲ್ಲ ವೆಂದು 'ಹಾಲು-ತುಪ್ಪ' ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಮುಂದೆ ಓದಿ....

'ಹಾಲು ತುಪ್ಪ' ಚಿತ್ರದ ವಿರುದ್ಧ ಸೆಂಚುರಿಗೌಡ ಗರಂ

ಸೆಂಚುರಿ ಗೌಡ ಅಭಿನಯಿಸಿರುವ 'ಹಾಲು ತುಪ್ಪ' ಚಿತ್ರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ''ನನ್ನನ್ನು ಹುಡುಗಿಯರೊಂದಿಗೆ ಅಸಭ್ಯವಾಗಿ ನೃತ್ಯ ಮಾಡಿಸಿದ್ದಾರೆ. ದ್ವಂದಾರ್ಥ ಸಂಭಾಷಣೆ ಹೇಳಿಸಿ ನನ್ನನ್ನ ದುರುಪಯೋಗ ಮಾಡಿಕೊಂಡಿದ್ದಾರೆ'' ಎಂದು ಚಿತ್ರದ ಸುದ್ಧಿಗೋಷ್ಠಿಯಲ್ಲಿ, ಚಿತ್ರತಂಡದ ಸಮ್ಮುಖದಲ್ಲಿ ಸೆಂಚುರಿಗೌಡ ಆರೋಪಿಸಿದ್ದಾರೆ.

ಮುಂದೆ ಈ ರೀತಿ ಸಿನಿಮಾ ಮಾಡಲ್ಲ

ಮುಂದಿನ ದಿನಗಳಲ್ಲಿ ಇಂತಹ ಪಾತ್ರಗಳಿಂದ ದೂರ ಉಳಿಯುವುದಾಗಿ ಮಾಧ್ಯಮಗಳ ಮುಂದೆ ಹಿರಿಯ ಕಲಾವಿದ 'ತಿಥಿ' ಖ್ಯಾತಿಯ ಸೆಂಚುರಿಗೌಡ ತಿಳಿಸಿದ್ದಾರೆ.

ನನ್ನ ಸಿನಿಮಾ ನೋಡಲು ಜನ ಬರುತ್ತಿಲ್ಲ

'ತಿಥಿ' ಚಿತ್ರ ಬಂದಾಗ ನನಗೆ ಅಭಿಮಾನಿಗಳು ಹೆಚ್ಚಿದ್ದರು. ಆದರೆ ಇದೀಗ ಜನರು ಕಡಿಮೆ ಆಗ್ತಿದ್ದಾರೆ. ನನಗೆ ಇದು ತುಂಬಾನೇ ಬೇಸರ ತರಿಸಿದೆ. ನಾನೂ ಹೋದ ಕಡೆಯಲ್ಲೆಲ್ಲ ಜನ ತುಂಬಿದ್ದರು. ಆದರೆ ಇದೀಗಾ ಕಡಿಮೆಯಾಗಿದ್ದಾರೆ ಎಂದು ಸೆಂಚುರಿಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕರು ಹೇಳಿದ್ದೇ ಬೇರೆ...

ಸೆಂಚುರಿ ಗೌಡರ ಆರೋಪದ ಬಗ್ಗೆ ಏನೂ ಮಾತನಾಡದ ನಿರ್ದೇಶಕ ಶಶಾಂಕ್ ರಾಜ್ ''ಜಾಗತೀಕರಣದಿಂದ ಗ್ರಾಮಗಳು ಬದಲಾಗುವ ನೈಜ ಸಾಂಸಾರಿಕ ಕಥಾ ಹಂದವಿರುವ ಕಮರ್ಷಿಯಲ್ ಚಿತ್ರವಿದು'' ಎಂದಿದ್ದಾರೆ. ಇನ್ನು ಹಿರಿಯ ಕಲಾವಿದ ಜಯರಾಮ್ ಮಾತನಾಡಿ ರಾಜ್ಯದ ಮನೆ ಮಾತಾಗಿರುವ ಸೆಂಚುರಿ ಗೌಡ ಹಾಗೂ ಗಡ್ಡಪ್ಪನಂತಹ ಹಿರಿಯ ನೈಜ, ಮುಗ್ಧ ಕಲಾವಿದರೊಂದಿಗೆ ಅಭಿನಯಿಸದಿದ್ದರೆ ಏನೋ ಕಳೆದುಕೊಂಡತ ಭಾವ ಮೂಡುತ್ತಿತ್ತು, ಅದನ್ನು ಹಾಲು ತುಪ್ಪ ಚಿತ್ರ ನೀಗಿಸಿದ್ದು, ಸೆಂಚುರಿ ಗೌಡರ ಮಗನ ಪಾತ್ರ ನಿರ್ವಹಿಸುವ ಮೂಲಕ ತೃಪ್ತಿ ತಂದಿದೆ ಎಂದಿದ್ದಾರೆ.

'ಹಾಲು ತುಪ್ಪ' ಚಿತ್ರದ ಬಗ್ಗೆ

ಅಕ್ಟೋಬರ್ 13ರಂದು ರಾಜ್ಯಾದ್ಯಂತ 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಾಲು ತುಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಪವನ್ ಸೂರ್ಯ ನಾಯಕನಾಗಿದ್ದು, ಸಮಿತಾ ವಿನಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ, ಸೆಂಚುರಿಗೌಡ, ಗಡ್ಡಪ್ಪ, ಜಯರಾಮ್, ಕಲ್ಕರೆ ಗಂಗಾಧರ್ ನಂತಹ ಹಿರಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಂದ್ರಸೇನಾ ರಾಗಸಂಯೋಜಿಸಿದ್ದು, ಗುರುಕಿರಣ್, ಲತಾ ಹಂಸಲೇಖ, ದಿ.ಎಲ್.ಎನ್.ಶಾಸ್ತ್ರಿ, ಇಂದೂ ನಾಗರಾಜ್ ಹಿನ್ನಲೆ ಧ್ವನಿಯಲ್ಲಿ ಹಾಡುಗಳು ಮೂಡಿವೆ ಎಂದು ತಿಳಿಸಿದರು.

English summary
Kannada Actor Century Gowda Has Expressed His displeasure against 'Haalu Thuppa' Movie Team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada