'ಚಾಲಿ ಪೋಲಿಲು' ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆ
ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ಪ್ರಥಮ ತುಳು ಸಿನಿಮಾ `ಚಾಲಿ ಪೋಲಿಲು' ತೆರೆಯೇರಲು ದಿನಗಣನೆ ಆರಂಭವಾಗಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ, ಇದು ಕುಟುಂಬ ಸಮೇತ ನೋಡಬಹುದಾದ ಒಂದು ಉತ್ತಮ ಚಿತ್ರ ಎಂದು 'ಯು' ಸರ್ಟಿಫಿಕೆಟ್ ನೀಡಿದೆ.
ಹೀರೋ ಇಲ್ಲದ ಒಂದು ಭಿನ್ನ ಚಿತ್ರವಾಗಿರುವ 'ಚಾಲಿ ಪೋಲಿಲು' ಬಿಡುಗಡೆ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದ್ದು, ಎಲ್ಲರೂ ಸಿನಿಮಾ ಯಾವಾಗ ಬಿಡುಗಡೆ ಎಂದು ಕೇಳುವಂಥ ವಾತಾವರಣ ನಿರ್ಮಿಸಿದೆ. ವಾಟ್ಸಾಫ್, ಫೇಸ್ ಬುಕ್ ಗಳಲ್ಲಿ ಈ ಸಿನಿಮಾದ ಬಗ್ಗೆ ಸಾಕಷ್ಟು ಪಾಸಿಟಿವ್ ಅಭಿಪ್ರಾಯಗಳು ವಿನಿಮಯವಾಗುತ್ತಿದೆ. [ಹಲವು ಪ್ರಥಮಗಳ ತುಳು ಸಿನಿಮಾ 'ಚಾಲಿ ಪೋಲಿಲು']

ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರ್ ಪೂರ್ಣ ಪ್ರಮಾಣದ ಪಾತ್ರದಲ್ಲಿ ಅಭಿನಯಿಸಿದ್ದು, ಇವರಿಗೆ ಅರವಿಂದ ಬೋಳಾರ್, ಸುಂದರ ರೈ ಮಂದಾರ ಸಾಥ್ ನೀಡಿದ್ದಾರೆ. ಮನೋರಂಜನೆಗೆ ಏನೆಲ್ಲ ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿದೆ.
ಪ್ರೇಕ್ಷಕರು ಬಯಸುವಂಥದ್ದೆಲ್ಲವೂ ಇದರಲ್ಲಿದೆ. ನವಿರಾದ, ದ್ವಂದ್ವಾರ್ಥವಿಲ್ಲದ ಗುಣಮಟ್ಟದ ಹಾಸ್ಯ, ಸಾಮಾಜಿಕ ಆಗುಹೋಗುಗಳ ವಿಡಂಬನೆ, ಒಂದು ಉತ್ತಮ ಕಥೆ, ಅದಕ್ಕಿಂತಲೂ ಉತ್ತಮ ಸಂದೇಶವನ್ನು ಹೊತ್ತು ತರುವ ಈ ಸಿನಿಮಾವು ಕೆಲವೇ ದಿನಗಳಲ್ಲಿ ತೆರೆಯಲ್ಲಿ ಮೂಡಿಬರಲಿವೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











