For Quick Alerts
  ALLOW NOTIFICATIONS  
  For Daily Alerts

  ರಿವಿಲ್ ಆಯ್ತು 'ಚಕ್ರವರ್ತಿ'ಯಲ್ಲಿ ದರ್ಶನ್ ಕಹಾನಿ!

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದ ಬಿಡುಗಡೆ ಯಾವಾಗ ಎಂಬ ಅಂತೆ ಕಂತೆಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಈಗ ಈ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಡಿಸೆಂಬರ್ ನಲ್ಲಿ ದರ್ಶನ್ ಧಮಾಕ ಗ್ಯಾರೆಂಟಿ ಎಂದು ಚಿತ್ರತಂಡ ಬಹಿರಂಗ ಪಡಿಸಿದೆ.

  ದರ್ಶನ್ ಅಭಿನಯದ 'ಚಕ್ರವರ್ತಿ' ಹಲವು ವಿಚಾರಗಳಿಗೆ ತುಂಬಾ ಸ್ಪೆಷಲ್ ಎನಿಸಿಕೊಂಡಿದೆ. ದರ್ಶನ್ ಅವರ ಗೆಟಪ್ ಗಳು ಈಗಾಗಲೇ ಅಭಿಮಾನಿಗಳ ಎದೆ ಬಡಿತವನ್ನ ಹೆಚ್ಚಿಸಿದೆ. ಚಿತ್ರದ ಫಸ್ಟ್ ಪೋಸ್ಟರ್ ನಿಂದ ಹಿಡಿದು, ದೀಪಾವಳಿ ಹಬ್ಬಕ್ಕೆ ರಿಲೀಸ್ ಆದ ಕೊನೆ ಪೋಸ್ಟರ್ ವರೆಗೂ ಗಾಂಧಿನಗರದಲ್ಲಿ 'ಚಕ್ರವರ್ತಿ' ಚಿತ್ರದ್ದೇ ಸೌಂಡ್.[ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?]

  ಸತತವಾಗಿ ಫಾರಿನ್ ನಲ್ಲಿ ಶೂಟಿಂಗ್ ಮಾಡುತ್ತಿರುವ 'ಚಕ್ರವರ್ತಿ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ದರ್ಶನ್ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಅಭಿನಯದ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಅಣಜಿ ನಾಗರಾಜ್ 'ಚಕ್ರವರ್ತಿ' ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮುಂದೆ ಓದಿ....

  ಡಿಸೆಂಬರ್ ನಲ್ಲಿ 'ಚಕ್ರವರ್ತಿ' ಪಕ್ಕಾ!

  ಡಿಸೆಂಬರ್ ನಲ್ಲಿ 'ಚಕ್ರವರ್ತಿ' ಪಕ್ಕಾ!

  ಈ ವರ್ಷದ ಅಂತ್ಯಕ್ಕೆ 'ಚಕ್ರವರ್ತಿ'ಯನ್ನ ತೆರೆಮೇಲೆ ತರುವ ಯೋಚನೆಯಲ್ಲಿದ್ದ ನಿರ್ದೇಶಕ ಚಿಂತನ್, ಅಂದುಕೊಂಡಂತೆ ಡಿಸೆಂಬರ್ ನಲ್ಲಿ ಪ್ರೇಕ್ಷಕರೆದುರು ಬರಲಿದ್ದಾರಂತೆ. ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಈ ವಿಷ್ಯವನ್ನ ಕನ್‌ಫರ್ಮ್ ಮಾಡಿದ್ದು, ಡಿಸೆಂಬರ್ 23 ರಂದು ರಾಜ್ಯಾದ್ಯಂತ 'ಚಕ್ರವರ್ತಿ'ಯ ಅಬ್ಬರ ಶುರುವಾಗಲಿದೆಯಂತೆ.['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]

  ಡಬಲ್ ಶೇಡ್ ನಲ್ಲಿ ದರ್ಶನ್

  ಡಬಲ್ ಶೇಡ್ ನಲ್ಲಿ ದರ್ಶನ್

  ಅಂದ್ಹಾಗೆ, 'ಚಕ್ರವರ್ತಿ' 80ರ ದಶಕದ ನೈಜಕಥೆಯಾಧರಿತ ಸಿನಿಮಾವಾಗಿದ್ದು, ಇಲ್ಲಿ ದರ್ಶನ್ ಅವರದ್ದು ಡಾನ್ ಪಾತ್ರವಂತೆ. ಚಿತ್ರದಲ್ಲಿ ದರ್ಶನ್ ಎರಡು ವಿಭಿನ್ನ ಶೇಡ್ ಗಳನ್ನ ಮಾಡಿದ್ದಾರಂತೆ. ಮೊದಲರ್ಧದಲ್ಲಿ ಬೆಲ್ ಬಾಟಮ್ ಫ್ಯಾಂಟ್, ತೊಟ್ಟು ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡ್ರೆ, ದ್ವಿತೀಯಾರ್ಧದಲ್ಲಿ ಹೇರ್ ಗೆ ಕಲರ್ ಮಾಡಿಸಿ, ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ ಮಿಂಚಲಿದ್ದಾರಂತೆ.[ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ]

  'ಥೈಲ್ಯಾಂಡ್'ನಲ್ಲಿ ಚಕ್ರವರ್ತಿ

  'ಥೈಲ್ಯಾಂಡ್'ನಲ್ಲಿ ಚಕ್ರವರ್ತಿ

  ಬ್ಯಾಂಕಾಕ್, ಮಲೇಶಿಯಾ, ಸಿಂಗಾಪೂರ್ ಅಂತಹ ದೇಶಗಳಲ್ಲಿ ಚಿತ್ರೀಕರಣ ಮಾಡಿರುವ 'ಚಕ್ರವರ್ತಿ', ಸದ್ಯ, ಥೈಲ್ಯಾಂಡ್ ನಲ್ಲಿದೆಯಂತೆ. ಈ ವಾರ ಶೂಟಿಂಗ್ ಮುಗಿಸಿ ಥೈಲ್ಯಾಂಡ್ ನಿಂದ ವಾಪಸ್ಸಾಗಲಿದ್ದಾರಂತೆ.

  ಪೋಸ್ಟ್ ಪ್ರೊಡಕ್ಷನ್

  ಪೋಸ್ಟ್ ಪ್ರೊಡಕ್ಷನ್

  ಆಲ್ ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಚಕ್ರವರ್ತಿ' ಈ ತಿಂಗಳ ಅಂತ್ಯಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆಯಲ್ಲಿದೆ. ಅದಾದ ನಂತರ ಪೋಸ್ಟ್ ಪ್ರೊಡಕ್ಷನ್ ಮುಗಿಸಲಿದ್ದು, ಸುಸೂತ್ರವಾಗಿ ಡಿಸೆಂಬರ್ 23ಕ್ಕೆ ಚಿತ್ರಮಂದಿರ ಪ್ರವೇಶ ಮಾಡುವ ಪ್ಲಾನ್ ನಲ್ಲಿದೆ.[ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.]

  'ಚಕ್ರವರ್ತಿ' ಹೊಸ ಪೋಸ್ಟರ್

  'ಚಕ್ರವರ್ತಿ' ಹೊಸ ಪೋಸ್ಟರ್

  ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ 'ಚಕ್ರವರ್ತಿ' ಚಿತ್ರದ ಪೊಸ್ಟರ್ ಗಳು ಸಖತ್ ಟ್ರೆಂಡ್ ಹುಟ್ಟುಹಾಕಿವೆ. ಇತ್ತೀಚಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಹೊಸ ಪೋಸ್ಟರ್ ಕೂಡ ದರ್ಶನ್ ಅವರ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

  ಮಲ್ಟಿಸ್ಟಾರ್ ಕಾಸ್ಟಿಂಗ್

  ಮಲ್ಟಿಸ್ಟಾರ್ ಕಾಸ್ಟಿಂಗ್

  'ಚಕ್ರವರ್ತಿ' ಇಷ್ಟೊಂದು ಕುತೂಹಲ ಹುಟ್ಟುಹಾಕಲು ಮತ್ತೊಂದು ಕಾರಣ ಚಿತ್ರದಲ್ಲಿರುವ ಬಹುದೊಡ್ಡ ತಾರಬಳಗ. ಇದೇ ಮೊದಲ ಬಾರಿಗೆ ದರ್ಶನ್ ಜೊತೆ ದಿನಕರ್ ತೂಗುದೀಪ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ದೀಪಾ ಸನ್ನಿಧಿ, ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಆದಿತ್ಯ ಸೇರಿದಂತೆ ದೊಡ್ಡ ತಾರಾಬಳಗ 'ಚಕ್ರವರ್ತಿ' ಚಿತ್ರದಲ್ಲಿದೆ..

  English summary
  Producer Anaji Nagaraj has confirmed that Darshan's new film Chakravarthy directed by Chintan will release on December 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X