Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಹೊಸ ಕಾರಿನ ಬೆಲೆ ಎಷ್ಟು? ದಾಸನ ಐಷಾರಾಮಿ ಕಾರುಗಳ ಲಿಸ್ಟ್ ಇಲ್ಲಿದೆ!
ಸಿನಿಮಾ ತಾರೆಯರ ವೈಯಕ್ತಿಕ ಬದುಕಿನ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇರುತ್ತದೆ. ಅವರ ಯಾವ ಕಾರ್ ಬಳಸುತ್ತಾರೆ. ಯಾವ ಬ್ರ್ಯಾಂಡ್ ಬಟ್ಟೆ ಹಾಕುತ್ತಾರೆ. ಅವರ ಮನೆ ಹೇಗಿದೆ? ಎಂಬೆಲ್ಲ ವಿಚಾರಗಳ ಬಗ್ಗೆ ಕುತೂಹಲ ಇದ್ದೇ ಇರುತ್ತೆ. ಇನ್ನು ಸಿನಿಮಾ ತಾರೆಯ ಕಾರ್ ಕ್ರೇಜ್ ಬಗ್ಗೆ ಆಗಾಗ ಸುದ್ದಿ ಆಗುತ್ತಿರುತ್ತೆ. ಕನ್ನಡದ ಹಲವು ನಟರು ತಮ್ಮ ಐಷಾರಾಮಿ ಕಾರುಗಳಿಂದಲೇ ಸುದ್ಧಿಯಾಗುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಕಾರು ಕ್ರೇಜ್ ಇರುವ ನಟರು ಕಡಿಮೆ. ಆದರೆ ಹೆಚ್ಚಿನ ಕಾರು ಕ್ರೇಜ್ ಇರೋದು ನಟ ದರ್ಶನ್‌ಗೆ. ಇದು ಗೊತ್ತಿರುವ ವಿಚಾರವೇ. ಹಲವು ಬಾರಿ ದುಬಾರಿ ಕಾರುಗಳನ್ನು ಖರೀದಿ ಮಾಡಿಯೇ ದರ್ಶನ್ ಸುದ್ದಿಯಾಗಿದ್ದಾರೆ.
ದರ್ಶನ್
ನಟನೆಯ
'ಕ್ರಾಂತಿ'
ರಿಲೀಸ್ಗೆ
ಮುಹೂರ್ತ
ಫಿಕ್ಸ್!
ಈಗ ನಟ ದರ್ಶನ್ ಮತ್ತೆ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ. ಮತ್ತೊಂದು ದುಬಾರಿ ಕಾರಿನ ಒಡೆಯ ಆಗಿದ್ದಾರೆ ದರ್ಶನ್. ಹಾಗಿದ್ದರೆ ದರ್ಶನ್ ಬಳಿ ಇರುವ ದುಬಾರಿ ಕಾರುಗಳು ಯಾವುವು? ಈಗ ದರ್ಶನ್ ಖರೀದಿಸಿ ಕಾರು ಯಾವುದು? ಎನ್ನುವ ಬಗ್ಗೆ ಸುದ್ದಿ ಇಲ್ಲಿದೆ. ಮುಂದೆ ಓದಿ...

ದರ್ಶನ್ ಮನೆ ಸೇರಿದ ಲ್ಯಾಂಡ್ ರೋವರ್ ಡಿಫೆಂಡರ್!
ನಟ ದರ್ಶನ್ ಸದ್ಯ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ.ಇದು ಕೂಡ ದುಬಾರಿ ಐಷಾರಾಮಿ ಕಾರುಗಳಲ್ಲಿ ಒಂದು. ದರ್ಶನ್ ಖರೀದಿಸಿರುವ ಹೊಸ ಕಾರಿನ ಹೆಸರು 'ಲ್ಯಾಂಡ್ ರೋವರ್ ಡಿಫೆಂಡರ್'. ಇದು 2022ರ ಮಾಡಲ್. ಈ ಕಾರಿನ ಮೊತ್ತ 1.20 ಕೋಟಿ ರೂ. ಇದುವೇ ದರ್ಶನ್ ಅವರ ಕಾರುಗಳ ಲಿಸ್ಟ್ ಸೇರಿರುವ ಹೊಸ ಕಾರು. ಈ ಕಾರಿನಲ್ಲಿ ದರ್ಶನ್ ರೈಡ್ ಹೋಗಿದ್ದು, ಅ ಫೋಟೊಗಳು ಮತ್ತು ವಿಡಿಯೋ ವೈರಲ್ ಆಗಿವೆ.
Exclusive:
ದರ್ಶನ್
ಬೇರೆ
ಸಿನಿಮಾದಲ್ಲಿ
ತರುಣ್
ಬ್ಯುಸಿ:
'ಸಿಂಧೂರ
ಲಕ್ಷಣ'ದ
ಕಥೆಯೇನು?

'ಜಾಗ್ವಾರ್', ಪೋರ್ಶೆ ಕಾರಿನ ಒಡೆಯ!
ದರ್ಶನ್ ಬಳಿ ನೀಲಿ ಬಣ್ಣದ ಜಾಗ್ವಾರ್ ಕಾರ್ ಇದೆ. ಇದು ಪತ್ನಿ ವಿಜಯಲಕ್ಷ್ಮಿ, ತಮ್ಮ ಪ್ರೀತಿಯ ಪತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದರು. ಇನ್ನು ದುಬಾರಿ ಕಾರುಗಳಲ್ಲಿ ಒಂದಾದ ಪೋರ್ಶೆ ಕಾರು ಕೂಡ ದರ್ಶನ್ ಬಳಿ ಇದೆ. ಈ ಕಾರನ್ನು ನಿರ್ಮಾಪಕ ಸಂದೇಶ ನಾಗರಾಜ್ ದರ್ಶನ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರು.

ಆಡಿ ಕ್ಯೂ 7 ಮಾಲೀಕ ನಟ ದರ್ಶನ್!
ನಟ ದರ್ಶನ್ ಬಳಿ ಎರಡು ಆಡಿ ಕಾರುಗಳಿವೆ. ಕಪ್ಪು ಬಣ್ಣ ಹಾಗೂ ಬಿಳಿ ಬಣ್ಣದ ಆಡಿ ಕಾರ್‌ಗಳು ದಾಸನ ಬಳಿ ಇವೆ. ಒಂದನ್ನು ಪತ್ನಿ ವಿಜಯಲಕ್ಷ್ಮಿ ಬಳಸುತ್ತಿದ್ದರು. ಇನ್ನೊಂದು ದರ್ಶನ್ ಬಳಸುತ್ತಿದ್ದರು. ಇನ್ನು ದರ್ಶನ್ ಅವರ ಮನೆಯಲ್ಲಿ i 20 ಕಾರ್ ಕೂಡ ಇದೆ. ಈ ಕಾರನ್ನು ದರ್ಶನ್ ಅವರ ಮಗ ವಿನೀಶ್ ಮಾತ್ರ ಬಳಸುತ್ತಾರೆ. ಫಾರ್ಚೂನರ್ ಮತ್ತು ಬೆಂಜ್ ಕಾರುಗಳು ಕೂಡ ದರ್ಶನ್ ಬಳಿ ಇವೆ.
ಚಾರ್ಲಿಯ
ಹಳೆ
ಗೆಳೆಯ
ದರ್ಶನ್:
ಸೋಶಿಯಲ್
ಮೀಡಿಯಾದಲ್ಲಿ
ವಿಡಿಯೋ
ವೈರಲ್!

ರೇಂಜ್ ರೋವರ್, ಮಿನಿ ಕೂಪರ್ ಕಾರುಗಳಿವೆ!
ಚಾಲೆಂಜಿಂಗ್ ಸ್ಟಾರ್ ದರ್ಶನ ಬಳಿ ರೇಂಜ್ ರೋವರ್ ಕಾರು ಕೂಡ ಇದೆ ಎನ್ನಲಾಗಿದೆ. ಆಯುಧ ಪೂಜೆ ವೇಳೆ ಈ ಕಾರು ಮನೆಯ ಮುಂದೆ ನಿಂತಿತ್ತು. ಇಷ್ಟೆಲ್ಲಾ ಕಾರುಗಳನ್ನು ಹೊಂದಿರುವ ದರ್ಶನ್ ಬಳಿ ದುಬಾರಿ ಮಿನಿ ಕಾರು 'ಮಿನಿಕೂಪರ್' ಕೂಡ ಇದೆ. ಈ ಕಾರಿನಲ್ಲಿ ಕೂಡ ನಟ ದರ್ಶನ್ ಆಗಾಗ ಸುತ್ತಾಡುತ್ತಾ ಇರುತ್ತಾರೆ. ಇನ್ನು ದರ್ಶನ್ 'ಹಮ್ಮರ್' ಕಾರನ್ನು ದುಬೈನಿಂತ ತರಿಸಿದ್ದು, ಅದನ್ನು ಮಾರಿದ್ದಾರೆ ಎನ್ನುಲಾಗಿದೆ.

ದರ್ಶನ್ ಬಳಿ ಲಂಬೋರ್ಗಿನಿ ಕಾರು
ದರ್ಶನ್ ಅವ್ರ ಬಳಿ ಇರುವ ಅತ್ಯಂತ ದುಬಾರಿ ಕಾರು ಎಂದರೆ ಅದು ಲಂಬೋರ್ಗಿನಿ. ಈ ಕಾರನ್ನು ದರ್ಶನ್ 2018ರಲ್ಲಿ ಖರೀದಿ ಮಾಡಿದ್ದಾರೆ. ನಟ ದರ್ಶನ್‌ಗೆ ಕಾರು ಕ್ರೇಜ್ ಇರುವುದರಿಂದ ಮಾರುಕಟ್ಟೆಗೆ ಬರುವ ಹೊಸ ಕಾರುಗಳನ್ನು ಆಗಾಗ ಖರೀದಿ ಮಾಡುತ್ತಾ ಇರುತ್ತಾರೆ. ಆದರೆ ಇಷ್ಟು ಕಾರುಗಳಲ್ಲಿ ಸದ್ಯ ಯಾವ ಕಾರುಗಳು ದರ್ಶನ್ ಬಳಿ ಇವೆ ಎನ್ನುವ ಖಚಿತ ಪಟ್ಟಿ ಇಲ್ಲ.