For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ಗೆ ಹಾರ್ಲೆ ಡೇವಿಡ್ಸನ್ ಉಡುಗೊರೆ

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಗೆಲುವಿನ ಅಲೆಯಲ್ಲಿ ತೇಲಾಡಿದ್ದಾರೆ. ಅವರ ಅಭಿನಯದ 'ಬುಲ್ ಬುಲ್' ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. ಇದೇ ಖುಷಿಯಲ್ಲಿರುವ ಚಿತ್ರದ ನಿರ್ಮಾಪಕರು ಅವರಿಗೆ ಒಂದು ಸಣ್ಣ ಉಡುಗೊರೆಯನ್ನು ಕೊಡಲು ಮುಂದಾಗಿದ್ದಾರೆ.

  ಸುಮಾರು ರು.20 ಲಕ್ಷ ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಬೈಕನ್ನು ಗಿಫ್ಟ್ ಕೊಡಲಿದ್ದಾರೆ ನಿರ್ಮಾಪಕರು. 'ಬುಲ್ ಬುಲ್' ಚಿತ್ರವನ್ನು ವಿ.ಹರಿಕೃಷ್ಣ, ಎಂಡಿ ಶ್ರೀಧರ್, ಕೃಷ್ಣಕುಮಾರ್, ಕವಿರಾಜ್ ಹಾಗೂ ದಿನಕರ್ ತೂಗುದೀಪ ಅವರು ಸೇರಿ ನಿರ್ಮಿಸಿದ್ದರು.

  ಈಗ ಇವರೆಲ್ಲರೂ ಬುಲ್ ಬುಲ್ ಚಿತ್ರ ಗೆದ್ದ ಸಂತಸದಲ್ಲಿದ್ದು ಜೇಬಿಗೆ ಒಂದಷ್ಟು ಲಾಭವೂ ಬಂದಿದೆ. ಹಾಗಾಗಿ ಇವರೆಲ್ಲರೂ ಸೇರಿ ಈ ದುಬಾರಿ ಬೈಕನ್ನು ದರ್ಶನ್ ಗೆ ಉಡುಗೊರೆಯಾಗಿ ಕೊಡುತ್ತಿದ್ದಾರೆ. 1,700 ಸಿಸಿ ಬೈಕ್ ಇದಾಗಿದ್ದು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಹಾರ್ಲೆ ಡೇವಿಡ್ಸನ್ ಶೋ ರೂಂನಲ್ಲಿ ಖರೀದಿಸಲಾಗಿದೆ.

  ಇದೇ ಜುಲೈ 12ರಂದು ನಡೆಯುವ 'ಬುಲ್ ಬುಲ್' ಐವತ್ತನೇ ದಿನದ ಸಂಭ್ರಮದಲ್ಲಿ ಈ ಬೈಕ್ ಕೀ ದರ್ಶನ್ ಕೈಗೆ ನೀಡಲಿದ್ದಾರೆ. ಕ್ರೂಸರ್ ಬೈಕ್ಸ್ ಗಳ ಅತಿದೊಡ್ಡ ಅಭಿಮಾನಿಯಾಗಿರುವ ದರ್ಶನ್ ಅವರ ಗ್ಯಾರೇಜ್ ನಲ್ಲಿ ಇಂಟ್ರೂಡರ್ ಹಾಗೂ ಹಯಬುಸದಂತಹ ದುಬಾರಿ ಬೈಕ್ ಗಳು ಇವೆ.

  ಈ ಹಿಂದೆ ದರ್ಶನ್ ಗೆ ಅವರ ಪತ್ನಿ ವಿಜಯಲಕ್ಷ್ಮಿ ಐಶಾರಾಮಿ ಜಾಗ್ವಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇಷ್ಟಕ್ಕೂ ದರ್ಶನ್ ಗೆ ಟೂ ವ್ಹೀಲರ್ ಏನೋ ಗಿಫ್ಟ್ ಆಗಿ ಸಿಗುತ್ತಿದೆ. ಆದರೆ ಅದರಲ್ಲಿ ಹೆಂಡತಿ ಮಕ್ಕಳನ್ನು ಕೂರಿಸಿಕೊಂಡು ತಿರುಗಾಡಲು ಸಾಧ್ಯವಾಗುತ್ತದೆಯೇ? ಎಂಬ ಪ್ರಶ್ನೆ ಅಭಿಮಾನಿಗಳದು. (ಏಜೆನ್ಸೀಸ್)

  English summary
  Kannada film Bul Bul produces presenting a Harley Davidson bike worth Rs 20 lakh to Challenging Star Darshan. the 1,700 cc, 2013 edition Harley Davidson Heritage Softail Classic will be presented on 12th July in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X