»   » ಮುರಳಿ ಉಗ್ರಂ 'ದರ್ಶನ'ಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್

ಮುರಳಿ ಉಗ್ರಂ 'ದರ್ಶನ'ಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್

By: ಜೀವನರಸಿಕ
Subscribe to Filmibeat Kannada

ಶ್ರೀಮುರಳಿ ಆಕ್ಟ್ ಮಾಡಿರೋ 'ಉಗ್ರಂ' ಸಿನಿಮಾ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಇದೇ ಫೆಬ್ರವರಿ 21ಕ್ಕೆ ಥಿಯೇಟರ್ ಗೆ ಲಗ್ಗೆ ಇಡಲಿರೋ 'ಉಗ್ರಂ'ನ ಅಟ್ಟಹಾಸದ ಟ್ರೈಲರ್ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಗಳನ್ನ ಹುಟ್ಟುಹಾಕಿತ್ತು. 'ಉಗ್ರಂ' ಟ್ರೇಲರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದ್ಸಾರಿ ಸಿನಿಮಾ ನೋಡ್ಬೇಕು ಅನ್ನೋ ನಿರೀಕ್ಷೆ ಇಟ್ಟಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ಸಖತ್ ಥ್ರಿಲ್ಲಿಂಗ್ ಅನ್ನಿಸೋ ಅಂಶಗಳನ್ನ ತನ್ನೊಳಗೇ ಬಚ್ಚಿಟ್ಟುಕೊಂಡಿದೆ. ಇದು ಭೂಗತಲೋಕದ ರಿಯಲ್ ಸ್ಟೋರಿಗಳಿಗೆ ಹಿಡಿದಿರೋ ಕನ್ನಡಿ. ಚಿತ್ರಕ್ಕೆ ರಾಮ್ ಲೀಲಾದಂತಹಾ ಸಿನಿಮಾಗೆ ಸಿನಿಮಾಟೋಗ್ರಫರ್ ಆಗಿದ್ದ ರವಿವರ್ಮನ್ ಅವರ ಕ್ಯಾಮೆರಾ ಕಮಾಲ್ ಇದೆ.

ಶ್ರೀಮುರಳಿ ರೆಬೆಲ್ ಕ್ಯಾರೆಕ್ಟರ್ ನಲ್ಲಿ ಅಬ್ಬರಿಸಿದ್ದಾರೆ. 'ಉಗ್ರಂ' ಸಿನಿಮಾ ಮಾಡೋಕೆ ಎರಡು ವರ್ಷ ತೆಗೆದುಕೊಂಡಿರೋ ಚಿತ್ರತಂಡ ಅಚ್ಚುಕಟ್ಟಾಗಿ ಸಿನಿಮಾ ಮಾಡಿದೆ. ಈಗ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಪ್ರೇಕ್ಷಕರು ಮಾತ್ರ ಹಾಗಂದುಕೊಂಡಿದ್ದಾರೆ ಅನ್ಕೋಬೇಡಿ ಉಗ್ರಂ ಸಿನಿಮಾಗೆ ಸ್ಯಾಂಡಲ್ವುಡ್ನ ಸ್ಟಾರ್ಗಳ ಸಾಥ್ ಕೂಡ ಇದೆ.

ಉಗ್ರಂ ಬಿಸಿ ಬಿರಿಯಾನಿ ಅಂತಾರೆ ದರ್ಶನ್

ಸಿನಿಮಾವೊಂದಕ್ಕೆ ಬೇಕಾದ ಅಷ್ಟೂ ಮಸಾಲೆಗಳನ್ನ ಇಟ್ಕೊಂಡು ರೆಡಿಮಾಡಿದ ಸಾಂಬಾರಿನ ತರಹ ಇದೆ. ಉಗ್ರಂ ಬಿಸಿ ಬಿಸಿ ಬಿರಿಯಾನಿ. ಹಾಗಂತ ಒಪ್ಪಿಕೊಂಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಉಗ್ರಂನಲ್ಲಿ ಪವರ್ ಇದೆ

ಸಿನಿಮಾದಲ್ಲಿ ಪವರ್ ಇದೆ ಅಂತ ಒಪ್ಪಿಕೊಳ್ಳೋದರ ಜೊತೆಗೆ ಚಿತ್ರವನ್ನ ತಾವೇ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಷನ್ ಸಾಥ್ ಚಿತ್ರಕ್ಕಿರೋದು ಆನೆಬಲ ಬಂದಂತಾಗಿದೆ.

ಉಗ್ರಂ ಒಂದು ರಾಕಿಂಗ್ ಸಿನಿಮಾ

ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ವಾರೆವ್ಹಾ ಅಂದಿದ್ದಾರೆ. ನಾವು ಮಾಡೋ ಸಿನಿಮಾಗಳಗಿಂತ ಹತ್ತು ವರ್ಷ ಮುಂದೆ ಹೋಗಿ ಸಿನಿಮಾ ಮಾಡಿದ ಹಾಗಿದೆ. ಅನ್ನೋ ಮಾತನ್ನಾಡಿದ್ದಾರೆ.

ಫೋರ್ಸ್ ಇದೆ ಅಂತಾರೆ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಗೆ ಸಿನಿಮಾದ ಟ್ರೇಲರ್ ನೋಡಿದಾಗ ಸಿನಿಮಾವನ್ನ ಇಷ್ಟಪಟ್ಟು ಮಾಡಿದ್ದಾರೆ ಅನ್ನಿಸಿದೆಯಂತೆ. ಚಿತ್ರದಲ್ಲಿ ಒಂದು ಫೋರ್ಸ್ ಇದೆ ಅಂತ ಕಿಚ್ಚ ಉಗ್ರಂಗೆ ಜೈ ಅಂದಿದ್ದಾರೆ.

ತಮ್ಮ ಗೆಲ್ಲೋ ನಿರೀಕ್ಷೆ

ಶ್ರೀಮುರಳಿ ಅಣ್ಣ ವಿಜಯ್ ರಾಘವೇಂದ್ರ ತಮ್ಮನಿಗೆ ಮೂರು ವರ್ಷಗಳ ನಂತರ ಬ್ರೇಕ್ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ. ಪ್ರತೀ ಫ್ರೇಂಗಳು ಥ್ರಿಲ್ ಕೊಡ್ತವೆ ಅನ್ನೋ ಅಭಿಪ್ರಾಯ ವಿಜಯ್ ರಾಘವೇಂದ್ರರದ್ದು.

ಉಗ್ರಂ ನೋಡೋಕೆ ಕಾದಿದ್ದಾರೆ ಶರಣ್

ಕಾಮಿಡಿ ರ್ಯಾಂಬೋ ಶರಣ್ ಕೂಡ ಮುರಳಿಯ ಉಗ್ರಂ ರೂಪಕ್ಕೆ ಜೈ ಅಂದಿದ್ದಾರೆ. ಉಗ್ರಂ ಸಿನಿಮಾದ ಟ್ರೇಲರ್ ನೋಡೋಕೇ ಇಷ್ಟು ಥ್ರಿಲ್ಲಿಂಗ್ ಆಗಿದೆ. ಇನ್ನು ಸಿನಿಮಾಗಾಗಿ ಕಾಯ್ತಿದ್ದೀನಿ ಅಂತಾರೆ.

ನೀವೂ ಉಗ್ರಂ ಟ್ರೇಲರ್ ನೋಡಿ

ಸ್ಟಾರ್ ಗಳು ಇಷ್ಟೆಲ್ಲಾ ಹೊಗಳೋಕೆ ಸಿನಿಮಾದ ಕುತೂಹಲ ಮೂಡಿಸೋ ಟ್ರೇಲರೇ ಕಾರಣ. ಸೋ ಆ ಟ್ರೇಲರನ್ನ ನೀವೂ ಒಂದ್ಸಾರಿ ನೋಡಿ.

English summary
Challenging Star Darshan join hands with Sri Murali upcoming movie Ugramm, which is an action drama, written and directed by Prashanth Neel under the banner of Inkfinite Pictures. Cinematography by Ravi Varman.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada