»   » ಹನುಮ ಗೀತೆ ಹಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸರ್ಜಾ ಫ್ಯಾಮಿಲಿ

ಹನುಮ ಗೀತೆ ಹಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸರ್ಜಾ ಫ್ಯಾಮಿಲಿ

Posted By:
Subscribe to Filmibeat Kannada
ಪ್ರೇಮ ಬರಹದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಜೊತೆ ದರ್ಶನ್ ಸಾಥ್ | Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರೇಮ ಬರಹ' ಸಿನಿಮಾ ಚಿತ್ರೀಕರಣ ಮುಗಿಸಿ ತೆರೆಗೆ ಬರೋದಕ್ಕೆ ಸಿದ್ದವಾಗುತ್ತಿದೆ. ನಟಿ ಐಶ್ವರ್ಯ ಸರ್ಜಾರನ್ನ ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುತ್ತಿರುವ ಅರ್ಜುನ್ ಸರ್ಜಾ, ಸಿನಿಮಾವನ್ನ ವಿಭಿನ್ನವಾಗಿ ಪ್ರಮೋಷನ್ ಮಾಡೋದಕ್ಕೆ ಶುರು ಮಾಡಿದ್ದಾರೆ.

ಅಭಿಮಾನಿಗಳಿಗೆ ಟ್ಯೂನ್ ಸ್ಮ್ಯಾಶ್ ಕಾಂಪಿಟೇಷನ್ ಕೊಟ್ಟು ಒಂದು ಹಾಡನ್ನ ಅವರಿಂದಲೇ ಬರೆಸಿರುವ ಅರ್ಜುನ್ ಸರ್ಜಾ 'ಪ್ರೇಮ ಬರಹ' ಸಿನಿಮಾದ ಕೊನೆಯ ಹಾಡಿನ ಚಿತ್ರೀಕರಣ ಮಾಡಲು ಸಿದ್ದತೆ ನಡೆಸಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ತೂಗುದೀಪ ಫ್ಯಾಮಿಲಿಯ ಚಾಲೆಂಜಿಂಗ್ ಸ್ಟಾರ್ ಹಾಗೂ ಸರ್ಜಾ ಕುಟುಂಬದ ಮೂವರು ನಾಯಕರು ಭಾಗಿಯಾಗಲಿದ್ದಾರೆ.

ಹನುಮನ ಮಂತ್ರ ಜಪಿಸಲು ತಯಾರಿ

ಐಶ್ವರ್ಯ ಸರ್ಜಾ ಹಾಗೂ ಚಂದನ್ ಅಭಿನಯದ 'ಪ್ರೇಮ ಬರಹ' ಸಿನಿಮಾದ ಕೊನೆಯ ಹಾಡಿನ ಚಿತ್ರೀಕರಣ ಮಾಡಲು ಸಿನಿಮಾತಂಡ ತಯಾರಿ ಮಾಡಿಕೊಂಡಿದೆ. ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್ ಸರ್ಜಾ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ.

ಅದ್ದೂರಿ ಚಿತ್ರೀಕರಣ

ಈ ಹಾಡನ್ನ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಲು ನಟ-ನಿರ್ದೇಶಕ ಅರ್ಜುನ್ ಸರ್ಜಾ ಪ್ಲಾನ್ ಮಾಡಿದ್ದಾರೆ. ಅದ್ದೂರಿ ಸೆಟ್ ಮಧ್ಯೆಯಲ್ಲಿ ಸಾಂಗ್ ಶೂಟಿಂಗ್ ನಡೆಯಲಿದ್ದು ನೃತ್ಯ ನಿರ್ದೇಶಕ ಮೋಹನ್ ಕೋರಿಯೋಗ್ರಾಫ್ ಮಾಡಲಿದ್ದಾರೆ.

ಹಾಡಿನಲ್ಲಿ ಇರಲಿದೆ ಹನುಮಾನ್ ಚಾಲೀಸ

ಅದ್ದೂರಿ ಸೆಟ್ ಜೊತೆಯಲ್ಲಿ ನೂರು ಜನ ಸಹ ಕಲಾವಿದರನ್ನ ಈ ಹಾಡಿನಲ್ಲಿ ಬಳಸಿಕೊಳ್ಳಲಾಗುತ್ತಂತೆ. ಅರ್ಜುನ್ ಸರ್ಜಾ ಕುಟುಂಬಸ್ಥರು ಹನುಮಂತನ ಭಕ್ತರಾಗಿರೋದ್ರಿಂದ ಹಾಡಿನಲ್ಲಿ ಹನುಮಾನ್ ಚಾಲೀಸ ಕೇಳಿ ಬರಲಿದೆ.

ಪ್ರೇಮಕಥೆಯ ಜೊತೆಗೆ ಸೈನಿಕರಿಗೆ ನಮನ

ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಅರ್ಜುನ್ ಸರ್ಜಾ ಚಿತ್ರದಲ್ಲಿ ಕ್ಯೂಟ್ ಲವ್ ಸ್ಟೋರಿಯ ಜೊತೆಯಲ್ಲಿ ದೇಶದ ಗಡಿಯಲ್ಲಿ ಕಾವಲು ಕಾಯುವ ವೀರ ಯೋಧರಿಗೆ ಸಿನಿಮಾ ಮೂಲಕ ನಮನ ಸಲ್ಲಿಸಲಿದ್ದಾರೆ.

English summary
Challenging star Darshan to be a part of Arjun Sarja's Prema Baraha' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada