For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಭೀತಿಯಲ್ಲೇ ಸಪ್ತಪದಿ ತುಳಿದ ಚಂದನ್-ಕವಿತಾ ಜೋಡಿ

  |

  ಕೊರೊನಾ ವೈರಸ್ ಭೀತಿಯ ನಡುವೆಯೇ ನಟ ಚಂದನ್ ಕುಮಾರ್ ಮತ್ತು ಕವಿತಾ ಗೌಡ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ. ಲಾಕ್‌ಡೌನ್ ನಿಯಮದಂತೆ ಸರಳವಾಗಿ ವಿವಾಹ ಮಾಡಿಕೊಂಡಿರುವ ನವಜೋಡಿಗಳು ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

  ಮಾಸ್ಕ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿನ್ನು ಮತ್ತು ಚಂದನ್ | Filmibeat Kannadda

  ಕವಿತಾ ಗೌಡ ಅವರಿಗೆ ಚಂದನ್ ಕುಮಾರ್ ಮಾಂಗಲ್ಯಧಾರಣೆ ಮಾಡುತ್ತಿರುವ ಫೋಟೋ ಶೇರ್ ಮಾಡಿರುವ ಇಬ್ಬರು ''ಮನೆ ಮದುವೆ, ಮದುವೆ ಮನೆ. ಗ್ಲೋರಿಯಸ್ ಆಗಿಲ್ಲ, ಆದರೆ ಸಂತಸದಿಂದ ಕೂಡಿದೆ'' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ನವಜೋಡಿಗಳಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  ನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡ ಚಂದನ್ ಕುಮಾರ್-ಕವಿತಾ ಗೌಡ ಜೋಡಿನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡ ಚಂದನ್ ಕುಮಾರ್-ಕವಿತಾ ಗೌಡ ಜೋಡಿ

  ಕೋವಿಡ್ ಭೀತಿಯಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇಬ್ಬರು ಮುಖಕ್ಕೆ ಮಾಸ್ಕ್ ಧರಿಸಿರುವುದು ಗಮನ ಸೆಳೆದಿದೆ. ಜೊತೆಗೆ ವಿವಾಹದಲ್ಲಿ ಪಾಲ್ಗೊಂಡಿದ್ದವರು ಸಹ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡಿರುವುದು ಫೋಟೋದಲ್ಲಿ ಕಾಣುತ್ತಿದೆ.

  ಏಪ್ರಿಲ್ 1 ರಂದು ಚಂದನ್ ಕುಮಾರ್ ಮತ್ತು ಕವಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ದಿನಾಂಕದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಆದರೆ, ಮೇ 14 ರಂದು ವಿವಾಹ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದರು ಎಂಬ ವಿಚಾರ ತಿಳಿದಿತ್ತು.

  ಈ ಮೊದಲೇ ನಿರ್ಧರಿಸಿದ ದಿನಾಂಕದಲ್ಲೇ ಕವಿತಾ ಮತ್ತು ಚಂದನ್ ಕುಮಾರ್ ಸಪ್ತಪದಿ ತುಳಿದಿದ್ದು, ಕೇವಲ ಕುಟುಂಬಸ್ಥರು ಮತ್ತು ಕೆಲವೇ ಕೆಲವೇ ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗಿದ್ದರು.

  ಚಂದನ್ ಕುಮಾರ್ ಅವರು 'ಲಕ್ಷ್ಮಿ ಬಾರಮ್ಮ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕವಿತಾ ಗೌಡ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದನ್ ಅವರು ಇತ್ತೀಚೆಗಷ್ಟೆ ಬಿರಿಯಾನಿ ಹೋಟೆಲ್ ಸಹ ಆರಂಭಿಸಿದ್ದಾರೆ.

  English summary
  Actor Chandan Kumar and actress Kavitha Gowda wedding took place today (may 14th) in Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X