For Quick Alerts
  ALLOW NOTIFICATIONS  
  For Daily Alerts

  ಲವ್ಲಿ ಸ್ಟಾರ್ ಪ್ರೇಮ್ ಜೊತೆಗಿನ ಲವ್ಲಿ ಸಂದರ್ಶನ

  By Rajendra
  |
  <ul id="pagination-digg"><li class="next"><a href="/news/roopa-iyer-is-like-sachin-tendulkar-prem-interview-075217.html">Next »</a></li></ul>

  ತಮ್ಮ ಲವರ್ ಬಾಯ್ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಭದ್ರ ಸ್ಥಾನ ಪಡೆದ ನಟ ಲವ್ಲಿ ಸ್ಟಾರ್ ಪ್ರೇಮ್. 'ನೆನಪಿರಲಿ' ಚಿತ್ರದ ತಮ್ಮ ಲವ್ಲಿ ಅಭಿನಯದ ಮೂಲಕ ಹೆಂಗೆಳೆಯರ ಮನಸ್ಸು ಕದ್ದ ನಟನೂ ಹೌದು. ಈಗ ಮತ್ತೊಮ್ಮೆ ಹೃದಯಕ್ಕೆ ಲಗ್ಗೆ ಹಾಕಲು 'ಚಂದ್ರ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪ್ರೇಮ್ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

  * 'ಚಂದ್ರ' ಚಿತ್ರವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣ?
  ಮೊದಲನೆಯದಾಗಿ ನಿಸ್ಸಂದೇಹವಾಗಿ ಸ್ವಾರಸ್ಯಕರವಾದ, ಡಿಫರೆಂಟ್ ಶೇಡ್ಸ್ ನಿಂದ ಕೂಡಿದ ಕಥೆ ಎಂದು ಹೇಳಬಹುದು. ಎರಡನೆಯದಾಗಿ ರೂಪಾ ಅಯ್ಯರ್. ಅವರೊಬ್ಬ ಕ್ರಿಯಾಶೀಲ ನಿರ್ದೇಶಕಿ ಎಂಬುದು ಕಥೆ ಹೇಳಬೇಕಾದರೇನೆ ನನಗೆ ಮನದಟ್ಟಾಯಿತು.

  * ಚಂದ್ರ ಚಿತ್ರದಲ್ಲಿ ತಮ್ಮ ಪಾತ್ರವೇನು?
  ಚಿತ್ರದಲ್ಲಿ ತಾನು ಗಾಯಕ ಹಾಗೂ ಶಾಸ್ತ್ರೀಯ ಸಂಗೀತದ ಶಿಕ್ಷಕ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಆಸಕ್ತಿ ಇರುವ ಕಾರಣ ಹಿಮಾಲಯದಲ್ಲಿ ಸಂಶೋಧನೆ ಮಾಡಿರುತ್ತಾನೆ. ಚಿತ್ರದಲ್ಲಿ ತನ್ನದು ಆಕ್ಷನ್ ಪ್ರಧಾನ ಪಾತ್ರ.

  * ಚಿತ್ರೀಕರಣದ ಅನುಭವಗಳನ್ನು ತಿಳಿಸಿ?
  ಸೆಟ್ಸ್ ನಲ್ಲಿ ಪ್ರತಿ ದಿನ ಒಂದಲ್ಲ ಒಂದು ಹೊಸ ಅನುಭವವಾಗುತ್ತಿತ್ತು. ಚಂದ್ರ ಚಿತ್ರೀಕರಣ ಸಂದರ್ಭದಲ್ಲಾದ ತಮಾಷೆ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಪ್ರತಿಯೊಬ್ಬ ನಿರ್ದೇಶಕರು ರೊಮ್ಯಾಂಟಿಕ್ ಹಾಡನ್ನು ಚಿತ್ರೀಕರಿಸಲು ಕುಲು ಮನಾಲಿಗೆ ಹೋಗುತ್ತಾರೆ. ಆದರೆ ನಾವು ಆಕ್ಷನ್ ಸೀನ್ ಚಿತ್ರೀಕರಿಸಲು ಅಲ್ಲಿಗೆ ಹೋಗಿದ್ದೆವು.

  ಇದೊಂದು ಮರೆಯಲಾಗದ ಅನುಭವ. ಅಲ್ಲಿನ -5 °C ತಾಪಮಾನದಲ್ಲಿ ಮೈಮೇಲೆ ಬಟ್ಟೆ ಇಲ್ಲದೆ ಫೈಟಿಂಗ್ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದೇವೆ. ಎಲ್ಲರೂ ಚಳಿಗೆ ನಡುಗುತ್ತಿದ್ದರೆ ನನಗೆ ಮಾತ್ರ ಬಿಸಿಯಾದ ಅನುಭವವಾಗುತ್ತಿತ್ತು.

  * ಚಿತ್ರದಲ್ಲಿ ಬಳಸಿಕೊಂಡಿರುವ ಕಳರಿ ಪಯಟ್ಟು ಬಗ್ಗೆ ಹೇಳಿ?
  ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಈ ಯುದ್ಧ ಕಲೆಯನ್ನು ಬಳಸಿಕೊಂಡಿದ್ದೇವೆ. ರೂಪಾ ಅಯ್ಯರ್ ಅವರು ಇದಕ್ಕಾಗಿ ವಿಶೇಷ ಫೈಟ್ ಮಾಸ್ಟರ್ ಆಯ್ಕೆ ಮಾಡಿಕೊಂಡಿದ್ದರು. ಅವರ ಬಳಿ ನಾನು ಎರಡುವರೆ ತಿಂಗಳುಗಳ ಕಾಲ ತರಬೇತಿ ಪಡೆದಿದ್ದೇನೆ. ಇದೊಂದು ತೀರಾ ಭಿನ್ನವಾದ ಅನುಭವ. ಈ ಮುಂಚೆ ಈ ರೀತಿಯ ಸನ್ನಿವೇಶಗಳನ್ನು ಮಾಡಿರಲಿಲ್ಲ.

  ಕಳರಿ ಪಯಟ್ಟು ಕಲೆ ನಿಜಕ್ಕೂ ಕಷ್ಟಕರ. ಅದರಲ್ಲೂ ಕೆಲವೊಂದುಸ್ಟ್ರೆಚಿಂಗ್ ಹಾಗೂ ಕತ್ತಿವರಸೆ ಸನ್ನಿವೇಶಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಚಿತ್ರದ ನಾಯಕಿ ಶ್ರಿಯಾ ಸರನ್ ಸಹ ಫೈಟ್ ಮಾಡುತ್ತಾರೆ. ಇದಕ್ಕಾಗಿ ಅವರು ತರಬೇತಿಯನ್ನು ಪಡೆದಿದ್ದಾರೆ.

  * ಇದೇ ಮೊದಲ ಬಾರಿ ನಿಮಗೆ ನಿರ್ದೇಶಕಿ ಆಕ್ಷನ್ ಕಟ್ ಹೇಳಿದ್ದಾರೆ, ಏನನ್ನಿಸುತ್ತದೆ?
  ನನ್ನ ಪ್ರಕಾರ ರೂಪಾ ಅವರು ಯಾವ ಪುರುಷ ನಿರ್ದೇಶಕರಿಗಿಂತಲೂ ಕಡಿಮೆ ಇಲ್ಲ. ಅವರಿಗಿಂತಲೂ ಒಂದು ಕೈ ಮೇಲು ಎಂದು ಹೇಳಬಹುದು. ಅವರೊಬ್ಬ ಕ್ರಿಯಾಶೀಲ ನಿರ್ದೇಶಕಿ. ಸಾಮಾನ್ಯವಾಗಿ ನಿರ್ದೇಶಕರಿಗೆ ಸಹಾಯಕ ನಿರ್ದೇಶಕ, ಕಾಸ್ಟ್ಯೂಮರ್, ರೈಟರ್, ಕಲಾ ನಿರ್ದೇಶಕ ಎಂಬ ಸಹಾಯಕರಿರುತ್ತಾರೆ.

  ಆದರೆ ರೂಪಾ ಅವರು ಸಚಿನ್ ತೆಂಡೂಲ್ಕರ್ ಅವರಂತೆ ಆಲ್ ರೌಂಡರ್. ಈ ಎಲ್ಲಾ ವಿಭಾಗಗಳನ್ನೂ ಅವರೊಬ್ಬರೇ ನಿಭಾಯಿಸುತ್ತಾರೆ. ಚಂದ್ರ ಚಿತ್ರದ ವಿಶೇಷಗಳಲ್ಲಿ ಇದೂ ಒಂದು. ಈ ಎಲ್ಲಾ ವಿಭಾಗಗಳಲ್ಲೂ ಅವರಿಗೆ ಆಳವಾದ ಒಳನೋಟವೂ ಇದೆ. ಅವರು ಹೇಗೆ ಕೆಲಸ ತೆಗೆಸಿದ್ದಾರೆ ಎಂಬುದು ಚಿತ್ರ ನೋಡಿದರೆ ನಿಮಗೇ ಅರ್ಥವಾಗುತ್ತದೆ.

  <ul id="pagination-digg"><li class="next"><a href="/news/roopa-iyer-is-like-sachin-tendulkar-prem-interview-075217.html">Next »</a></li></ul>
  English summary
  Lovely Star Prem is now gearing up to release (27th July) his next movie Chandra, directed by Roopa Iyer, which features Shriya Saran opposite him. In a candid chat, he spoke about the shooting and highlights of Chandra and his upcoming movies. Here are excerpts from Prem Kumar's interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X