For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ ಛತ್ರಿಗಳಿಗೆ ಬಿಡುಗಡೆ ಭಾಗ್ಯವಿಲ್ಲ ಸಾರ್

  By Rajendra
  |

  ಇದೇ ಶುಕ್ರವಾರ (ಏ.19) ಬಿಡುಗಡೆಯಾಗಬೇಕಿದ್ದ 'ಛತ್ರಿಗಳು ಸಾರ್ ಛತ್ರಿಗಳು' ಚಿತ್ರ ಪೋಸ್ಟ್ ಪೋನ್ ಆಗಿದೆ. ಶುಕ್ರವಾರಕ್ಕೆ ಬದಲಾಗಿ ಶನಿವಾರ (ಏ.20) ಛತ್ರಿಗಳು ಥಿಯೇಟರ್ ಗೆ ಅಡಿಯಿಡುತ್ತಿದ್ದಾರೆ. ನಿರ್ಮಾಣ ನಂತರದ ಕೆಲಸಗಳಲ್ಲಿ ಸ್ವಲ್ಪ ತೊಂದರೆ ಉಂಟಾಗಿದ್ದೇ ಚಿತ್ರ ಬಿಡುಗಡೆ ಮುಂದೂಡಲು ಕಾರಣವಂತೆ.

  ಚೆನ್ನೈನ ಪ್ರಸಾದ ಸ್ಟುಡಿಯೋದಲ್ಲಿ ಮುಷ್ಕರ ನಡೆದು ಚಿತ್ರದ ಪ್ರಥಮ ಪ್ರತಿ ಸಿಗುವುದು ಸ್ವಲ್ಪ ತಡವಾಯಿತಂತೆ. ಚಿತ್ರಕ್ಕೆ ಇನ್ನೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಹಾಗಾಗಿ ಚಿತ್ರವನ್ನು ಒಂದು ದಿನ ಮುಂದೂಡಿದ್ದಾಗಿ ಎಸ್ ನಾರಾಯಣ್ ತಿಳಿಸಿದ್ದಾರೆ.

  ಈ ಚಿತ್ರದಲ್ಲಿ ನಾರಾಯಣ್ ಜೊತೆ ಮೋಹನ್, ರಮೇಶ್ ಅರವಿಂದ್ ಅವರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ಪದ್ಮಸುಂದರಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ.

  ಮಾನಸಿ, ಸನಾತನಿ, ಪವಿತ್ರಾ ಗೌಡ ಹಾಗೂ ಸುಷ್ಮಾ ರಾಜ್ ಛತ್ರಿಗಳ ಜೊತೆಗಿನ ಬಿತ್ರಿಗಳು. ಈ ಹಿಂದೆ ಎಸ್ ನಾರಾಯಣ್ ಅವರು ಕುರಿಗಳು ಸಾರ್ ಕುರಿಗಳು ಹಾಗೂ ಕೋತಿಗಳು ಸಾರ್ ಕೋತಿಗಳು ಎಂಬ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದರು. ಈಗ 'ಛತ್ರಿಗಳು ಸಾರ್ ಛತ್ರಿಗಳು' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಚಿತ್ರದ ಪಾತ್ರವರ್ಗದಲ್ಲಿ ಸಾಧು ಕೋಕಿಲ, ಸುಂದರ ರಾಜ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಶಿವರಾಂ ಮುಂತಾದ ಹಾಸ್ಯ ನಟರ ಬಳಗವೇ ಚಿತ್ರದಲ್ಲಿದೆ. ಮಾಲೂರು ಶ್ರೀನಿವಾಸ್ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ. (ಏಜೆನ್ಸೀಸ್)

  English summary
  Director S Narayan's Chatrigalu Saar Chatrigalu release postponed to 20th April. The movie suppose to release on 19th April. The reason for the delay is said to be the delay in the post production work of the film. Actors Ramesh Arvind and Mohan are also plays in this film. Arjun Janya scoring the music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X