Don't Miss!
- News
ಸರ್ಕಾರದಿಂದ 84 ಸಾವಿರ ರೆಮಿಡಿಸ್ವಿರ್ ಖರೀದಿ: ಸುಧಾಕರ್
- Automobiles
ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಹೊಸ ಹ್ಯುಂಡೈ ಪಿಕ್ಅಪ್ ಟ್ರಕ್
- Sports
ಐಪಿಎಲ್ 2021: ಪಂಜಾಬ್ vs ಚೆನ್ನೈ, ಪ್ಲೇಯಿಂಗ್ XI, ಅಪ್ಡೇಟ್ಸ್
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ
ಗುರುವಾರ ಬಿಡುಗಡೆ ಆಗಿರುವ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮೊದಲ ದಿನವೇ ಅದ್ಭುತ ಗಳಿಕೆ ಮಾಡಿಕೊಂಡು ಮುಂದೆ ಸಾಗುತ್ತಿದೆ. ಆದರೆ ಬಿಡುಗಡೆ ಆಗಿ ಒಂದೇ ದಿನಕ್ಕೆ ಸಿನಿಮಾಕ್ಕೆ ಪೈರಸಿ ಕಾಟ ಪ್ರಾರಂಭವಾಗಿದೆ.
'ರಾಬರ್ಟ್' ಸಿನಿಮಾ ಹೆಸರಲ್ಲಿ ಸಾವಿರಾರು ಲಿಂಕ್‌ಗಳು ಅಂತರ್ಜಾಲದಲ್ಲಿ ಹುಟ್ಟಿಕೊಂಡಿವೆ. ಪೈರಸಿ ಕಾಟವನ್ನು ಮೊದಲೇ ಊಹಿಸಿದ್ದ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಅವರು ಪೈರಸಿ ತಡೆಗೆಂದೇ ಪ್ರತ್ಯೇಕ ತಂಡವನ್ನು ಮಾಡಿಕೊಂಡು ಲಿಂಕ್‌ಗಳನ್ನು ಡಿಲೀಟ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್
ಶುಕ್ರವಾರ ಒಂದೇ ದಿನ 'ರಾಬರ್ಟ್' ಹೆಸರಿನಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನು ಅಂತರ್ಜಾಲದಿಂದ ಡಿಲೀಟ್ ಮಾಡಿರುವುದಾಗಿ ಉಮಾಪತಿ ಅವರು ಮಾಹಿತಿ ನೀಡಿದ್ದಾರೆ. ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆಯ ನಡುವೆಯೇ 'ರಾಬರ್ಟ್' ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಪ್ರಯತ್ನವೊಂದು ಉಮಾಪತಿ ಅವರ ಕಣ್ಣಿಗೆ ಬಿದ್ದಿದೆ.

'ರಾಬರ್ಟ್' ಸಿನಿಮಾ ಹೆಸರಲ್ಲಿ ಮೋಸ: ಉಮಾಪತಿ ಶ್ರೀನಿವಾಸ್‌ಗೌಡ
'ರಾಬರ್ಟ್ ಸಿನಿಮಾ' ಹೆಸರಿನಲ್ಲಿ ಅಂತರ್ಜಾಲದಲ್ಲಿ ಸಾವಿರಾರು ಲಿಂಕ್‌ಗಳಿವೆ ಆದರೆ ಬಹುತೇಕ ಲಿಂಕ್‌ಗಳ ಒಳಗೆ ಸಿನಿಮಾ ಇಲ್ಲ ಬದಲಿಗೆ ಗೂಗಲ್ ಪೇ, ಫೋನ್ ಪೇನ ವಿಳಾಸ ಅಥವಾ ಕ್ಯುಆರ್ ಕೋಡ್‌ಗಳಿವೆ. ಒಂದು ವೇಳೆ ಸಿನಿಮಾ ನೋಡಲು ಲಿಂಕ್ ಮಾಡಿದರೆ ಕ್ಯೂಆರ್ ಕೋಡ್ ಪ್ರಕಟಗೊಳ್ಳುತ್ತದೆ ಅಥವಾ ಅನಾಮಿಕರ ಗೂಗಲ್ ಪೇ, ಫೋನ್ ಪೇ ವಿಳಾಸ ಕಾಣುತ್ತದೆ, ಬಳಕೆದಾರನು ಸಿನಿಮಾ ನೋಡಲೆಂದು ಅವುಗಳ ಮೇಲೆ ಕ್ಲಿಕ್ ಮಾಡಿದರೆ ಹಣ ಕಳೆದುಕೊಳ್ಳುವುದು ಪಕ್ಕಾ. ಹಾಗಾಗಿ ಎಚ್ಚರದಿಂದಿರಿ ಎಂದಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ.

ಅಂತರ್ಜಾಲದಲ್ಲಿ ಮೋಸ ನಡೆಯುತ್ತಿರುತ್ತದೆ
ಉಮಾಪತಿ ಅವರು ಹೇಳಿದಂತೆಯೆ ಅಂತರ್ಜಾಲದಲ್ಲಿ ಹಲವರು ಸಿನಿಮಾ, ಐಫೋನ್ ಅಥವಾ ಯಾವುದೋ ವಸ್ತುವಿನ ಹೆಸರಿನಲ್ಲಿ ಲಿಂಕ್ ತೆರೆದಿರುತ್ತಾರೆ. ಐಫೋನ್ ಅನ್ನು ಕಡಿಮೆ ಬೆಲೆಗೆ ಕೊಳ್ಳಲೊ ಅಥವಾ ಸಿನಿಮಾ ನೋಡಲೋ ಲಿಂಕ್ ಕ್ಲಿಕ್ ಮಾಡಿದರೆ ಅದು ಮತ್ತೊಂದು ಲಿಂಕ್‌ಗೆ ಕರೆದುಕೊಂಡು ಹೋಗಿ ಕ್ಯೂಆರ್ ಕೋಡ್ ಪ್ರದರ್ಶಿತವಾಗುತ್ತದೆ. ಒಂದೊಮ್ಮೆ ಬಳಕೆದಾರರು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಖಾತೆಯಲ್ಲಿದ್ದ ಹಣವೆಲ್ಲಾ ಮೋಸಗಾರರ ಪಾಲಾಗುತ್ತದೆ. ಇಂಥ ಮೋಸಗಳು ಅಂತರ್ಜಾಲದಲ್ಲಿ ಹೆಚ್ಚು.

ವೀಕೆಂಡ್‌ನಲ್ಲಿ ಹೆಚ್ಚಿನ ಗಳಿಕೆ ಸಾಧ್ಯತೆ
ಇನ್ನು 'ರಾಬರ್ಟ್' ವಿಷಯಕ್ಕೆ ಮರಳುವುದಾದರೆ ಸಿನಿಮಾವು ಮೊದಲ ದಿನ ಭರ್ಜರಿ ಓಪನಿಂಗ್ ಕಂಡು ಎರಡನೇ ದಿನವೂ ಮೊದಲ ದಿನದ ಓಘವನ್ನೇ ಮುಂದುವರೆಸಿದೆ. ವೀಕೆಂಡ್‌ನಲ್ಲಿ ಇನ್ನೂ ಹೆಚ್ಚಿನ ಗಳಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.

ಮೊದಲ ದಿನ 17.24 ಕೋಟಿ ಗಳಿಕೆ
'ರಾಬರ್ಟ್' ಸಿನಿಮಾ ಬಿಡುಗಡೆ ಆದ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ರಾಜ್ಯದಲ್ಲಿ 'ರಾಬರ್ಟ್' ಬರೋಬ್ಬರಿ 17.24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಆಂಧ್ರ ಪ್ರದೇಶದಲ್ಲೂ ರಾಬರ್ಟ್ 3.12 ಕೋಟಿ ರುಪಾಯಿ ಬಾಚಿಕೊಂಡಿದೆ. ಎರಡನೇ ದಿನವು ರಾಬರ್ಟ್ ವಿಜಯ ಯಾತ್ರೆ ಮುಂದುವರೆಸಿದೆ.