»   » ಎಸ್ ನಾರಾಯಣ್ ಮೇಲೆ ಚೆಕ್ ಬೌನ್ಸ್ ಪ್ರಕರಣ

ಎಸ್ ನಾರಾಯಣ್ ಮೇಲೆ ಚೆಕ್ ಬೌನ್ಸ್ ಪ್ರಕರಣ

Posted By:
Subscribe to Filmibeat Kannada
Director S Narayan
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ನಾರಾಯಣ್ ಅವರ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಈ ಆರೋಪವನ್ನು ಮಾಡಿರುವವರು ಷೇರು ಬ್ರೋಕರ್ ಹಾಗೂ ಚಿತ್ರ ವಿತರಕ ಪ್ರಸಾದ್. ಈ ಸಂಬಂಧ ಅವರು ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.

'ಮುಂಜಾನೆ' ಚಿತ್ರಕ್ಕಾಗಿ ಪ್ರಸಾದ್ ಅವರ ಬಳಿ ನಾರಾಯಣ್ ಸಾಲ ಮಾಡಿದ್ದರಂತೆ. ಇದಕ್ಕೆ ಪ್ರತಿಯಾಗಿ ರು.2 ಕೋಟಿ ಚೆಕ್ ಬರೆದುಕೊಟ್ಟಿದ್ದರಂತೆ ನಾರಾಯಣ್. ಈಗ ಆ ಚೆಕ್ ಬೌನ್ಸ್ ಆಗಿದೆ. ನ್ಯಾಯ ಕೊಡಿಸಿ ಎಂದು ಫಿಲಂ ಚೇಂಬರ್ ಬಾಗಿಲು ತಟ್ಟಿದ್ದಾರೆ ಪ್ರಸಾದ್.

'ಮುಂಜಾನೆ' ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿದ್ದರು. ಆಗ ಅವರ ಸಹಾಯಕ್ಕೆ ತಾವು ನಿಂತೆವು. ಈಗ ಅವರು ತಮಗೆ ವಂಚಿಸಿದ್ದಾರೆ ಎಂದು ವಿತರಕ ಪ್ರಸಾದ್ ಆರೋಪಿಸಿದ್ದಾರೆ.

ಅವರ ಚಿತ್ರ ಬಿಡುಗಡೆಯಾದ ಮೇಲೂ ಅವರು ತಮಗೆ ಹಣ ಹಿಂತಿರುಗಿಸಿಲ್ಲ. ಹಲವಾರು ಬಾರಿ ಅವರ ಮನೆಗೆ ಅಲೆದದ್ದೇ ಬಂತು. ಕಡೆಗೆ ಅವರ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ ಎಂದಿದ್ದಾರೆ ಪ್ರಸಾದ್. ಈಗ ಪ್ರಕರಣ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘದ ಟೇಬಲ್ ಮೇಲಿದೆ.

ಕರ್ನಾಟಕ ನಿರ್ಮಾಪರ ಸಂಘ ಇಬ್ಬರನ್ನೂ ಕರೆಸಿ ತಮ್ಮ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ನಾರಾಯಣ್ ಅವರಿಂದ ತಮಗೆ ಬಾಕಿ ಹಣ ಬಂದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಪ್ರಸಾದ್ ಇದ್ದಾರೆ. (ಏಜೆನ್ಸೀಸ್)

English summary
Kannada films distributor Prasad had filed a case against the director S Narayan with Film Chamber of Commerce and the Kannada film producers association for bouncing of cheque amounting to around Rs 2 crore. The cheque dishonoured by the bank due to insufficient funds.
Please Wait while comments are loading...