ಚೆಕ್ ಬೌನ್ಸ್ ಕೇಸಲ್ಲಿ ನಟ, ನಿರ್ಮಾಪಕ ದ್ವಾರಕೀಶ್

ಕನ್ನಡ ಚಿತ್ರರಂಗದ ಮತ್ತೊಬ್ಬ ನಿರ್ಮಾಪಕರಾದ ಕೆಸಿಎನ್ ಚಂದ್ರಶೇಖರ್ ಅವರು ಕೊಟ್ಟ ದೂರಿನ ಮೇರೆಗೆ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಿತು. ಬಳಿಕ ದ್ವಾರಕೀಶ್ ಖುದ್ದು ಹಾಜರಾಗುವಂತೆ ಆಗಸ್ಟ್ 27ಕ್ಕೆ ಕೇಸಿನ ವಿಚಾರಣೆಯನ್ನು ಮುಂದೂಡಿದೆ.
ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿದ್ದ 'ಚಾರುಲತಾ' ಚಿತ್ರದ ನಿರ್ಮಾಣಕ್ಕಾಗಿ ದ್ವಾರಕೀಶ್ ರು.50 ಲಕ್ಷ ಸಾಲ ಪಡೆದಿದ್ದರಂತೆ. ಈ ಸಂಬಂಧ ಅವರು ಆಂಧ್ರ ಬ್ಯಾಂಕ್ ನ ರು.50 ಲಕ್ಷದ ಚೆಕ್ ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದೆ ಎಂದು ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು.
ದ್ವಾರಕೀಶ್ ನಿರ್ಮಾಣದ 'ಚಾರುಲತಾ' ಚಿತ್ರ ನಿರೀಕ್ಷೆಗಳೆಲ್ಲವನ್ನೂ ತಲೆಕೆಳಗೆ ಮಾಡಿತ್ತು. ಥಾಯ್ ಭಾಷೆಯ 'ಅಲೋನ್' ಚಿತ್ರವನ್ನು ಅವರು 'ಚಾರುಲತಾ' ಮಾಡಿದ್ದರು. ಈ ಬಾರಿ ಅವರು ಮತ್ತೊಮ್ಮೆ ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಚಿತ್ರಕ್ಕೆ 'ಬ್ರೆಡ್ ಬಟರ್ ಜಾಮ್' ಎಂದು ಹೆಸರಿಟ್ಟಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು ಶೀಘ್ರದಲ್ಲೇ ಚಿತ್ರ ಸೆಟ್ಟೇರಲಿದೆ. ಈ ಬಾರಿ ಅವರು ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟುಕೊಂಡೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


Click it and Unblock the Notifications











