For Quick Alerts
  ALLOW NOTIFICATIONS  
  For Daily Alerts

  ಚೇತನ್ ಚಂದ್ರ, ರೂಪಿಕಾ 'ಸಿಂಹರಾಶಿ'ಗೆ ಹೊಸ ಹೆಸರು?

  |

  ಮೇ 9, 2012ಕ್ಕೆ ಮುಹೂರ್ತ ಆಚರಿಸಿಕೊಂಡ ಚೇತನ್ ಚಂದ್ರ 'ಸಿಂಹರಾಶಿ' ಚಿತ್ರತಂಡಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಚಿತ್ರದ ಶೀರ್ಷಿಕೆಯೇ ಕೈತಪ್ಪುವ ಹಂತ ತಲುಪಿದ ಬೆಳವಣಿಗೆಯಿಂದಾಗಿ ಚಿತ್ರತಂಡ 'ಪ್ರೊಡಕ್ಷನ್ ನಂ.1' ಹೆಸರಿನಲ್ಲಿಯೇ ಮುಹೂರ್ತ ಆಚರಿಸಿಕೊಂಡಿದೆ. 'ಸಿಂಹರಾಶಿ' ಹೆಸರಿನ ಈ ಚಿತ್ರಕ್ಕಾಗಿಯೇ ಚೇತನ್ ತಮ್ಮ ಬಾಡಿಯನ್ನು ಏಯ್ಟ್ ಪ್ಯಾಕ್ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತು.

  ಸಿದ್ದು ಪಾಟೀಲ್ ನಿರ್ಮಾಣದಲ್ಲಿ 'ಸಿಂಹರಾಶಿ' ಚಿತ್ರವನ್ನು ಚಂದ್ರಹಾಸ್ ಎಂಬ ನವನಿರ್ದೇಶಕರು ನಿರ್ದೇಶಿಸಬೇಕಿದೆ. ನಾಯಕಿಯಾಗಿ ಚೇತನ್ ಚಂದ್ರರಿಗೆ ಚೆಲುವಿನ ಚಿಲಿಪಿಲಿ ಖ್ಯಾತಿಯ ರೂಪಿಕಾ ಜೋಡಿಯಾಗಿದ್ದಾರೆ. ಎಲ್ಲವೂ ನಿರ್ಧಾರವಾಗಿ ಮುಹೂರ್ತ ನಡೆಯುವ ವೇಳೆಯಲ್ಲಿ 'ಶೀರ್ಷಿಕೆ ಕೈತಪ್ಪುವುದಕ್ಕೆ ಆತ್ಮೀಯರೇ ಕಾರಣರಾಗಿದ್ದಾರೆ. ಆದರೆ ಚಿತ್ರತಂಡ ಮುಹೂರ್ತ ಆಚರಿಸಿಕೊಂಡು ಮುಂದಿನದನ್ನು ಪ್ಲಾನ್ ಮಾಡತೊಡಗಿದೆ.

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುಮಾರು ಆರು ವರ್ಷಗಳ ಹಿಂದೆ ತೆಲುಗಿನ 'ಸಿಂಹರಾಶಿ'ಯನ್ನು ಕನ್ನಡಕ್ಕೆ ರೀಮೇಕ್ ಮಾಡಲೆಂದು ನಿರ್ಮಾಪಕ ಎನ್. ಕುಮಾರ್ ಈ ಶೀರ್ಷಿಕೆಯನ್ನು ನೋಂದಣಿ ಮಾಡಿಸಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಆ ಚಿತ್ರದಲ್ಲಿ ನಾಯಕನಾಗಬೇಕಿತ್ತು. ಆದರೆ ಅಂದುಕೊಂಡಂತೆ ಆಗದೇ ನೋಂದಣಿ ರದ್ದಾಗಿತ್ತು. ಮರು ನೋಂದಣಿಗಾಗಿ ನಿರ್ದೇಶಕ ಚಂದ್ರಹಾಸ್ ಪ್ರಯತ್ನಿಸಿದಾಗ ಅದು ಬೇರೆಯವರ ಪಾಲಾಗಿರುವುದು ಬೆಳಕಿಗೆ ಬಂದಿದೆ.

  ಈ ಬೆಳವಣಿಗೆಯಿಂದಾಗಿ 'ಸಿಂಹರಾಶಿ' ಹೆಸರಿನ ಚಿತ್ರ ಘೋಷಿಸಿದ್ದ ಚೇತನ್ ಅಂಡ್ ಟೀಮ್ ಗೆ ಸಹಜವಾಗಿ ನಿರಾಸೆಯಾಗಿದೆ. ಜೊತೆಯಲ್ಲಿದ್ದವರು, ಇರಬೇಕಾದವರೇ ಬೆನ್ನಿಗೆ ಚೂರಿಹಾಕಿ ದೂರ ಸರಿದಿರುವುದು ಎಚ್ಚರಿಕೆಯ ಕರೆಗಂಟೆ ಎನಿಸಿದೆ. ಅದೇ ಶೀರ್ಷಿಕೆ ಅಥವಾ ಅದಕ್ಕಿಂತ 'ಕ್ಯಾಚಿ'ಯಾಗಿರುವ ಟೈಟಲ್ ಇಡುವ ಪಕ್ಕಾ ಭರವಸೆಯೊಂದಿಗೆ ಚಿತ್ರತಂಡ ಮುನ್ನಡೆಯುವ ಭರವಸೆಯಲ್ಲಿದೆ. (ಒನ್ ಇಂಡಿಯಾ ಕನ್ನಡ)

  English summary
  Chetan Chandra launched Movie 'Simharashi' Title is in trouble. That's why, the team launched the movie in 'Production No 1' name. Roopika selected as heroine and newcomer Chandrahasa directs this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X