ಚಿಕ್ಕಣ್ಣ ಹೀರೋ ಆಗುವುದು ಪಕ್ಕಾ: ಗುಟ್ಟು ಬಿಚ್ಚಿಟ್ಟ ನಿರ್ದೇಶಕ

ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬಂದಿದೆ. ಆದರೆ, ಕೊನೆಗೂ ಚಿಕ್ಕಣ್ಣ ಹೀರೋ ಆಗುವ ಸಮಯ ಇದೀಗ ಬಂದಿದೆ. ಈ ಬಾರಿ ಚಿಕ್ಕಣ್ಣ ನಾಯಕ ನಟ ಆಗುವುದು ನೂರಕ್ಕೆ ನೂರರಷ್ಟು ನಿಜ.

'ಮಾಸ್ಟರ್ ಪೀಸ್' ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ವಿಷಯವನ್ನು ಅವರೇ ತಿಳಿಸಿದ್ದಾರೆ. ಮುಂದೆ ಚಿಕ್ಕಣ್ಣನ ಜೊತೆಗೆ ಒಂದು ಸಿನಿಮಾ ಮಾಡುತ್ತೇನೆ ಆ ಸಿನಿಮಾದಲ್ಲಿ ಅವನು ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.

ನಿರ್ದೇಶಕ ಮಂಜು ಮಾಂಡವ್ಯ 'ಶ್ರೀ ಭರತ ಬಾಹುಬಲಿ' ಸಿನಿಮಾದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಿನ್ನೆ (ಜನವರಿ 3) ನಡೆದಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅವರು ತಿಳಿಸಿದ್ದಾರೆ.

Chikkanna will be playing lead role in Manju Mandavyas next

'ರಾಜಾಹುಲಿ' ಸಿನಿಮಾದಲ್ಲಿ ಯಶ್ ಜೊತೆಗೆ ಮಂಜು ಮಾಂಡವ್ಯ ಹಾಗೂ ಚಿಕ್ಕಣ್ಣ ನಟಿಸಿದ್ದರು. ಆ ಬಳಿಕ ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ನಲ್ಲಿಯೂ ಚಿಕ್ಕಣ್ಣ ನಟಿಸಿದ್ದರು. ಇದೀಗ 'ಶ್ರೀ ಭರತ ಬಾಹುಬಲಿ'ಯಲ್ಲಿಯೂ ಮಂಜು ಜೊತೆಗೆ ಚಿಕ್ಕಣ್ಣ ಇದ್ದಾರೆ.

ಈ ಮೂರು ಸಿನಿಮಾಗಳ ನಂತರ ಚಿಕ್ಕಣ್ಣನನ್ನು ಇಟ್ಟುಕೊಂಡು ಮಂಜು ಮಾಂಡವ್ಯ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ.

More from Filmibeat

English summary
Comedy actor Chikkanna will be playing lead role in Manju Mandavya's next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X