»   » 'ರುದ್ರತಾಂಡವ'ವಾಡಿದ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಬಂದ್ರು.!

'ರುದ್ರತಾಂಡವ'ವಾಡಿದ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಬಂದ್ರು.!

Posted By: Naveen
Subscribe to Filmibeat Kannada

'ರಾಮ್ ಲೀಲಾ' ಸಿನಿಮಾ ನಂತರ ನಟ ಚಿರಂಜೀವಿ ಸರ್ಜಾ ಗಾಂಧಿನಗರದಲ್ಲಿ ಸದ್ದು ಮಾಡಿದ್ದು ಕಮ್ಮಿ. 'ಆಕೆ' ಎನ್ನುವ ಸಿನಿಮಾದಲ್ಲಿ ಚಿರು ನಟಿಸಿದ್ದಾರೆ ಎನ್ನುವುದು ಬಿಟ್ಟರೆ, ಚಿರು ಬಗ್ಗೆ ಹೆಚ್ಚು ಸುದ್ದಿ ಕೂಡ ಆಗಲಿಲ್ಲ. ಈಗ ಚಿರಂಜೀವಿ ಸರ್ಜಾ 'ಸಂಹಾರ' ಮಾಡಲು ಹೊರಟಿದ್ದಾರೆ ಎನ್ನುವ ಖಬರ್ ಬಂದಿದೆ.

ಅಂದ್ಹಾಗೆ, ಇದು ಮಾಮುಲಿ ಸಂಹಾರ ಅಲ್ಲ, 'ರುದ್ರತಾಂಡವ'ದ ಸಂಹಾರ. ಏನಪ್ಪಾ ಇದು ಅಂತ ಕನ್ ಫ್ಯೂಸ್ ಆದ್ರಾ.? ಅರ್ಥ ಆಗಬೇಕು ಅಂದ್ರೆ ಮುಂದೆ ಓದಿ...

ಹೊಸ ಸಿನಿಮಾ

ಚಿರಂಜೀವಿ ಸರ್ಜಾ 'ಸಂಹಾರ' ಮಾಡುತ್ತಿರುವುದು ರೀಲ್ ನಲ್ಲಿ ಮಾತ್ರ. ಚಿರು ಅಭಿನಯದ ಹೊಸ ಸಿನಿಮಾದ ಹೆಸರು 'ಸಂಹಾರ'. ಈ ಸಿನಿಮಾದ ಮುಹೂರ್ತ ನಾಳೆ (ಏಪ್ರಿಲ್29) ಅದ್ಧೂರಿಯಾಗಿ ನಡೆಯಲಿದೆ.

ಫಸ್ಟ್ ಲುಕ್ ರಿಲೀಸ್

'ಸಂಹಾರ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಬಿಡುಗಡೆಯಾಗಿದೆ. ಇಲ್ಲಿ ಚಿರು ಸರ್ಜಾ ಎರಡು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳ ಪೈಕಿ ಒಂದು ಲುಕ್ ಶಿವನ ರೀತಿ ಇದೆ.

ಆಕ್ಷನ್ ಸಿನಿಮಾ

ಟೈಟಲ್ ಹೇಳುವ ಹಾಗೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ. 'ಸಂಹಾರ' ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡಲಿದ್ದು, ಮೈನವಿರೇಳಿಸುವ ಅನೇಕ ಸಾಹಸ ದೃಶ್ಯಗಳು ಇರಲಿವೆ.

ಮತ್ತೆ ಒಂದಾದ ಗುರು-ಚಿರು

'ಸಂಹಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗುರು ದೇಶಪಾಂಡೆ. ಈ ಹಿಂದೆ ಚಿರು ಮತ್ತು ಗುರುದೇಶಪಾಂಡೆ ಕಾಂಬಿನೇಷನ್ ನಲ್ಲಿ 'ರುದ್ರತಾಂಡವ' ಸಿನಿಮಾ ತೆರೆಗೆ ಬಂದಿತ್ತು.

ಇಬ್ಬರು ನಾಯಕಿಯರು

'ಸಂಹಾರ' ಸಿನಿಮಾದಲ್ಲಿ ಚಿರುಗೆ ಇಬ್ಬರು ನಾಯಕಿಯರು. ಹರಿಪ್ರಿಯಾ ಮತ್ತು ಕಾವ್ಯಶೆಟ್ಟಿ ಈ ಸಿನಿಮಾದ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಯಾರಿದ್ದಾರೆ..?

'ಸಂಹಾರ' ಚಿತ್ರದಲ್ಲಿ ಚಿರು ಜೊತೆ ಚಿಕ್ಕಣ್ಣ ಕಾಮಿಡಿ ಕಚಗುಳಿ ಇಡಲಿದ್ದಾರೆ. 'ಉಗ್ರಂ' ಖ್ಯಾತಿಯ ರವಿ ಬಸ್ರೂರ್ ಸಂಗೀತ, ಜೆ.ಎಸ್.ವಾಲಿ ಕ್ಯಾಮರಾ ಕೈಚಳಕ ಸಿನಿಮಾದಲ್ಲಿರಲಿದೆ.

English summary
Kannada actor Chiranjeevi Sarja's upcoming movie is titled as 'Samhara'. The movie will be directed by Guru Deshpande.
Please Wait while comments are loading...