»   » ಬೆಳ್ಳಿಪರದೆಗೆ ಜಿಗಿದ ಚಿತ್ರದುರ್ಗದ ಕೋತಿರಾಜ

ಬೆಳ್ಳಿಪರದೆಗೆ ಜಿಗಿದ ಚಿತ್ರದುರ್ಗದ ಕೋತಿರಾಜ

Posted By:
Subscribe to Filmibeat Kannada
Jyothi Raj
ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತರಾಗಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ ಬೆಳ್ಳಿಪರದೆಗೆ ಜಿಗಿದಿದ್ದಾರೆ. ಈ ಮೂಲಕ ಹಾಲಿವುಡ್ ಸ್ಪೈಡರ್ ಮ್ಯಾನ್ ಗೆ ಭಾರಿ ಸವಾಲೊಡ್ಡಲಿದ್ದಾರೆ. ಅದು ಏಳು ಸುತ್ತಿನ ಕೋಟೆಯೇ ಇರಲಿ, ಗರುಡಗಂಬವೇ ಆಗಿರಲಿ, ಜೋಗ ಜಲಪಾತವಾದರೂ ಸರಿ ಬರಿಗೈಯಲ್ಲಿ ಮಂಗನಂತೆ ಈತ ಸರಸರನೆ ಏರಿಬಿಡುತ್ತಾನೆ.

ಹಾಗಾಗಿ ಈತನನ್ನು ಜನ ಪ್ರೀತಿಯಿಂದ ಕೋತಿ ರಾಜ, ಕೋತಿ ಮನುಷ್ಯ, ಮಂಕಿ ಮ್ಯಾನ್ ಎಂದು ಕರೆಯುತ್ತಾರೆ. ಈ ಬಗ್ಗೆ ಆತನಿಗೇನು ಬೇಸರವೂ ಇಲ್ಲ, ಯಾವುದೇ ನೋವು ಇಲ್ಲ. ಜನ ಹಾಗೆ ಕರೆಯುತ್ತಿದ್ದರೆ ಹೆಮ್ಮೆಯಿಂದ ಬೀಗುತ್ತಾನೆ. ಮತ್ತಷ್ಟು ಸಾಹಸಗಳನ್ನು ಮಾಡುತ್ತಾನೆ. ಅವರು ಪ್ರೀತಿಯಿಂದ ಕೊಟ್ಟರೆ ತಗೋತಾನೆ ಇಲ್ಲದಿದ್ದರೆ ಇಲ್ಲ.

ಈಗ ಜ್ಯೋತಿರಾಜ್ ಅವರು ಅಭಿನಯಿಸಲಿರುವ ಚಿತ್ರಕ್ಕೆ 'ಜ್ಯೋತಿ ಅಲಿಯಾಸ್ ಕೋತಿರಾಜ' ಎಂದು ಹೆಸರಿಡಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಶೈಲಾ ಡೇವಿಡ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸೆಬಾಸ್ಟಿಯನ್ ಡೇವಿಡ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಹಿಂದೆ ಸೆಬಾಸ್ಟಿಯನ್ ಅವರು 'ಅನಿಶ್ಚಿತ' ಹಾಗೂ 'ಕಳ್ಳ ಬಂದ ಕಳ್ಳ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕೋತಿ ರಾಜನಿಗೆ ಇಬ್ಬರು ನಾಯಕಿಯರು. ಒಬ್ಬ ನಾಯಕ ನಟಿ ಅಶ್ವಿನಿ ಈಗಾಗಲೆ ಆಯ್ಕೆಯಾಗಿದ್ದಾರೆ. ಇನ್ನೊಬ್ಬರ ಆಯ್ಕೆ ನಡೆಯುತ್ತಿದೆ.

ಇನ್ನು ಕೋತಿರಾಜನ ಬಗ್ಗೆ ಹೇಳಬೇಕು ಅಂದ್ರೆ...ಚೆನ್ನೈನಿಂದ ಈತ ಚಿತ್ರದುರ್ಗಕ್ಕೆ ಬಂದಿದ್ದೇ ಒಂದು ಸಾಹಸಗಾಥೆ. ಚಿತ್ರದುರ್ಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಬೆಟ್ಟದ ಮೇಲಿಂದ ಕೆಳಗೆ ಜಿಗಿದ ಈತ ಬಚಾವಾಗಲು ಟ್ರೈ ಮಾಡಿ ಬದುಕುಳಿದ. ತನ್ನಲ್ಲಿರುವ ಸಂಥಿಂಗ್ ಸ್ಪೆಷಲ್ ಈತನಿಗೆ ಗೊತ್ತಾಗಿದ್ದೇ ಆಗ. ಅಲ್ಲಿಂದ ಕೋತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವರ್ಷಗಳಲ್ಲೆ ಅವುಗಳಂತೆ ಹತ್ತಲು ಕಲಿತ. (ಏಜೆನ್ಸೀಸ್)

English summary
Chitradurga Jyothi Raj (24) is known as India's Spider-man is is all set to make his debut as an actor in a new film called 'Jyothi Aliyas Kothiraja' which is all said to be launched in the month of December, 2013.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada