twitter
    For Quick Alerts
    ALLOW NOTIFICATIONS  
    For Daily Alerts

    ದಶಕದಲ್ಲಿ ಸಂಭ್ರಮದಲ್ಲಿರುವ 'ಚಿತ್ತಾರ'ದ ಸಾಧನೆ ತಿಳಿಯಬೇಕು

    |

    Recommended Video

    ಚಿತ್ತಾರದ ಹತ್ತು ವರ್ಷದ ಸಾಧನೆಗೆ ಭೇಷ್ ಎಂದ ಸ್ಯಾಂಡಲ್ ವುಡ್..! | FILMIBEAT KANNADA

    ಯಾವುದೇ ಒಂದು ಸಾಧನೆಯ ಹಿಂದೆ, ಯಾವಾಗ್ಲೂ ಇರೋದು ಒಂದು ಒಳ್ಳೆ ಉದ್ದೇಶ ಹಾಗೂ ಅದನ್ನ ಸಾಧಿಸುವ ಹಠ, ಎಡಬಿಡದ ಇಚ್ಚಾಶಕ್ತಿ. ಈ ಎಲ್ಲದರ ಸಂಗಮದಲ್ಲಿ ಸರಿಯಾಗಿ 10 ವರ್ಷಗಳ ಹಿಂದೆ ರೂಪುಗೊಂಡ ಕನ್ನಡದ ಸಿನಿಮಾ ಮ್ಯಾಗಜಿನ್ ಹೆಸರೇ 'ಚಿತ್ತಾರ'.

    ಕನ್ನಡ ಸಿನಿ ಪತ್ರಿಕೆಯೊಂದು ತನ್ನ ಇತಿಹಾಸದಲ್ಲೆ ಕಾಣದ ಅಂತರಾಷ್ಟ್ರೀಯ ಗುಣಮಟ್ಟದ ಡಿಸೈನ್, ಪೇಪರ್ ಹಾಗೂ ಪ್ರಿಂಟ್ ಕ್ವಾಲಿಟಿ ಕಂಡು ಚಿತ್ರರಂಗ ಒಂದು ಕ್ಷಣ ಆಶ್ಚರ್ಯಗೊಂಡು ಇಂದಿಗೆ 10ವರ್ಷಗಳು. ಸ್ಯಾಂಡಲ್ ‍ವುಡ್ ಸಿನಿ ಪತ್ರಿಕೆಯಲ್ಲಿದ್ದ ಹಲವು ನ್ಯೂನತೆಗಳಿಗೆ ಕೆ. ಶಿವಕುಮಾರ್ ಚಿತ್ತಾರದ ಮೂಲ ಉತ್ತರವಾದರು. ಚಂದನವನಕ್ಕೂ ಹಾಗೂ ಸಿನಿ ರಸಿಕರ ನಡುವೆ ಒಂದು ಆತ್ಮೀಯ ಬೆಸುಗೆಗೆ ಕಾರಣವಾಗಿ ಬೆಳೆದ ನಿಮ್ಮ ಚಿತ್ತಾರಕ್ಕೆ ಇಂದು ದಶಕದ ಸಂಭ್ರಮ.

    chittara magazine completes 10 year

    ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಪೇಜ್ 3 ಕಂಟೆಂಟ್ ಹುಟ್ಟುಹಾಕಿದ್ದು, ಶ್ರೇಷ್ಠ ಕ್ವಾಲಿಟಿಯ ಎಕ್ಸ್‍ಕ್ಲೂಸಿವ್ ಫೋಟೊ ಫ್ಲೇ, ಸ್ಟಾರ್ ಟಾಕ್, ಸ್ಯಾಂಡಲ್ ‍ವುಡ್ ಲೈವ್, ಚಿತ್ರರಂಗದ ಇತಿಹಾಸ ತಿಳಿಸುವ ಫಿಲ್ಮಿ ಸಂಸಾರ, ಕಡಲಾಚೆಯ ಬೆಳ್ಳಿ ಮೋಡ, ಡಬಲ್ ಕವರ್ ಪೇಜ್, ಪ್ರಶ್ನೋತ್ತರಗಳ ಸರಮಾಲೆ ಉತ್ತರ ಭೂಪ, ಕಥೆಯಲ್ಲ ಬದುಕೆನ್ನುವ ಸಂಪಾದಕರ ಡೈರಿಯಿಂದ, ಅಷ್ಟೇ ಅಲ್ಲದೆ ಹಿರಿ ತಲೆಮಾರಿನ ಸಾಧನೆಗಳನ್ನು ಕಿರಿಯರಿಗೆ ಪರಿಚಯಿಸುವ ಮಾಹಿತಿಗಳು, ವಿಶೇಷ ಸಂದರ್ಶನಗಳು, ಫೋಟೊಶೂಟ್ಗಳ ಜೊತೆಗೆ ಪ್ರತಿ ಸಂಚಿಕೆಯನ್ನು ಸವಾಲಿನಂತೆ ರೂಪಿಸುವ ಅತ್ಯುನ್ನತ ಡಿಸೈನರ್ಸ್, ಲೇಖಕರು, ರಿಪೋಟರ್ಸ್ ಗಳ ತಂಡ ರೂಪಿಸಿದ್ದ ಹೆಗ್ಗಳಿಕೆ ಚಿತ್ತಾರದ್ದು.

    ಹೊಸತನದ ಹಠದಿಂದ ಅರಳಿದ 'ಚಿತ್ತಾರ'ಕ್ಕೆ ದಶಕದ ಮೈಲಿಗಲ್ಲು ಹೊಸತನದ ಹಠದಿಂದ ಅರಳಿದ 'ಚಿತ್ತಾರ'ಕ್ಕೆ ದಶಕದ ಮೈಲಿಗಲ್ಲು

    chittara magazine completes 10 year

    ಕನ್ನಡದ ನಂಬರ್ ಒನ್ ಎಂಟರ್‍ಟೈನ್ ‍ಮೆಂಟ್ ಮ್ಯಾಗಜಿನ್ ಆಗಿ ಚಿತ್ತಾರ ರೂಪುಗೊಳ್ಳುವಲ್ಲಿ ನಮ್ಮ ತಂಡಕ್ಕಿದ್ದ ಕ್ವಾಲಿಟಿ ಬಗೆಗೆಗಿನ ಬದ್ಧತೆ ಹಾಗೂ ನಂಬಿರುವ ಪಾಸಿಟೀವ್ ಜರ್ನಲಿಸಮ್ಮೆ ಕಾರಣ. ಕನ್ನಡ ಸಿನಿಮಾ ಮ್ಯಾಗಜೀನ್ ಜಾಹಿರಾತಿನಲ್ಲಿ ಎಂದು ಕಾಣದ ಬ್ರಾಂಡ್‍ಗಳಾದ ಮರ್ಸಿಡೀಸ್, ಆಡಿ, ಗೋದ್ರೆಜ್, ಹ್ಯುಂಡೈ, ಜಾಗ್ವಾರ್, ಮಿನಿಕೂಪರ್, ಜೀಪ್, ರೆನಾಲ್ಟ್ ಹಾಗೂ ಮುಂತಾದ ಕಂಪನಿಗಳನ್ನು ಪರಿಚಯಿಸಿದ ಹೆಗ್ಗಳಿಕೆ ಚಿತ್ತಾರದ್ದು.

    ಕರ್ನಾಟಕ ಮಾತ್ರವಲ್ಲದೆ ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಕೊಚ್ಚೀನ್, ಗೋವಾ, ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲೂ ಅಲ್ಲದೆ ಸಿಂಗಪುರ, ದುಬೈ, ಆಸ್ಟ್ರೇಲಿಯಾ, ಶ್ರೀಲಂಕಾ ದೇಶಗಳಲ್ಲಿ ಚಿತ್ತಾರ ಪ್ರತಿಗಳು ಪ್ರತಿ ತಿಂಗಳೂ ಅರಳುತ್ತವೆ. ಜಗತ್ತಿನ ಯಾವ ಭಾಷೆಯ ಸಿನಿ ಮ್ಯಾಗಜಿನ್ಗೂ ಕಡಿಮೆ ಇಲ್ಲದ ಕ್ವಾಲಿಟಿಯನ್ನು ಸತತ 10ವರ್ಷಗಳ ಕಾಲ ಕಾಪಿಟ್ಟುಕೊಂಡು ಬಂದ ನಮ್ಮ ಪತ್ರಿಕೆ, ಕನ್ನಡದ ಎಲ್ಲಾ ಸ್ಟಾರ್‍ಗಳ ಫೋಟೋಶೂಟ್ ಮಾಡಿ ಒಂದು ಟ್ರೆಂಡ್ ಹುಟ್ಟು ಹಾಕಿದ್ದು ಹೆಗ್ಗಳಿಕೆಗಳಲ್ಲಿ ಒಂದು.

    chittara magazine completes 10 year

    ಕರ್ನಾಟಕದಲ್ಲೇ ನೆಲೆಸಿರುವ ಪರಭಾಷಿಗ ಓದುಗರಿಗೆ ಚಂದನವನದ ಕಂಪು ತಲುಪಿಸಲು ನಾವು ಮುಂದಡಿ ಇಟ್ಟು ರೂಪಿಸಿದ್ದೆ ಝೂಮ್ ಎಂಬ ಇಂಗ್ಲಿಷ್ ಮ್ಯಾಗಜಿನ್. ನಂತರ 'ಸಿ ಮ್ಯೂಸಿಕ್' ಎಂಬ ಆಡಿಯೋ ಕಂಪನಿಯ ಮೂಲಕ ಹೊಸಬರ ಚಿತ್ರಕ್ಕೆ ವೇದಿಕೆ ಕಲ್ಪಿಸಿದ್ದು ನಮ್ಮ ಚಿತ್ತಾರ. ಕನ್ನಡದ ಸ್ಟಾರ್ ನಟರಿಂದ 'ರೀ ಇದು ಚಿತ್ತಾರ, ಕನ್ನಡದ ಫಿಲ್‍ಫೇರ್ ಕಣ್ರಿ' ಎಂದು ಹೊಗಳಿಸಿಕೊಂಡ ಕನ್ನಡದ ಏಕೈಕ ಪತ್ರಿಕೆ ಚಿತ್ತಾರ.

    ಸದಾ ಹೊಸಬರನ್ನು ಪ್ರೋತ್ಸಾಹಿಸುವ, ಹಿರಿಯ ಸ್ಟಾರ್ಗಳ ಬಗ್ಗೆ ವಿಶೇಷ ಲೇಖನ ರೂಪಿಸುವ, ಒಳ್ಳೆ ಪ್ರತಿಭೆಗಳಿಗೆ ಬೆನ್ನು ತಟ್ಟುವ ನಮ್ಮ ಕೆಲಸಕ್ಕೆ ಇಡೀ ಚಿತ್ರರಂಗ ಹಾಗೂ ಓದುಗರು ಮೆಚ್ಚುಗೆ ಸೂಚಿಸಿದ್ದಾರೆ. ಒಂದು ದಶಕದಿಂದ ಕನ್ನಡ ಸಿನಿಮಾರಂಗಕ್ಕೆ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವ ಚಿತ್ತಾರದ ಮುಂದೆ ಇನ್ನೂ ಹತ್ತು ಹಲವು ಯೋಜನೆಗಳಿವೆ. ಹಲವಾರು ಕನಸುಗಳಿವೆ. ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು, ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಚಿತ್ತಾರದ ಘಮ ಅರಳಿಸುವುದು ಪ್ರಮುಖವಾದವು.

    English summary
    Karnataka's no number 1 entertainment monthly magazine chittara have celebrating 10th year anniversary.
    Friday, April 26, 2019, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X