»   » ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.!

ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.!

By: Naveen
Subscribe to Filmibeat Kannada

ಇದಕ್ಕೆ ವಿಪರ್ಯಾಸ ಎನ್ನಬೇಕೋ... ಕನ್ನಡಿಗರ ದುರಂತ ಎನ್ನಬೇಕೋ... ಕ್ರೇಜ್ ಅಂತ ಸುಮ್ಮನಾಗಬೇಕೋ... ನಮಗ್ಯಾಕೆ ಅಂತ ಬಿಟ್ಟುಬಿಡಬೇಕೋ... ನಮಗಂತೂ ಗೊತ್ತಾಗುತ್ತಿಲ್ಲ.! ಒಟ್ನಲ್ಲಿ ಇತ್ತೀಚೆಗಷ್ಟೇ 'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದ ಕರ್ನಾಟಕ ಸಿ.ಎಂ ಸಿದ್ದರಾಮಯ್ಯ ಇದೀಗ 'ಬಾಹುಬಲಿ-2' ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಅದು ಬರೋಬ್ಬರಿ ಸಾವಿರ ರೂಪಾಯಿ ಕೊಟ್ಟು.! ['ಮಲ್ಟಿಪ್ಲೆಕ್ಸ್'ಗಳಲ್ಲಿ ರೂ.200 ಟಿಕೆಟ್ ದರ: ಇನ್ನೆರೆಡು ದಿನಗಳಲ್ಲಿ ಅಧಿಕೃತ]

ಮಲ್ಟಿಪ್ಲೆಕ್ಸ್ ಗಳಲ್ಲಿ ಇನ್ಮುಂದೆ ಟಿಕೆಟ್ ಗಳ ಬೆಲೆ 200 ರೂಪಾಯಿ ದಾಟುವಂತಿಲ್ಲ ಎಂದು ಬಜೆಟ್ ನಲ್ಲಿ ಘೋಷಿಸಿದ್ದ ಸಿ.ಎಂ ಸಿದ್ದರಾಮಯ್ಯ ರವರೇ ಇಂದು ಒರಾಯನ್ ಮಾಲ್ ನ ಪಿ.ವಿ.ಆರ್ ನಲ್ಲಿ ಸಾವಿರ ರೂಪಾಯಿ ಕೊಟ್ಟು ಪರಭಾಷೆ ಚಿತ್ರ ವೀಕ್ಷಿಸಿದ್ದಾರೆ.! ಮುಂದೆ ಓದಿ....

'ಬಾಹುಬಲಿ-2' ಚಿತ್ರಕ್ಕೆ ಸಿ.ಎಂ ಸಾಹೇಬ್ರು ಫಿದಾ

'ಬಾಹುಬಲಿ-2' ಸಿನಿಮಾ ಎಷ್ಟು ಕ್ರೇಜ್ ಹುಟ್ಟಿಸಿದೆ ಅಂದ್ರೆ, ಅದಕ್ಕೆ ನಮ್ಮ ಕರ್ನಾಟಕದ ಸಿ.ಎಂ ಸಿದ್ದರಾಮಯ್ಯ ಕೂಡ ಫಿದಾ ಆಗಿದ್ದಾರೆ. [ಏಪ್ರಿಲ್ 27ರಿಂದಲೇ 'ಮಲ್ಟಿಪ್ಲೆಕ್ಸ್'ಗಳಲ್ಲಿ ರೂ 200 ಟಿಕೆಟ್ ದರ ಜಾರಿ: ಸಾ.ರಾ ಗೋವಿಂದು!]

ಒರಾಯನ್ ಮಾಲ್ ನಲ್ಲಿ 'ಬಾಹುಬಲಿ-2' ವೀಕ್ಷಣೆ

ಇಂದು ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುಟುಂಬ ಹಾಗೂ ಬೆಂಬಲಿಗರ ಸಮೇತ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಿದರು.

ಸಿ.ಎಂ ಕೊಟ್ಟ ದುಡ್ಡು ಎಷ್ಟು ಗೊತ್ತಾ.?

ಇದಕ್ಕೆ ದುರಂತ ಅಂತೀರೋ... ಇಲ್ಲ ನಮ್ಮ ಹಣೆಬರಹವೇ ಇಷ್ಟು ಅಂತ ಗೊಣಗುತ್ತೀರೋ... ನಿಮಗೆ ಬಿಟ್ಟಿದ್ದು. ಯಾಕಂದ್ರೆ, 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಲು ಸ್ವತಃ ಸಿ.ಎಂ ಸಿದ್ದರಾಮಯ್ಯ ತೆತ್ತಿರುವ ಟಿಕೆಟ್ ಬೆಲೆ ತಲೆಗೆ 1050 ರೂಪಾಯಿ.!

200 ರೂಪಾಯಿ ಫಿಕ್ಸ್ ಮಾಡಿದವರೇ ಕೊಟ್ಟರಲ್ಲ ಸಾವಿರ ರೂಪಾಯಿ.!

ಮಲ್ಟಿಪ್ಲೆಕ್ಸ್ ಗಳಲ್ಲಿ ಏಕ ರೂಪ ಪ್ರವೇಶ ದರ ಜಾರಿಯಾಗುವಂತೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಟಿಕೆಟ್ ಬೆಲೆ 200 ರೂಪಾಯಿ ದಾಟುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಆದ್ರೆ, ಈಗ ಸಿದ್ದರಾಮಯ್ಯರವರೇ 1050 ರೂಪಾಯಿ ಕೊಟ್ಟು ಪರಭಾಷಾ ಚಿತ್ರ 'ಬಾಹುಬಲಿ-2' ವೀಕ್ಷಿಸಿದ್ದಾರೆ.

ಜಾರಿ ಯಾವಾಗ ಆಗುತ್ತೋ.?

ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂಪಾಯಿ ಪ್ರವೇಶ ದರ ನಿಗದಿಗೆ ಹೊರಡಿಸಿರುವ ಆದೇಶ ಪ್ರತಿಗೆ ಸಿ.ಎಂ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಅದು ಎಂದಿನಿಂದ ಜಾರಿಗೆ ಬರುತ್ತೋ.? ದೇವರೇ ಬಲ್ಲ.!

English summary
Karnataka Chief Minister Siddaramaiah watched 'Baahubali-2' movie today (May 1st) by paying Rs.1050 per ticket.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada