ತ್ರಿಡಿ ಚಿತ್ರದಲ್ಲಿ 'ಸುಂದರಿ ಗಂಡ ಸದಾನಂದ' ಶರಣ್

ಆದರೆ ಈ ತ್ರಿಡಿ ಚಿತ್ರಕ್ಕೆ ತ್ರಿಡಿ ಕನ್ನಡಕ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಬಹುದು. ಅದು ಹೇಗೆ ಅಂತೀರಾ. ನೀವೆಲ್ಲಾ ತಿಳಿದುಕೊಂಡಿರುವಂತೆ ಇದು ಕನ್ನಡಕ ಹಾಕಿಕೊಂಡು ನೋಡುವ ತ್ರಿಡಿ ಚಿತ್ರವಲ್ಲ. ಶರಣ್ ಅವರೇ ಹೇಳುವಂತೆ ತ್ರಿಡಿ ಎಂದರೆ 'ದಗಲ್ಬಾಜಿ, ದಗಾಕೋರ, ಡೌವ್ ರಾಜ'. ಇವೇ ಆ ಮೂರು ತ್ರಿ'ಡಿ'ಗಳು!
ಈ ಚಿತ್ರದ ಶೂಟಿಂಗ್ ಈಗಾಗಲೆ ಮುಗಿದಿದೆ. 'ರ್‍ಯಾಂ ಬೋ' ಚಿತ್ರದಲ್ಲಿ ಐಟಂ ಹಾಡೂ ಒಂದಿದೆ. ವಿದೇಶಿ ಹಾಟ್ ಹುಡುಗಿಯರ ಜೊತೆ ಶರಣ್ ಹೆಜ್ಜೆಹಾಕಿದ್ದಾರೆ. ಈ ಹಾಡು ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸ ಶರಣ್ ಅವರದು.
ಒಟ್ಟು 40 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಸಂಕಲನ ಹಾಗೂ ಮಾತುಗಳ ಜೋಡಣೆ ಮುಗಿದಿದೆ. ಇನ್ನು ಡಿ.ಐ. ತಂತ್ರಜ್ಞಾನ ಅಳವಡಿಕೆ ಮಾತ್ರ ಬಾಕಿ ಇದೆ. ಚಿತ್ರದ ನಿರ್ದೇಶಕರು ಎಂ.ಎಸ್.ಶ್ರೀನಾಥ್. ಮಾಡಬಾರದ್ದನ್ನು ಮಾಡಿದರೆ ಆಗಬಾರದು ಆಗುತ್ತದೆ ಎಂಬುದೇ ಚಿತ್ರದ ಕಥಾ ಹಂದರ.
ಅಟ್ಲಾಂಟಾ ನಾಗರಾಜ್ ಹಾಗೂ ಶರಣ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ತಾರಾಬಳಗದಲ್ಲಿ ಮಾಧುರಿ, ತಬಲಾ ನಾಣಿ, ರಂಗಾಯಣ ರಘು, ಸಾಧು ಕೋಕಿಲ, ಶ್ರುತಿ, ಉಮಾಶ್ರೀ, ಉಮೇಶ್, ಕಾಶಿ, ಧರ್ಮ, ಕುರಿಗಳು ಪ್ರತಾಪ್ ಹಾಸ್ಯ ಕಲಾವಿದರ ದೊಡ್ಡ ಬಳಗವೇ ಇದೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











