ತುಳಸಿಗೆ ಗಾಂಜಾ ಹೋಲಿಕೆ: ನಟಿ ನಿವೇದಿತಾ ವಿರುದ್ಧ ದೂರು

ಗಾಂಜಾ ಗಿಡವನ್ನು ತುಳಸಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended Video

Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

ಗಾಂಜಾ ಗಿಡವು ವೈದ್ಯಕೀಯ ಗುಣಗಳನ್ನು ಹೊಂದಿದೆ. ಆಯುರ್ವೇಧದಲ್ಲಿ ಅದರ ಬಳಕೆ ಹೆಚ್ಚಿದೆ. ಅದೂ ಸಹ ತುಳಸಿಯಂತೆಯೇ ಪವಿತ್ರವಾದ ಗಿಡ ಎಂದು ನಟಿ ನಿವೇದಿತಾ ಹೇಳಿದ್ದರು.

ನಿವೇದಿತಾ ಹೇಳಿಕೆ ವಿರೋಧಿಸಿ, ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎ.ದೀಪಕ್ ಎಂಬುವರು ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

Complaint Against Nivedhitha For Hurting Religious Sentiments

'ಪವಿತ್ರ ತುಳಸಿ ಗಿಡವನ್ನು ಗಾಂಜಾ ಗಿಡಕ್ಕೆ ಹೋಲಿಕೆ ಮಾಡಿರುವ ನಿವೇದಿತಾ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ' ಎಂದು ಎ.ದೀಪಕ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಗಾಂಜಾವು ಆಯುರ್ವೇಧದ ಪ್ರಮುಖ ಭಾಗ, ಅದರಲ್ಲಿ ಸಾಕಷ್ಟು ಔ‍ಷಧೀಯ ಗುಣಗಳಿವೆ. ಜನಪದ, ವೇದಗಳಲ್ಲೂ ಗಾಂಜಾದ ಮಹತ್ವದ ಉಲ್ಲೇಖವಿದೆ ಎಂದು ನಟಿ ನಿವೇದಿತ ಹೇಳಿದ್ದರು.

ನಟಿ ನಿವೇದಿತಾ ಮಾತ್ರವಲ್ಲದೆ, ಯುವ ನಟ, ನಿರ್ದೇಶಕ ರಾಕೇಶ್ ಸಹ ಗಾಂಜಾ ಔಷಧೀಯ ಗುಣ ಹೊಂದಿದೆ. ಅದರ ಬಳಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂದಿದ್ದರು.

ಕನ್ನಡ ಚಿತ್ರರಂಗದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಾದಕ ವಸ್ತು ಬಳಕೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿಯನ್ನು ಇಂದು ಸಂಜೆ ಬಂಧಿಸಲಾಗಿದೆ.

More from Filmibeat

English summary
Complaint lodge against actress Nivedhitha for hurting religious sentiments from comparing cannabis to Tulasi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X