»   » ಹುಚ್ಚ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತಾ?

ಹುಚ್ಚ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತಾ?

Posted By:
Subscribe to Filmibeat Kannada

ಬಿಗ್ ಬಾಸ್ ಮೂಲಕ ಗಾಸಿಪ್ ರಾಜ ಆದ ನಟ ಕಮ್ ನಿರ್ದೇಶಕ ಹುಚ್ಚ ವೆಂಕಟ್ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿದ್ದವರು ಇದೀಗ ಮತ್ತೆ ವೈಲೆಂಟ್ ಆಗಿದ್ದಾರೆ. ಈ ಮೊದಲು 'ಫೈರಿಂಗ್ ಸ್ಟಾರ್' ವೆಂಕಟ್ ಅವರು ನಟ ಕಮ್ ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ಜೊತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು.

ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಎಸ್ ನಾರಾಯಣ್ ಅವರ ಜೊತೆ ಸೇರಿಕೊಂಡು ಹುಚ್ಚ ವೆಂಕಟ್ ಅವರು ಮಾಡಬೇಕಾಗಿದ್ದ 'ಡಿಕ್ಟೇಟರ್' ಸಿನಿಮಾವನ್ನು ಅವರು ಮುಂದುವರಿಸುತ್ತಿಲ್ಲವಂತೆ. ಮಾತ್ರವಲ್ಲದೇ, ಅವರ ಜೊತೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ವೆಂಕಟ್ ಅವರು ನುಡಿದಿದ್ದಾರೆ.[ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!]

Controversial actor-director Huccha Venkat quits S.Narayan's 'Dictator'

'ಡಿಕ್ಟೇಟರ್' ಚಿತ್ರಕ್ಕೆ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರು ಆಕ್ಷನ್-ಕಟ್ ಹೇಳಬೇಕಿದ್ದು, ನಿರ್ಮಾಪಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಾಜಿ ಅಧ್ಯಕ್ಷ ಬಿ ವಿಜಯ್ ಕುಮಾರ್ ಅವರು ಬಂಡವಾಳ ಹೂಡಬೇಕಾಗಿತ್ತು.['ಡಿಕ್ಟೇಟರ್' ಆದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್]

ಆದರೆ ವಿಪರ್ಯಾಸ ಎಂದರೆ ಇದೀಗ ಸಿನಿಮಾ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. 'ಡಿಕ್ಟೇಟರ್' ಸಿನಿಮಾ ಮಾಡುತ್ತೇನೆ ಎಂದು ಹೇಳಿ ಕಾಲ್ ಶೀಟ್ ಪಡೆದು ನನ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ನಾನು ಚಿತ್ರದಿಂದ ಹೊರಬಂದಿದ್ದೇನೆ' ಎಂದು ಫೈರಿಂಗ್ ಸ್ಟಾರ್ ವೆಂಕಟ್ ಅವರು ಎಸ್ ನಾರಾಯಣ್ ಅವರ ಮೇಲೆ ಸಖತ್ ಫೈರ್ ಮಾಡಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]

Controversial actor-director Huccha Venkat quits S.Narayan's 'Dictator'

'ಯಾರಿಗೂ ನಾನು ತಗ್ಗಿ-ಬಗ್ಗಿ ನಡೆಯುವುದಿಲ್ಲ, ಆದ್ದರಿಂದ ನನ್ನಿಷ್ಟದಂತೆ ನನ್ನ ಬ್ಯಾನರ್ ನ ಚಿತ್ರಗಳಲ್ಲಿ ಮಾತ್ರ ನಾನು ಅಭಿನಯಿಸುತ್ತೇನೆ. 'ಡಿಕ್ಟೇಟರ್' ಚಿತ್ರಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಆ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ ಎಂಬ ಕಾರಣಕ್ಕೆ ಸಂತೋಷಗೊಂಡಿದ್ದರೇ ಹೊರತು ಎಸ್ ನಾರಾಯಣ್ ನಿರ್ದೇಶನದ ಚಿತ್ರ ಅಂತಲ್ಲ' ಎಂದು ವೆಂಕಟ್ ಗುಡುಗಿದ್ದಾರೆ.

English summary
‘Bigg Boss' controversial actor-director Huccha Venkat quits S.Narayan directorial Kannada Movie 'Dictator'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada