For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಬರಲು ಪೂನಂ ಪಾಂಡೆ ಪಡೆದುಕೊಂಡ ಸಂಭಾವನೆ ಎಷ್ಟು?

  By Suneetha
  |

  ಬಿಚ್ಚಮ್ಮ ಅಂತಾನೇ ಖ್ಯಾತಿ ಹೊಂದಿರುವ ನಟಿ ಪೂನಂ ಪಾಂಡೆ ಅವರು ಇದೀಗ ಉದ್ಯಾನ ನಗರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಒಂದಲ್ಲಾ ಒಂದು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತಿದ್ದ ನಟಿ ಪೂನಂ ಪಾಂಡೆ ಅವರು ಇದೀಗ ತೆಲುಗು ಚಿತ್ರದ ನಂತರ ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲಿದ್ದಾರೆ.

  ಈ ಮೊದಲು 'ಲವ್ ಇಸ್ ಪಾಯಿಸನ್' ಎಂಬ ಕನ್ನಡ ಚಿತ್ರದಲ್ಲಿ ಒಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದ ಹಾಟ್ ನಟಿ ಪೂನಂ ಪಾಂಡೆ ಅವರು ಇದೀಗ ಹಾರರ್ ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಮಂದಿಗೂ ನಿದ್ದೆಗೆಡಿಸಲು ತಯಾರಾಗಿದ್ದಾರೆ.[ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂನಂ ಪಾಂಡೆ.!]

  ನವ ನಿರ್ದೇಶಕ ಯುವರಾಜ್ ಎಂಬುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇವರಿಗೆ ಇದು ಕನ್ನಡದ ಚೊಚ್ಚಲ ಸಿನಿಮಾವಾಗಿದೆ. ಅಂದಹಾಗೆ ಇವರಿಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಈ ಹಿಂದೆ ಕೆಲಸ ಮಾಡಿರುವ ಅನುಭವ ಇದೆ.[ಪೂನಂ ಪಾಂಡೆ ಯೋಗ ಭಾವಭಂಗಿ ವಿಡಿಯೋ]

  ಇದೀಗ ನಟಿ ಪೂನಂ ಪಾಂಡೆ ಅವರು ನಿರ್ದೇಶಕರು ಮತ್ತು ಚಿತ್ರತಂಡದ ಜೊತೆ ನಿನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನು ಓದಲು ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ...

  ನಿರ್ದೇಶಕ ಯುವರಾಜ್ ಮಾತುಗಳು..

  ನಿರ್ದೇಶಕ ಯುವರಾಜ್ ಮಾತುಗಳು..

  "ನಮಗೆ ಹೊಸ ನಟಿಯೊಬ್ಬರ ಅವಶ್ಯಕತೆ ಇತ್ತು. ಅವರು ಕನ್ನಡದಲ್ಲಿ ಯಾವುದೇ ಪೂರ್ಣ ಪ್ರಮಾಣದ ಪಾತ್ರದಲ್ಲಿ ಇದುವರೆಗೆ ಅಭಿನಯಿಸಿಲ್ಲವಾದ್ದರಿಂದ ಇದು ಪೂನಂ ಪಾಂಡೆ ಅವರಿಗೆ ಖಂಡಿತ ಅತ್ಯುತ್ತಮ ಆಯ್ಕೆಯಾಗಿರುತ್ತದೆ" ಎನ್ನುತ್ತಾರೆ ನಿರ್ದೇಶಕ ಯುವರಾಜ್ ಅವರು.[ಮತ್ತೆ ರಂಗದಲ್ಲಿ ಸೊಂಟ ಬಳುಕಿಸಲು ಪೂನಂ ರೆಡಿ]

  ಹಾರರ್ ಜೊತೆಗೆ ರೋಮ್ಯಾನ್ಸ್

  ಹಾರರ್ ಜೊತೆಗೆ ರೋಮ್ಯಾನ್ಸ್

  "ಇದು ಬರೀ ಹಾರರ್ ಸಿನಿಮಾ ಮಾತ್ರವಲ್ಲದೇ, ಇದರಲ್ಲಿ ರೋಮ್ಯಾನ್ಸ್ ದೃಶ್ಯಗಳು ಕೂಡ ಇರುತ್ತದೆ. ಅಂದಹಾಗೆ ನಟಿ ಪೂನಂ ಅವರ ನಟನಾ ಕೌಶಲ್ಯವನ್ನು ಹೊರಗೆಳೆಯಲು ಸವಾಲಾಗುವ ಸಿನಿಮಾ ಇದು" ಎನ್ನುವುದು ನಿರ್ದೇಶಕರ ಅಭಿಪ್ರಾಯ.

  ಬೋಲ್ಡ್ ಲುಕ್ ನಲ್ಲಿ ಪೂನಂ

  ಬೋಲ್ಡ್ ಲುಕ್ ನಲ್ಲಿ ಪೂನಂ

  ಪೂನಂ ಪಾಂಡೆ ಅಂದರೆ ಹಾಗೆ ಅವರು ನಟಿಸುವ ಚಿತ್ರದಲ್ಲಿ ಬೋಲ್ಡ್ ನೆಸ್ ಇರಲೇಬೇಕು. ಹಾಗೆ ಈ ಬಾರಿ ಪಡ್ಡೆ ಹೈಕಳ ಆಸೆಗೆ ತಣ್ಣೀರು ಎರಚಲಿಲ್ಲ ಪೂನಂ ಅವರು. ಹೌದು ಈ ಚಿತ್ರದಲ್ಲಿ ಕೂಡ ಪೂನಂ ಅವರು ಸಖತ್ ಹಾಟ್ ಅಂಡ್ ಬೋಲ್ಡ್ ಲುಕ್ ನಲ್ಲಿ ಮಿಂಚಲಿದ್ದಾರೆ.

  ಪೂನಂ ಪಡೆದುಕೊಂಡ ಸಂಭಾವನೆ

  ಪೂನಂ ಪಡೆದುಕೊಂಡ ಸಂಭಾವನೆ

  ಅಂದಹಾಗೆ ನೈನ್ ಸ್ಟಾರ್ ಎಂರ್ಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕಾಗಿ ನಟಿ ಪೂನಂ ಪಾಂಡೆ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?. ಬರೋಬ್ಬರಿ 1 ಕೋಟಿ ರೂಪಾಯಿ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

  ನಾಯಕಿ ಆಧಾರಿತ ಸಿನಿಮಾ

  ನಾಯಕಿ ಆಧಾರಿತ ಸಿನಿಮಾ

  ಈ ಹಾರರ್-ಥ್ರಿಲ್ಲರ್ ಸಿನಿಮಾ ಸಂಪೂರ್ಣ ನಾಯಕಿ ಆಧಾರಿತ ಸಿನಿಮಾವಾಗಿದ್ದು, ನಟಿ ಪೂನಂ ಪಾಂಡೆ ಅವರೇ ಇಡೀ ಚಿತ್ರದ ಕೇಂದ್ರ ಬಿಂದು. ಜೊತೆಗೆ ಮೂವರು ನಟರು ಕಾಣಿಸಿಕೊಳ್ಳಲಿದ್ದು, ಸದ್ಯಕ್ಕೆ ಬೆಂಗಳೂರಿನ ಹುಡುಗ ರಾಜೀವ್ ರಾಥೋಡ್ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಪಾತ್ರಗಳ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

  English summary
  Controversial actress Poonam Pandey After a Hindi film, followed by one in Telugu, she is now getting a big role in Sandalwood. Love is Poison, she will now be seen in a fullfleged role. This is also Yuvaraj's first film in Kannada as director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X