For Quick Alerts
  ALLOW NOTIFICATIONS  
  For Daily Alerts

  'ಕಂಟ್ರಿಮೇಡ್ ಚಾರಿ' ಸಿನಿಮಾದ ರಗಡ್ ಫಸ್ಟ್ ಲುಕ್ ರಿವೀಲ್

  |

  'ಕಂಟ್ರಿಮೇಡ್ ಚಾರಿ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಪೋಸ್ಟರ್ ನೋಡುತ್ತಿದ್ದರೆ, ಇದೊಂದು ಹೊಸ ಬಗೆಯ ಸಿನಿಮಾ ಆಗಬಹುದು ಎನ್ನುವ ನಿರೀಕ್ಷೆ ಶುರುವಾಗಿದೆ.

  ಈ ಸಿನಿಮಾವನ್ನು 'ಪುಷ್ಪಕ ವಿಮಾನ' ಚಿತ್ರದ ನಿರ್ದೇಶಕ ಎಸ್ ರವೀಂದ್ರನಾಥ್ ಡೈರೆಕ್ಟ್ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ ಆಗಿದ್ದು, ಕ್ಲಾಸ್ ಬಳಿಕ ಕಥೆ ಹೇಳಲು ಬಂದಿದ್ದಾರೆ.

  'ಪುಷ್ಪಕ ವಿಮಾನ' ನಿರ್ದೇಶಕನ ಹೊಸ ಸಿನಿಮಾ ಪ್ರಾರಂಭ

  'ಕಂಟ್ರಿಮೇಡ್ ಚಾರಿ' ಪೋಸ್ಟರ್ ರಗಡ್ ಆಗಿದೆ. ಚಿತ್ರದ ಟೈಟಲ್ ಕೂಡ ಗಮನ ಸೆಳೆಯುವಂತೆ ಮಾಡಿದೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, 1995ರ ಅವಧಿಯ ಕಥೆ ಇಲ್ಲಿ ಇರಲಿದೆ.

  ಸದ್ಯಕ್ಕೆ, ಸಿನಿಮಾದ ನಾಯಕನ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯ ಮಾಡಲಾಗಿದೆ. ಶಿವಾಂಕ್ ಸಿನಿಮಾದ ಹೀರೋ ಆಗಿದ್ದಾರೆ. ಉಳಿದ ಪಾತ್ರ ವರ್ಗದ ವಿವರ ಮುಂದಿನ ದಿನದಲ್ಲಿ ತಿಳಿಯಲಿದೆ.

  ಸಿನಿಮಾಗೆ ಸುಶೀಲ್ ಸತ್ಯರಾಜ್ ಬಂಡವಾಳ ಹಾಕಿದ್ದಾರೆ. 'ಮಫ್ತಿ' ಖ್ಯಾತಿಯ ಹರೀಶ್ ಕೊಮ್ಮೆ ಸಂಕಲನ, ಗುರು ಕಶ್ಯಪ್ (ಪುಷ್ಪಕ ವಿಮಾನ, ಸುಂದಾರಂಗ ಜಾಣ, ಇನ್ಸಪೆಕ್ಟರ್ ವಿಕ್ರಂ ದೇವಕಿ) ಸಂಭಾಷಣೆ, ನೋಬಿನ್ ಪೌಲ್ ಸಂಗೀತ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಸ್‌ಕೆ ರಾವ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.

  English summary
  'Pushpaka Vimana' fame director S Ravindranath 2nd movie 'Country Made Chaari' first look out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X