twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಕ್ಷೇತ್ರದಿಂದ ಸಿಪಿ.ಯೋಗೇಶ್ವರ್ ಎಂಎಲ್‌ಸಿ: ಹಲವು ನಟರ ನಿರೀಕ್ಷೆ ಹುಸಿ

    |

    ಸಿನಿಮಾ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಮಾಜಿ ನಾಯಕ ನಟ, ಬಿಜೆಪಿ ಪ್ರಮುಖ ಮುಖಂಡ ಸಿ.ಪಿ.ಯೋಗೇಶ್ವರ್ ಅನ್ನು ಆಯ್ಕೆ ಮಾಡಲಾಗಿದೆ.

    Recommended Video

    Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

    ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವಲ್ಲಿ ಸಿಪಿ.ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಆದರೆ ಅದು ಕೈತಪ್ಪಿತ್ತು. ಈಗ ಅವರನ್ನು ಸಿನಿಮಾ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ.

    ಹೊಸ ಪ್ರಮಾಣ ಮಾಡಿದ ರಿಯಲ್ ಸ್ಟಾರ್ ಉಪೇಂದ್ರಹೊಸ ಪ್ರಮಾಣ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

    ಸಿನಿಮಾ ಕ್ಷೇತ್ರದಿಂದ ನಾಮನಿರ್ದೇಶನಗೊಂಡು ಎಂಎಲ್‌ಸಿ ಆಗಲು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಹಲವು ಸಿನಿಮಾ ನಟ-ನಟಿಯರು ಪ್ರಯತ್ನ ನಡೆಸಿದ್ದರು, ನಿರೀಕ್ಷೆಯನ್ನೂ ಇಟ್ಟಿದ್ದರು. ಆದರೆ ಎಲ್ಲರ ನಿರೀಕ್ಷೆ ಹುಸಿಯಾಗಿದೆ.

    ಸೈನಿಕ ಮೂಲಕ ಖ್ಯಾತರಾದ ಯೋಗೇಶ್ವರ್

    ಸೈನಿಕ ಮೂಲಕ ಖ್ಯಾತರಾದ ಯೋಗೇಶ್ವರ್

    ಸೈನಿಕ, ಉತ್ತರ ಧ್ರುವದಿಮ್ ದಕ್ಷಿಣ ಧ್ರುವಕೂ ಸಿನಿಮಾಗಳು ಸಿಪಿ ಯೋಗೇಶ್ವರ್ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳು. ಹಲವು ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಯೋಗೇಶ್ವರ್ ಕೊನೆಯದಾಗಿ ಅಟ್ಟಹಾಸ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಹಲವು ನಟ-ನಟಿಯರು ಯತ್ನಿಸಿದ್ದರು

    ಹಲವು ನಟ-ನಟಿಯರು ಯತ್ನಿಸಿದ್ದರು

    ಇನ್ನು ಸಿನಿಮಾ ಕ್ಷೇತ್ರದಿಂದ ಎಂಎಲ್‌ಸಿ ಆಗಲು ನಟ ಜಗ್ಗೇಶ್, ಮಾಳವಿಕ ಅವಿನಾಶ್, ತಾರಾ, ಗಣೇಶ್ ಪತ್ನಿ, ನಿರ್ಮಾಪಕಿ ಶಿಲ್ಪಾ ಗಣೇಶ್, ನಟಿ ಶ್ರುತಿ ಕಾತರರಾಗಿದ್ದರು. ತಾರಾ ಮತ್ತು ಜಗ್ಗೇಶ್ ಅವರು ಕೆಲವು ಪ್ರಯತ್ನಗಳನ್ನು ಸಹ ಮಾಡಿದ್ದರು. ಆದರೆ ಯೋಗೇಶ್ವರ್‌ ಅವರಿಗೆ ಮಣೆ ಹಾಕಲಾಗಿದೆ.

    ಶಿವರಾಜ್ ಕುಮಾರ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಹಠಾತ್ ಭೇಟಿಶಿವರಾಜ್ ಕುಮಾರ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಹಠಾತ್ ಭೇಟಿ

    ಯಡಿಯೂರಪ್ಪ ಆಪ್ತರಾಗಿರುವ ಯೋಗೇಶ್ವರ್

    ಯಡಿಯೂರಪ್ಪ ಆಪ್ತರಾಗಿರುವ ಯೋಗೇಶ್ವರ್

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿ.ಪಿ.ಯೋಗೇಶ್ವರ್ ಸಾಕಷ್ಟು 'ಶ್ರಮಿಸಿದ್ದರು'. ಅಲ್ಲದೆ ಯಡಿಯೂರಪ್ಪ ಅವರಿಗೆ ಬಹು ಆಪ್ತವಾದ ಬಿಜೆಪಿ ಮುಖಂಡರಲ್ಲಿ ಅವರೂ ಸಹ ಒಬ್ಬರು. ಇನ್ನು ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಕಾರಣ, ಅದೇ ಕ್ಷೇತ್ರದ ಸಿಪಿ.ಯೋಗೇಶ್ವರ್‌ ಅವರನ್ನು ಎಂಎಲ್‌ಸಿ ಮಾಡುವ ಮೂಲಕ ರಾಮನಗರ-ಕನಕಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಹಸಿರಾಗಿಡುವ ಪ್ರಯತ್ನ ಸಹ ಮಾಡಲಾಗುತ್ತಿದೆ.

    ಒಟ್ಟು ಐದು ಮಂದಿಯ ನಾಮನಿರ್ದೇಶನ

    ಒಟ್ಟು ಐದು ಮಂದಿಯ ನಾಮನಿರ್ದೇಶನ

    ಸಿ.ಪಿ.ಯೋಗೇಶ್ವರ್ ಜೊತೆಗೆ ಇನ್ನೂ ನಾಲ್ಕು ಮಂದಿಯನ್ನು ಎಂಎಲ್‌ಸಿಯನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಿಂದ ಎಚ್.ವಿಶ್ವನಾಥ್, ಸಮಾಜ ಸೇವೆ-ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಬಣ್ಣ ತಳವಾರ, ಬುಡಕಟ್ಟು ಸೇವೆ ಪರಿಗಣಿಸಿ ಶಾಂತಾರಾಂ ಸಿದ್ದಿ ಅವರನ್ನು ಆಯ್ಕೆ ಮಾಡಲಾಗಿದೆ.

    ನಟ ಜಗ್ಗೇಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರುನಟ ಜಗ್ಗೇಶ್ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು

    English summary
    BJP leader, former MLA CP Yogeshwar nominated as MLC from cinema field.
    Wednesday, July 22, 2020, 23:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X