»   » ಭ್ರಾಂತಿ ಬೇಡ ಓನ್ಲಿ ಕ್ರಾಂತಿ; ಕ್ರೇಜಿಸ್ಟಾರ್ ರವಿಚಂದ್ರನ್

ಭ್ರಾಂತಿ ಬೇಡ ಓನ್ಲಿ ಕ್ರಾಂತಿ; ಕ್ರೇಜಿಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹುಟ್ಟುಹಬ್ಬ ಮಾಡಿಕೊಳ್ಳುವ ಮೂಡ್‌ನಲ್ಲಿಲ್ಲ. ಆದರೂ ಅವರ ಅಭಿಮಾನಿಗಳ ಒತ್ತಡಕ್ಕೆ ಮಣಿದು ಬುಧವಾರ (ಮೇ 30) ತಮ್ಮ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು.

ಕೇಕ್ ಕತ್ತರಿಸಿ ತಮ್ಮ ಆಪ್ತರು ಹಾಗೂ ಅಭಿಮಾನಿಗಳಿ ತಿನ್ನಿಸುವ ಮೂಲಕ ತಮ್ಮ 52ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಕೊಂಡರು. ಇಂದು ಅವರ ರಾಜಾಜಿನಗರ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಅವರ ನಿವಾಸದ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ.

ಕಳೆದ ಬಾರಿಯೂ ರವಿಚಂದ್ರನ್ ತಮ್ಮ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದರು. 'ಮಂಜಿನ ಹನಿ' ಬಿಡುಗಡೆ ಮಾಡಲಾಗಲಿಲ್ಲವಲ್ಲ ಎಂಬ ಬೇಸರ ಅವರ ಕಳೆದ ವರ್ಷದ ನಿರ್ಧಾರದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಈ ವರ್ಷವೂ ಅವರ ಮಹತ್ವಾಕಾಂಕ್ಷಿ ಚಿತ್ರ 'ಮಂಜಿನ ಹನಿ' ತೆರೆಕಾಣಿಸಲು ಸಾಧ್ಯವಾಗುತ್ತಿಲ್ಲ.

ಹುಟ್ಟುಹಬ್ಬಕ್ಕೂ ಮುನ್ನವೇ ರವಿಚಂದ್ರನ್ ತಮ್ಮ ಇಬ್ಬರು ಪುತ್ರರತ್ನರನ್ನು ಬೆಳ್ಳಿತೆರೆಗೆ ಪರಿಚಯಿಸಿರುವ ಕಾರಣ ಈ ಬಾರಿ ಅವರ ಮುಖದಲ್ಲಿ ಹೆಚ್ಚು ಸಂತೃಪ್ತಿ ಕಾಣುತ್ತಿತ್ತು. ರವಿಚಂದ್ರನ್ ಆಕ್ಷನ್ ಕಟ್ ಹೇಳುತ್ತಿರುವ ಕ್ರೇಜಿಸ್ಟಾರ್ ಚಿತ್ರದಲ್ಲಿ ಅವರ ಇಬ್ಬರು ಪುತ್ರರಿಗೂ ಚಾನ್ಸ್ ನೀಡಿದ್ದಾರೆ.

ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು ಅವರ ಎರಡನೇ ಪುತ್ರ ವಿಕ್ರಮ್ ಈ ಚಿತ್ರದಲ್ಲಿ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. ಕ್ರೇಜಿಸ್ಟಾರ್ ಚಿತ್ರದ ನಿರ್ಮಾಪಕರು ಎನ್ ಎಸ್ ರಾಜಶೇಖರ್.

ಮೂಲಗಳ ಪ್ರಕಾರ ಇದು ಮಲಯಾಳಂನ ಯಶಸ್ವಿ ಚಿತ್ರ 'ಟ್ರಾಫಿಕ್' ರೀಮೇಕ್ ಎನ್ನಲಾಗಿದೆ. ಆದರೆ ರವಿಚಂದ್ರನ್ ಮೂಲ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಅಲ್ಪಸ್ವಲ್ಪ ಬದಲಾವಣೆಗಳನ್ನೂ ಮಾಡಿಕೊಂಡು ತರಲಿದ್ದಾರಂತೆ.

ಕ್ರೇಜಿಲೋಕ, ನರಸಿಂಹ ಚಿತ್ರಗಳ ಆಡಿಯೋ ರಿಲೀಸ್ ಆಗಿದೆ. ಪರಮಶಿವ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಈಗಾಗಲೆ ತೆರೆಕಂಡಿರುವ ದಶಮುಖ ಚಿತ್ರ ಬಾಕ್ಸಾಫೀಸರಲ್ಲಿ ಗೋತಾ ಹೊಡೆದಿದೆ. ಆದರೂ ರವಿಚಂದ್ರನ್ ಸಿಕ್ಕಾಪಟ್ಟೆ ಚಿತ್ರಗಳಿಗೆ ಸಹಿಹಾಕಿದ್ದಾರೆ.

ರವಿಚಂದ್ರನ್ ಯಾಕೆ ಹೀಗೆ ಮಾಡುತ್ತಿದ್ದಾರೋ ಏನೋ ಅವರ ಅಭಿಮಾನಿಗಳಿಗೆ ಗೊತ್ತಾಗುತ್ತಿಲ್ಲ. ಆದರೆ ರವಿಚಂದ್ರನ್ ಈ ರೀತಿ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳಲು ಬಲವಾದ ಕಾರಣವೂ ಇದೆ. ಅದೇನೆಂದರೆ ಅವರ 'ಮಂಜಿನ ಹನಿ' ಚಿತ್ರಕ್ಕಾಗಿ ಹಣ ಹೊಂಚುವುದು.

'ಮಂಜಿನಹನಿ' ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಸಿಕ್ಕಾಪಟ್ಟೆ ಇರುವ ಕಾರಣ ಈ ಚಿತ್ರದ ಬಜೆಟ್ ಎಲ್ಲರ ಊಹೆಗಳನ್ನೂ ತಲೆಕೆಳಗೆ ಮಾಡುತ್ತಿದೆ. ಇದು ಹುಟ್ಟುಹಬ್ಬದ ಸಂದರ್ಭದಲ್ಲಿ ರವಿ ಮಾತನಾಡುತ್ತಾ, "ಇದು ನನ್ನ ಹುಟ್ಟುಹಬ್ಬ ಅಲ್ಲ. ಅಭಿಮಾನಿಗಳ ಹುಟ್ಟುಹಬ್ಬ. ಅವರಿಗಾಗಿ ಈ ಸೆಲಬ್ರೇಷನ್".

ಇಂದು ಮಧ್ಯಾಹ್ನ 12ರ ತನಕ ಅಭಿಮಾನಿಗಳ ಜೊತೆ ಕಳೆಯುತ್ತೇನೆ. ಬಳಿಕ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಈ ವರ್ಷ ಯಾವುದೇ Resolution ಇಲ್ಲ, ಇನ್ನೇನಿದ್ದರೂ Revolution ಎಂದರು. ಭ್ರಾಂತಿ ಬೇಡ ಇನ್ನೇನಿದ್ದರೂ ಕ್ರಾಂತಿ ಎಂಬುದು ರವಿ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. (ಒನ್‌ಇಂಡಿಯಾ ಕನ್ನಡ)

English summary
Crazy Star Ravichandran celebrated his 52nd birthday in a simple style at his residence on May 30th in Bangalore. At the Dr.Rajkumar road the house of V.Ravichandran on 30th May was surrounded by fans. V.Ravichandran greeted his fans, invited the guests.
Please Wait while comments are loading...