»   » ಬೆಳ್ಳಿಹೆಜ್ಜೆಯಲ್ಲಿ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

ಬೆಳ್ಳಿಹೆಜ್ಜೆಯಲ್ಲಿ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಮಾತುಕತೆ ಎಂದರೆ ಅದು ಸಾಮಾನ್ಯದ ಮಾತೆ. ಕನ್ನಡ ಚಿತ್ರರಂಗದ ಕನಸುಗಳ ಬುಟ್ಟಿಯನ್ನು ತೆರೆದಿಟ್ಟಂತೆ. ಕನ್ನಡ ಚಿತ್ರರಂಗದ ಕನಸುಗಾರ, ರಸಿಕ, ದಿ ಶೋ ಮ್ಯಾನ್ ಜೊತೆ ಮಾತನಾಡುವ ಅಪರೂಪದ ಅವಕಾಶವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಕಲ್ಪಿಸುತ್ತಿದೆ.

ಅಕಾಡೆಮಿ ನಡೆಸಿಕೊಡುತ್ತಿರುವ ಕಲಾವಿದರೊಂದಿಗಿನ ಮುಖಾಮುಖಿ ಕಾರ್ಯಕ್ರಮ 'ಬೆಳ್ಳಿಹೆಜ್ಜೆ'. ಈಗಾಗಲೆ ಈ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಹಲವಾರು ಸಿನೆಮಾ ತಾರೆಗಳು ತಮ್ಮ ಒಡಲಾಳದ ಕತೆಗಳನ್ನು ಹೇಳಿಕೊಂಡು ಪ್ರೇಕ್ಷಕ ದೊರೆಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಈಗ ಇದೇ 'ಬೆಳ್ಳಿಹೆಜ್ಜೆ' ಕಾರ್ಯಕ್ರಮಕ್ಕೆ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸುತ್ತಿದ್ದಾರೆ. ಆದರೆ ಈ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯುತ್ತಿರುವುದು ಕರ್ನಾಟಕದಲ್ಲಿ ಅಲ್ಲವೇ ಅಲ್ಲ ಎಂಬುದು ಕ್ರೇಜಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸುತ್ತದೆ.

ಮೂಲಗಳ ಪ್ರಕಾರ ಈ ಬಾರಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಸಪ್ತಸಾಗರದಾಚೆ ಆಯೋಜಿಸಲಾಗಿದೆ! ಅಟ್ಲಾಂಟಾದಲ್ಲಿ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ ಎಂಬ ಸುದ್ದಿ ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಲೀಕ್ ಆಗಿದೆ.

2012ರ ಅಕ್ಕ ಸಮ್ಮೇಳನ ಅಮೆರಿಕದ ಅಟ್ಲಾಂಟಾದಲ್ಲಿ ನಡೆಯಲಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಮೂರು ದಿನಗಳ ಕಾಲ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿಯ ಸಮ್ಮೇಳನಕ್ಕೆ ಹಲವಾರು ಸಿನೆಮಾ ತಾರೆಗಳನ್ನು ಆಹ್ವಾನಿಸಿರುವುದು ಗೊತ್ತೇ ಇದೆ.

ಈ ಬಾರಿಯ ಅಟ್ಲಾಂಟಾ ಅಕ್ಕ ಸಮ್ಮೇಳನಲ್ಲೇ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಆಯೋಜಿಸೋಣ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ತೀರ್ಮಾನಿಸಿದೆ. ಅನಿವಾಸಿ ಭಾರತೀಯ ಚಿತ್ರರಸಿಕರಿಗೆ ರವಿಚಂದ್ರನ್ ಬೆಳ್ಳಿಹೆಜ್ಜೆ ಏರ್ಪಡಿಸಿದರೆ ಹೇಗೆ ಎಂಬ ಐಡಿಯಾ ಅಕಾಡೆಮಿ ಅಧ್ಯಕ್ಷೆ ತಾರಾ ಅನುರಾಧಾ ಅವರಿಗೆ ಬಂದಿದೆಯಂತೆ. ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

English summary
If sources are to be believed the dream merchant of Kannada films, trailblazer V Ravichandran will participate in Belli Hejje programme of Karnataka Chalanachitra Academy. This time the academy has decided to conduct the programme at 7th AKKA World Kannada Conference, Atlanta, USA. More details are awaited.
Please Wait while comments are loading...