»   » ತೆರೆಗೆ ರವಿಚಂದ್ರನ್ 'ದೃಶ್ಯ', ನೋಡುವುದೆಲ್ಲ ನಿಜವಲ್ಲ

ತೆರೆಗೆ ರವಿಚಂದ್ರನ್ 'ದೃಶ್ಯ', ನೋಡುವುದೆಲ್ಲ ನಿಜವಲ್ಲ

Posted By:
Subscribe to Filmibeat Kannada

ಮಲಯಾಳಂ ಚಿತ್ರರಂಗದಲ್ಲಿ ಆಲ್ ಟೈಮ್ ದಾಖಲೆ ಸೃಷ್ಟಿಸಿದ 'ದೃಶ್ಯಂ' ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು 'ದೃಶ್ಯ' ರೂಪದಲ್ಲಿ ಕನ್ನಡಕ್ಕೆ ತರುತ್ತಿದ್ದಾರೆ. 'ದೃಶ್ಯ' ಚಿತ್ರ ಈ ವಾರ (ಜೂ.20) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇ4 ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸಿರುವ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಧು ನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ. [ರಣಧೀರನಿಗೆ ದರ್ಶನ್, ಸುದೀಪ್, ಪುನೀತ್ ಸಾಥ್]


ರೈತನೊಬ್ಬ ಒಂದು ಅಪಾಯದ ಸನ್ನಿವೇಶದಿಂದ ತನ್ನ ಮಡದಿ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ 'ದೃಶ್ಯಂ' ಚಿತ್ರದ ಕಥಾವಸ್ತು. ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಮೀನಾ ಮುಖ್ಯಭೂಮಿಕೆಯಲ್ಲಿದ್ದರು. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಕ್ಲೀನ್ ಯು ಸರ್ಟಿಫಿಕೇಟ್ ನೀಡಿದೆ.

ಸುರೇಶ್‍ಅರಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಅಚ್ಯುತರಾವ್, ಶಿವಾಜಿಪ್ರಭು, ಸುಚೀಂದ್ರಪ್ರಸಾದ್, ಆಶಾ ಶರತ್, ಸಾಧುಕೋಕಿಲ, ಸ್ವರೂಪಿಣಿ, ಉನ್ನತಿ ಮುಂತಾದವರಿದ್ದಾರೆ. 'ದೃಶ್ಯ' ಚಿತ್ರಕ್ಕೆ "ನೋಡುವುದೆಲ್ಲ ನಿಜವಲ್ಲ" ಎಂಬ ಅಡಿಬರಹವಿದೆ. (ಒನ್ಇಂಡಿಯಾ ಕನ್ನಡ)

English summary
Crazy Star Ravichandran, Navya Nair lead Kannada movie Drishya releases on 20th June. The movie directed by P Vasu. Ravichandran will essay the role of a farmer who goes to a great extent to protect his wife and daughters from a certain danger. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada