For Quick Alerts
ALLOW NOTIFICATIONS  
For Daily Alerts

  ಕ್ರೇಜಿಸ್ಟಾರ್ ರವಿಚಂದ್ರನ್ ನೂತನ ಚಿತ್ರ 'ದೃಶ್ಯಂ' ರೆಡಿ

  By Rajendra
  |

  'ಕ್ರೇಜಿಸ್ಟಾರ್' ಚಿತ್ರದ ಬಳಿಕ ರವಿಚಂದ್ರನ್ ಅವರು ಮತ್ತೆ ಫಾರ್ಮ್ ಗೆ ಮರಳಿದ್ದಾರೆ. 'ಮಾಣಿಕ್ಯ' ಚಿತ್ರದಲ್ಲಿನ ಅಭಿನಯ ಅವರ ಅಭಿಮಾನಿಗಳಿಗೆ ಹಿಡಿಸಿದೆ. ಈಗ ಅವರು ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.

  ರೈತನೊಬ್ಬ ಒಂದು ಅಪಾಯದ ಸನ್ನಿವೇಶದಿಂದ ತನ್ನ ಮಡದಿ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದೇ 'ದೃಶ್ಯಂ' ಚಿತ್ರದ ಕಥಾವಸ್ತು. ಈಗಾಗಲೆ ಈ ಚಿತ್ರ ಮಲಯಾಳಂನಲ್ಲಿ ಆಲ್ ಟೈಮ್ ದಾಖಲೆ ಸೃಷ್ಟಿಸಿದೆ. ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ. ಮೂಲ ಚಿತ್ರದಲ್ಲಿ ಮೋಹನ್ ಲಾಲ್ ಹಾಗೂ ಮೀನಾ ಮುಖ್ಯಭೂಮಿಕೆಯಲ್ಲಿದ್ದರು.

  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಪಿ ವಾಸು ಅವರ ಹಿಂದಿನ ಚಿತ್ರ ಆರಕ್ಷಕ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಿಲ್ಲ. ಅದಕ್ಕೂ ಮುಂಚಿನ ಆಪ್ತರಕ್ಷಕ ಹಾಗೂ ಆಪ್ತಮಿತ್ರ ಚಿತ್ರಗಳು ಮಾತ್ರ ಭರ್ಜರಿ ಗೆಲುವು ತಂದುಕೊಟ್ಟಿದ್ದವು. ಕನ್ನಡ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ.

  ಈ4 ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ಮಡಿಕೇರಿಯಲ್ಲಿ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

  ರವಿಚಂದ್ರನ್, ನವ್ಯಾನಾಯರ್, ಶಿವಾಜಿ ಪ್ರಭು, ಆಶಾ ಶರತ್, ಶ್ರೀನಿವಾಸಮೂರ್ತಿ, ಅಚ್ಯುತಕುಮಾರ್, ಸುಚೇಂದ್ರಪ್ರಸಾದ್, ಶಿವರಾಂ, ಜೈಜಗದೀಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

  ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ 'ದೃಶ್ಯಂ' ಚಿತ್ರದ ರಿಮೇಕ್. ಮಧು ನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ ಮಾಡಿದ್ದಾರೆ.

  ರವಿಚಂದ್ರನ್, ನವ್ಯನಾಯರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ಶಿವಾಜಿಪ್ರಭು ಅಚ್ಯುತರಾವ್, ಸುಚೀಂದ್ರಪ್ರಸಾದ್, ಆಶಾಶರತ್, ಸಾಧುಕೋಕಿಲ, ಸ್ವರೂಪಿಣಿ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Crazy Star Ravichandra upcoming movie Drishyam remake shooting has been finished. Ravichandran will essay the role of a farmer who goes to a great extent to protect his wife and daughters from a certain danger. The title of the film is not yet finalised.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more