»   » ಹೆಸರು ಬದಲಾಯಿಸಿಕೊಂಡ ಕ್ರೇಜಿ ಸ್ಟಾರ್ ರವಿಚಂದ್ರನ್

ಹೆಸರು ಬದಲಾಯಿಸಿಕೊಂಡ ಕ್ರೇಜಿ ಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ತೀರಾ ಹತ್ತಿರದಿಂದ ಬಲ್ಲವರು ಇದನ್ನು ನಂಬಲ್ಲ. ಏಕೆಂದರೆ ಅವರಿಗೆ ಸಂಖ್ಯಾಶಾಸ್ತ್ರ, ಆ ಶಾಸ್ತ್ರ ಈ ಶಾಸ್ತ್ರ, ನಾಮಬಲ ಇದರಲ್ಲೆಲ್ಲಾ ನಂಬಿಕೆ ಇಲ್ಲ ಎನ್ನುತ್ತಾರೆ. ಆದರೆ ಅವರು ಯಾರೇ ಆಗಲಿ. ಸತತ ಸೋಲುಗಳು, ನಿರೀಕ್ಷಿತ ಜಯ ಸಿಗದಿದ್ದಾಗ ಯಾವುದೋ ಒಂದು ಶಾಸ್ತ್ರಕ್ಕೆ ಮೊರೆ ಹೋಗಲೇಬೇಕಾಗುತ್ತದೆ.

ಈಗ ರವಿಚಂದ್ರನ್ ಅವರು ಸಂಖ್ಯಾಶಾಸ್ತ್ರಕ್ಕೆ ಮೊರೆಹೋದರೆ? ಹೌದು ಎನ್ನುತ್ತವೆ ಮೂಲಗಳು. ಈಗ ಅವರು ತಮ್ಮ ಹೆಸರನ್ನು ಸಂಖ್ಯಾಶಾಸ್ತ್ರದ ಪ್ರಕಾರ ರವಿಚಂದರನ್ (Ravichandaran) ಎಂದು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಮೊದಲ ಹೆಸರಲ್ಲಿ ಸಂಖ್ಯಾಶಾಸ್ತ್ರದ ಪ್ರಕಾರ 12 ಆಂಗ್ಲ ಅಕ್ಷರಗಳು ಬರುತ್ತಿದ್ದವು. ಈಗ 13 ಅಕ್ಷರಗಳು ಬರುತ್ತಿವೆ. ಅಂದರೆ 1+3=4.


ಬೆಸಸಂಖ್ಯೆಗೆ ಬದಲಾಗಿ ಸಮಸಂಖ್ಯೆ. ಅವರ 'ಮಂಜಿನಹನಿ' ಚಿತ್ರ ತುಂಬಾ ತಡವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅವರ ಅಭಿನಯದ ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ರವಿಚಂದ್ರನ್ ಅವರು ತಮ್ಮ ಹೆಸರನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಂಡಿದ್ದಾರಂತೆ.

ಮುಂಬರುವ ವರ್ಷಗಳಲ್ಲಿ ಅವರ 'ಮಂಜಿನ ಹನಿ' ಸೇರಿದಂತೆ ಹಲವು ಚಿತ್ರಗಳು ತೆರೆಕಾಣಲಿವೆ. ಇದಕ್ಕೆ ಅವರ ಬದಲಾದ ನಾಮಧೇಯ ನೆರವಾಗುತ್ತದೋ ಏನೋ ನೋಡಬೇಕು. ಇದರ ಜೊತೆಗೆ ಅವರ ಇಬ್ಬರು ಮಕ್ಕಳಾದ ಮನೋರಂಜನ್ ಹಾಗೂ ವಿಕ್ರಂ ಬೆಳ್ಳೆಪರದೆಗೆ ಅಡಿಯಿಡುತ್ತಿದ್ದಾರೆ. (ಏಜೆನ್ಸೀಸ್)

English summary
According to sources, Kannada actor, director dream merchant Crazy Star Ravichandran changed his name as Ravichandaran. The actor included an extra character in his name according to numerology.
Please Wait while comments are loading...