»   » ಬೆಳ್ಳಿಪರದೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರರತ್ನ

ಬೆಳ್ಳಿಪರದೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರರತ್ನ

Posted By:
Subscribe to Filmibeat Kannada
Ravichandran son Vikram
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ನಟ ವಾರಸುದಾರಿಕೆಯನ್ನು ತಮ್ಮ ಮಕ್ಕಳ ಹೆಗಲಿಗೆ ಹಾಕುತ್ತಿದ್ದಾರೆ. ಹಾಗಂತ ಅವರು ಬೆಳ್ಳಿಪರದೆಯಿಂದ ನಿವೃತ್ತಿ ಪಡೆಯುತ್ತಿಲ್ಲ. ಕ್ರೇಜಿಸ್ಟಾರ್ ಇಲ್ಲದ ಕನ್ನಡ ಚಿತ್ರರಂಗವನ್ನು ಚಿತ್ರರಸಿಕರು ಊಹಿಸಿಕೊಳ್ಳುವುದು ಕಷ್ಟ.

ತಮ್ಮ ಕಿರಿಯ ಪುತ್ರ ವಿಕ್ರಂ ಅವರನ್ನು ಬೆಳ್ಳಿಪರದೆಗೆ ಪರಿಚಯಿಸುತ್ತಿದ್ದಾರೆ ಕ್ರೇಜಿಸ್ಟಾರ್. ಆದರೆ ವಿಕ್ರಂ ಪೂರ್ಣ ಪ್ರಮಾಣದ ನಾಯಕನಟನಾಗಿ ಎಂಟ್ರಿ ಕೊಡುತ್ತಿಲ್ಲ. ಬದಲಾಗಿ ನಿರ್ಣಾಯಕ ಪಾತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ.

ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ಕ್ರೇಜಿ ಸ್ಟಾರ್ ಚಿತ್ರದ ಮೂಲಕ ವಿಕ್ರಂ ಆಗಮನವಾಗುತ್ತಿದೆ. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ರವಿ ಅವರ ಜ್ಯೇಷ್ಠ ಪುತ್ರ ಮನೋರಂಜನ್ ಸಹಾಯಕ ನಿರ್ದೇಶಕನಾಗಿ ಇದೇ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ.

ಕ್ರೇಜಿ ಸ್ಟಾರ್ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಮಲಯಾಳಂನ ಟ್ರಾಫಿಕ್ ಚಿತ್ರದ ಸ್ಫೂರ್ತಿ ಈ ಚಿತ್ರಕ್ಕಿದೆ. ಚೆನ್ನೈನಲ್ಲಿ ನಡೆದ ಸತ್ಯ ಘಟನೆಗಳ ಆಧಾರವಾಗಿ ಟ್ರಾಫಿಕ್ ಚಿತ್ರ ನಿರ್ಮಿಸಲಾಗಿತ್ತು. ಇಲ್ಲಿ ರವಿಚಂದ್ರನ್ ಎಷ್ಟರ ಮಟ್ಟಿಗೆ ಅದನ್ನು ಕನ್ನಡಕ್ಕೆ ಹೊಂದಿಸಿದ್ದಾರೆ ಎಂಬ ಕುತೂಹಲವಿದ್ದೇ ಇದೆ.

ರವಿಚಂದ್ರನ್ ಅವರು ಬಹಳಷ್ಟು ಸೋತಿದ್ದಾರೆ. ಕ್ರೇಜಿಸ್ಟಾರ್ ಚಿತ್ರದ ಅವರ ಪಾಲಿನ ಆಶಾಕಿರಣ. ಈ ಚಿತ್ರದಲ್ಲಿ ತಮ್ಮ ಪುತ್ರ ವಿಕ್ರಂ ಪಾತ್ರ ಏನು ಎಂಬ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಇದರ ಜೊತೆಗೆ ಅವರು 'ಮಂಜಿನ ಹನಿ' ಚಿತ್ರದಲ್ಲೂ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

English summary
Crazy Star Ravichandran's elder son Vikram is all set to is making his debut as an actor in 'Crazy Star' film. Vikram will be seen in a small but important role in Ravichandran’s directorial film Crazy Star.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada