For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಸಂಕ್ರಾಂತಿಗೆ ಏನೆಲ್ಲಾ ಸ್ಪೆಷನ್ ಗೊತ್ತಾ?

  |

  ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಹಬ್ಬಗಳು ಬಂತು ಅಂದರೆ ಸಾಕು ಸಿನಿಮಾ ಮಂದಿಗೆ ಒಂದು ರೀತಿಯ ವಿಶೇಷ ಸಂಭ್ರಮ, ಸಡಗರ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಸಿನಿಮಾಗಳ ಪೋಸ್ಟರ್, ಟೀಸರ್, ಹಾಡುಗಳು ರಿಲೀಸ್ ಆಗುತ್ತವೆ. ಈ ಬಾರಿ ಸಿನಿಮಾ ರಿಲೀಸ್‌ ಮಾಡುವ ಭಾಗ್ಯ ಇಲ್ಲದಂತಾಗಿದೆ. ಯಾಕೆಂದರೆ ಎಲ್ಲೆಡೆ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದ ಹಾಗೆ, ಈ ಚಿತ್ರ ಮಂದಿಗಳಿಗೆ ಬೀಗ ಹಾಕಾಗುತ್ತಿದೆ.

  ಆದರೂ ಕೂಡ ಸ್ಯಾಂಡ್‌ವುಡ್‌ನಲ್ಲಿ ಸಂಕ್ರಾಂತಿ ಸಂಭ್ರದ ಕಳೆ ಕಡಿಮೆ ಆಗಿಲ್ಲ. ಸಿನಿಮಾ ಮಂದಿ ತಮ್ಮದೇ ಶೈಲಿಯಲ್ಲಿ ಹಬ್ಬದ ರಂಗು ಹೆಚ್ಚಿಸಲು ಮುಂದಾಗಿದ್ದಾರೆ. ಈ ಬಾರಿ ಹಬ್ಬದ ಮೆರುಗು ಹೆಚ್ಚಿಸಲು ವಿಶೇಷ ಪ್ರಕಟಣೆಗಳೊಂದಿಗೆ ಚಿತ್ರ ತಂಡಗಳು ಸಜ್ಜಾಗಿವೆ.

  ಸಂಕ್ರಾಂತಿ ವಿಶೇಷ: ನಟ ಧನಂಜಯ್ ಹೊಸ ಚಿತ್ರ ಪ್ರಕಟ!

  ಈ ಸಂಕ್ರಾಂತಿ ಹಬ್ಬಕ್ಕೆ ನಟ ಧನಂಜಯ್ ಹೊಸ ಚಿತ್ರ ಪ್ರಕಟ ಆಗಲಿದೆ. ಈ ಬಗ್ಗೆ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಕೆಆರ್‌ಜಿ ಕನೆಕ್ಷನ್ ನಿರ್ಮಾಣ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಪೋಸ್ಟರ್‌ನಲ್ಲಿ ಪೊಲೀಸ್‌ ವಾಹನ ಮತ್ತು ಹೈವೆ ಇರುವ ಚಿತ್ರಣ ಇದೆ. ಜೊತೆಗೆ ಜನವರಿ 14ರಂದು, 12.34ಕ್ಕೆ ಟೈಟಲ್ ಲಾಂಚ್ ಆಗಲಿದೆ. ಎಂದು ಬರೆಯಲಾಗಿದೆ. ಇನ್ನು ಈ ಪೋಸ್ಟರ್ ಹಂಚಿಕೊಂಡು, ರಾಕ್ಷಸ, ರಾಕ್ಷಸ "ಆರಕ್ಷಕ" ಎನ್ನುವ ಸಾಲು ಬರೆಯಲಾಗಿದೆ. ಹಾಗಾಗಿ ಇದು ಧನಂಜಯ್‌ ಅವರ ಸಿನಿಮಾ ಎನ್ನುವುದು ಪಕ್ಕಾ ಆಗಿದೆ.

  'ಅಬ ಜಬ ದಬ' ಚಿತ್ರದ ನಾಯಕ, ನಾಯಕಿ ಪರಿಚಯ!

  ಸಂಕ್ರಾಂತಿ ಹಬ್ಬಕ್ಕೆ ಕನ್ನಡದ 'ಅಬ ಜಬ ದಬ' ಚಿತ್ರ ಕೂಡ ವಿಶೇಷ ಪ್ರಕಟಣೆ ಮಾಡಿದೆ. ಈ ಚಿತ್ರದ ನಾಯಕ ಮತ್ತು ನಾಯಕಿ ಯಾರು ಎನ್ನುವುದನ್ನು ಪ್ರಕಟ ಮಾಡಲಿದೆ ಚಿತ್ರ ತಂಡ. ಜನವರಿ 15ರ ಬೆಳಿಗ್ಗೆ ನಾಯಕನ ಪರಿಚಯ ಮಾಡಿದರೆ, ಸಂಜೆ ನಾಯಕಿಯ ಪರಿಚಯ ಮಾಡಲಿದೆ ಚಿತ್ರ ತಂಡ. ಈ ಬಗ್ಗೆ ನಿರ್ದೇಶಕ ಮಯೂರ್‌ ರಾಘವೇಂದ್ರ ಮಾಹಿತಿ ಹಂಚಿ ಕೊಂಡಿದ್ದಾರೆ.

  Daali Dhanajay New Film Launch: Sankranthi Specia in Sandalwood

  ಇದರ ಜೊತೆಗೆ ಮತ್ತಷ್ಟು ಚಿತ್ರಗಳು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡು ಸಜ್ಜಾಗಿವೆ. ಸಿನಿಮಾ ರಿಲೀಸ್ ಇಲ್ಲವಾದರು, ಚಿತ್ರದ ಅಪ್ಡೇಟ್ ನೀಡಿ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚು ಮಾಡಲು ಹಲವು, ಚಿತ್ರ ತಂಡಗಳು ಸಿದ್ದವಾಗಿವೆ.

  English summary
  Sankranti Special in Sandalwood: Daali Dhanajay New Film Launch
  Thursday, January 13, 2022, 20:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X