For Quick Alerts
    ALLOW NOTIFICATIONS  
    For Daily Alerts

    ಮದ್ವೆಗೂ ಮೊದ್ಲೆ ಎಲ್ಲದಕ್ಕೂ ಹರಿಪ್ರಿಯಾ ಬಳಿ ಪರ್ಮಿಷನ್ ಕೇಳ್ತಿದ್ದಾರಾ ವಸಿಷ್ಠ?

    |

    ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಡಾಲಿ ಧನಂಜಯ ಕೂಡ ಆತ್ಮೀಯ ಸ್ನೇಹಿತನಿಗೆ ಶುಭ ಹಾರೈಸಿದ್ದಾರೆ. ಇವರಿಬ್ಬರ ಟ್ವೀಟ್ ಸಂಭಾಷಣೆ ವೈರಲ್ ಆಗಿದೆ.

    ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಗುಟ್ಟಾಗಿ ಉಂಗುರ ಬದಲಿಸಿಕೊಂಡಿದ್ದರು. ಇದೀಗ ನಿಶ್ಚಿತಾರ್ಥ ಸಮಾರಂಭದ ವಿಡಿಯೋ, ಫೋಟೊಗಳನ್ನು ಶೇರ್ ಮಾಡಿರುವ ಜೋಡಿ ಎಲ್ಲರೂ ಹರಸಿ, ಆಶೀರ್ವದಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ಸ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಮುಂದಿನ ವರ್ಷ ಜೋಡಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ಮತ್ತೊಂದ್ಕಡೆ ಇಬ್ಬರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ವಸಿಷ್ಠ - ಹರಿಪ್ರಿಯಾ ಪ್ರೀತಿ ವಿಷಯ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರವಿದುವಸಿಷ್ಠ - ಹರಿಪ್ರಿಯಾ ಪ್ರೀತಿ ವಿಷಯ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರವಿದು

    ವಸಿಷ್ಠ ಸಿಂಹ ಪೋಸ್ಟ್‌ಗೆ ನಟ ಧನಂಜಯ ಪ್ರತಿಕ್ರಿಯಿಸಿ "ಕಂಗ್ರಾಟ್ಸ್ ದೋಸ್ತ' ನೂರು ಕಾಲ ಚೆನ್ನಾಗಿ ಬಾಳಿ. ಹರಿಪ್ರಿಯಾ ಅವನು ನಮ್ಮ ಕೈಗೆ ಸಿಕ್ತಾ ಇಲ್ಲ, ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ" ತಮಾಷೆಯಾಗಿ ಕಾಲೆಳೆದಿದ್ದಾರೆ. ಇದಕ್ಕೆ ಅಭಿಮಾನಿಗಳು ತಮ್ಮ ಸ್ಟೈಲ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ "ಅವರು ದೀಪ, ನೀನು ಹಾವಳಿ, ನೀವಿಬ್ರು ಸೇರಿದ್ರೆ ದೀಪಾವಳಿ, ಬಾಳು ಬೆಳಕಾಗಲಿ" ಎಂದು ಧನು ಟ್ವೀಟ್ ಮಾಡಿದ್ದಾರೆ.

    ಹರಿಪ್ರಿಯಾ ಏನಂತೀರಾ ಎಂದ ವಸಿಷ್ಠ!

    ಹರಿಪ್ರಿಯಾ ಏನಂತೀರಾ ಎಂದ ವಸಿಷ್ಠ!

    ಹರಿಪ್ರಿಯಾ ಅವನು ನಮ್ಮ ಕೈಗೆ ಸಿಕ್ತಾ ಇಲ್ಲ, ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ ಎಂದು ಧನಂಜಯ ಫನ್ನಿಯಾಗಿ ಮಾಡಿದ ಟ್ವೀಟ್‌ಗೆ ಟ್ಯಾಗ್‌ ಮಾಡಿ ಪ್ರತಿಕ್ರಿಯಿಸಿರುವ ವಸಿಷ್ಠ ಸಿಂಹ "ಹಹಹಾ. ಥ್ಯಾಂಕು ದೋಸ್ತಾ. ಹರಿಪ್ರಿಯಾ ಏನಂತೀರಾ? ಎಂದು ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಯೊಬ್ಬರು "ಈಗ್ಲೇ ಎಲ್ಲದಕ್ಕೂ ಪರ್ಮಿಷನ್ ಕೇಳೊಕೆ ಶುರು ಮಾಡಿದ್ರಾ?" ಎಂದು ಕಿಚಾಯಿಸಿದ್ದಾರೆ. ಮತ್ತೊಬ್ಬರು "ಓಕೆ ಎನ್ನುತ್ತಾರೆ? ಆದರೆ ಕಂಡೀಷನ್ ಅಪ್ಲೇ ಅಂತಾರೆ ಅನ್ನಿಸುತ್ತೆ" ಎಂದು ಕಾಮೆಂಟ್ ಮಾಡಿದ್ದಾರೆ.

    ರಾತ್ರಿ ಹೊತ್ತು ಫೋನ್ ಮಾಡ್ಬೇಡಿ

    ರಾತ್ರಿ ಹೊತ್ತು ಫೋನ್ ಮಾಡ್ಬೇಡಿ

    ಇನ್ನು 'ಎಂದೆಂದಿಗೂ' ಚಿತ್ರದಲ್ಲಿ ಸ್ನೇಹಿತನ ಮದುವೆಯಲ್ಲಿ ಸ್ನೇಹಿತರೆಲ್ಲಾ ಹಾಡಿ ಕುಣಿಯುವ ಸಾಂಗೊಂದಿತ್ತು. ಅದರ ಒಂದು ಬಿಟ್‌ನಲ್ಲಿ ಡಾಲಿ ಧನಂಜಯ ಕೂಡ ಕಾಣಿಸಿಕೊಂಡಿದ್ದರು. ಸ್ನೇಹಿತ ಮದುವೆ ಆದ್ಮೇಲೆ ಏನೆಲ್ಲಾ ಆಗುತ್ತೆ ಎನ್ನುವುದನ್ನ ತಮಾಷೆಯಾಗಿ ಹೇಳಿದ್ದ ಹಾಡದು. ವಸಿಷ್ಠ ಸಿಂಹ ಮದುವೆಯಾಗುತ್ತಿರುವ ಸಂದರ್ಭಕ್ಕೆ ಆ ಹಾಡಿನಲ್ಲಿ ಧನಂಜಯ ಕಾಣಿಸಿಕೊಂಡಿದ್ದ ಬಿಟ್‌ನಲ್ಲಿದ್ದ ಸಾಲುಗಳು ಮ್ಯಾಚ್ ಆಗುವಂತಿದೆ. ಅದನ್ನು ಯಾರೋ ಕಟ್ ಮಾಡಿ ಧನಂಜಯಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಡಾಲಿ ನಗುವ ಎಮೋಜಿ ಹಾಕಿ ದೋಸ್ತ್ ವಸಿಷ್ಠ ಸಿಂಹನ ಟ್ಯಾಗ್ ಮಾಡಿದ್ದಾರೆ.

    ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ

    ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ

    ಇನ್ನು ಡಾಲಿ ಧನಂಜಯ ಮದುವೆ ಬಗ್ಗೆ ಪದೇ ಪದೇ ಚರ್ಚೆ ಆಗುತ್ತಿರುತ್ತದೆ. ಕೆಲ ದಿನಗಳ ಹಿಂದೆ ನಟಿ ಅಮೃತಾ ಅಯ್ಯಂಗಾರ್ ಜೊತೆ ಧನಂಜಯ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ನಂತರ ಇದೆಲ್ಲಾ ಸುಳ್ಳು, ನಾವಿಬ್ಬರು ಸ್ನೇಹಿತರು ಎಂದು ಆ ಚರ್ಚೆಗೆ ತೆರೆ ಎಳೆದಿದ್ದರು. ವಸಿಷ್ಠ ಸಿಂಹ- ಹರಿಪ್ರಿಯಾ ಜೋಡಿಗೆ ಧನಂಜಯ ಶುಭ ಹಾರೈಸುತ್ತಿದ್ದಂತೆ "ನಿಮ್ಮ ಮದುವೆ ಯಾವಾಗ ಸರ್" ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಕೆಲವರು ಧನಂಜಯ ಅವರನ್ನು ಕೇಳುತ್ತಿದ್ದಾರೆ.

    ಲವ್ ಸ್ಟೋರಿ ರಿವೀಲ್ ಮಾಡಿದ್ದ ಹರಿಪ್ರಿಯಾ

    ಲವ್ ಸ್ಟೋರಿ ರಿವೀಲ್ ಮಾಡಿದ್ದ ಹರಿಪ್ರಿಯಾ

    ಹರಿಪ್ರಿಯಾ ಅವರಿಗೆ ನಟ ವಸಿಷ್ಠ ಸಿಂಹ ಕ್ರಿಸ್ಟಲ್ ಹೆಸರಿನ ನಾಯಿಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಆ ಮೂಲಕ ಇಬ್ಬರ ಸ್ನೇಹ ಪ್ರೀತಿ ಬೆಳೆದು ಈಗ ಇಬ್ಬರು ಹಸೆಮಣೆ ಏರಲು ಮುಂದಾಗಿದ್ದಾರೆ. ತೆಲುಗಿನ 'ಎವರು' ಸಿನಿಮಾ ಕನ್ನಡ ರೀಮೆಕ್‌ನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಟಿಸುತ್ತಿದ್ದಾರೆ. ಇನ್ನು ಈ ತಾರಾಜೋಡಿಯ ಎಂಗೇಜ್‌ಮೆಂಟ್ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    English summary
    Daali Dhananjay And Vasishta Simha's Funny Twitter Conversation Goes Viral. Recently Haripriya And Vasishta Simha Engaged, Fans and Friends Congratulate The Couple. Know More.
    Friday, December 9, 2022, 20:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X