For Quick Alerts
  ALLOW NOTIFICATIONS  
  For Daily Alerts

  'ಹಿಂದೂ ಧರ್ಮ ಒಡೆಯಬೇಡಿ': ನಟ ಚೇತನ್‌ ಹೇಳಿಕೆಗೆ ದೈವಾರಾಧಕರ ಖಂಡನೆ

  By ಮಂಗಳೂರು ಪ್ರತಿನಿಧಿ
  |

  ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ನಟ ಚೇತನ್ ಕುಮಾರ್ ಅಹಿಂಸಾ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ವೀಕ್ಷಿಸಿದ ಚೇತನ್ ಸಿನಿಮಾದ ಬಗ್ಗೆ ತಮ್ಮ ಟ್ವೀಟ್‌ನಲ್ಲಿ 'ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದೆಂದು ರಿಷಭ್ ಶೆಟ್ಟಿ ಹೇಳಿದ್ದಾರೆ. ಅದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನದ್ದಾಗಿದೆ. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ಕೇಳುತ್ತೇವೆ' ಎಂದಿದ್ದಾರೆ.

  ಅವರ ಈ ಹೇಳಿಕೆಗೆ ಸ್ವತಃ ದೈವ ನರ್ತಕರೂ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಕಿಡಿಕಾರಿದ್ದಾರೆ. ''ಚೇತನ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಇದು ಶೋಷಿತರ ಮೇಲಾಗುವ ತುಳಿತ ಎಂದು ಹೇಳುತ್ತೇನೆ. ದೈವಾರಾಧನೆ ಮಾಡುವ ನಲಿಕೆ, ಪಂಬಂದ, ಪರವ ಸಮುದಾಯವರು ಹಿಂದೂ ಧರ್ಮದವರೆಂದೇ ದಾಖಲೆಗಳಲ್ಲಿದೆ. ಇವರು ಯಾರು ನಮಗೆ ಸರ್ಟಿಫಿಕೇಟ್ ಕೊಡುವುದಕ್ಕೆ? ನಾವು ಪ್ರಕೃತಿ ಆರಾಧಕರು. ಮತ್ತೆ ಹೇಗೆ ನಾವು ಹಿಂದೂಗಳಲ್ಲ ಎಂದು ಚೇತನ್ ಹೇಳುತ್ತಾರೆ. ನಟ ಚೇತನ್ ಗೆ ಧೃತಿಗಟ್ಟಿರುವುದರಿಂದ ಅವರು ಆ ರೀತಿ ಹೇಳುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   'ಕಾಂತಾರ' ಚಿತ್ರದಲ್ಲಿ ಭೂತಕೋಲದ ಬಗ್ಗೆ ಸುಳ್ಳು ಹೇಳಲಾಗಿದೆ, ಸತ್ಯಾಂಶ ತೋರಿಸಿ ಎಂದ ನಟ ಚೇತನ್! 'ಕಾಂತಾರ' ಚಿತ್ರದಲ್ಲಿ ಭೂತಕೋಲದ ಬಗ್ಗೆ ಸುಳ್ಳು ಹೇಳಲಾಗಿದೆ, ಸತ್ಯಾಂಶ ತೋರಿಸಿ ಎಂದ ನಟ ಚೇತನ್!

  ಆದ್ದರಿಂದ ನಟ ಚೇತನ್ ಹೇಳಿಕೆ ತಪ್ಪು: ದಯಾನಂದ ಕತ್ತಲ್

  ಆದ್ದರಿಂದ ನಟ ಚೇತನ್ ಹೇಳಿಕೆ ತಪ್ಪು: ದಯಾನಂದ ಕತ್ತಲ್

  ದೈವರಾಧಾನೆಯ ಕೊಡಿಯಡಿಯಲ್ಲಿ 16 ಸಮುದಾಯಗಳು ಬರುತ್ತದೆ ಎಲ್ಲರೂ ಸಮಾನರೇ, ಅದು ಬಿಟ್ಟು ನಮ್ಮನ್ನು ಹೊರಗಿಡುವುದು ಅಕ್ಷಮ್ಯ ಅಪರಾಧ.‌ ದೈವಾರಾಧನೆಯ ಸಂಧಿ ಪಾಡ್ದನಗಳಲ್ಲಿ ಶಿವ, ಪಾರ್ವತಿ, ವಿಷ್ಣುವಿನ ಉಲ್ಲೇಖವಿದೆ. ಇಷ್ಟೆಲ್ಲಾ ಇರುವಾಗ ಯಾಕೆ ನಮ್ಮನ್ನು ಹಿಂದೂ ಧರ್ಮದಿಂದ ಹೊರಗೆ ಇಡುತ್ತೀರಿ. ನಾನು 37 ವರ್ಷಗಳಿಂದ ದೈವಾರಾಧನೆಯನ್ನು ಮಾಡುತ್ತಿದ್ದೇನೆ. ದೈವಾರಾಧನೆಯನ್ನು ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿಯೇ ಹೇಳುತ್ತಿದ್ದೇನೆ. ಆದ್ದರಿಂದ ನಟ ಚೇತನ್ ಹೇಳಿಕೆ ತಪ್ಪು. ಹಿಂದೂ ಧರ್ಮವನ್ನು ಒಡೆಯುವ ಕೆಲಸ ಮಾಡದಿರಿ' ಎಂದು ದಯಾನಂದ ಜಿ ಕತ್ತಲ್ ಸಾರ್ ಹೇಳಿದ್ದಾರೆ.

  ಧೈವಾರಾಧನೆಯ ಮಧ್ಯಸ್ಥ ಶ್ರೀಕಾಂತ್ ಖಂಡನೆ

  ಧೈವಾರಾಧನೆಯ ಮಧ್ಯಸ್ಥ ಶ್ರೀಕಾಂತ್ ಖಂಡನೆ

  ಇನ್ನು‌ ನಟ ಚೇತನ್ ಹೇಳಿಕೆಯನ್ನು ಧೈವಾರಾಧನೆಯ ಮಧ್ಯಸ್ಥ ಶ್ರೀಕಾಂತ್ ಕೂಡಾ ಖಂಡಿಸಿದ್ದಾರೆ. 'ಚೇತನ್, 'ಕಾಂತಾರ'ದಂತ ಒಂದು‌ ಅದ್ಭುತ ಚಿತ್ರ ಮಾಡಿ‌ ತೋರಿಸಲಿ. ದೈವಾರಾಧನೆ ಹಿಂದೂ ಧರ್ಮದಿಂದ ಪ್ರತ್ಯೇಕ ಅನ್ನೋದನ್ನು ಚಿತ್ರದ ಮೂಲಕ ತೋರಿಸಲಿ. 'ಕಾಂತಾರ'ದ ಪಬ್ಲಿಸಿಟಿ ಇಟ್ಟುಕೊಂಡು ತನ್ನ ಬೇಳೆ ಬೇಯಿಸಲು ತನ್ನ ಐಡಿಯಾಲಜಿ ತುರುಕುವ ಅಗತ್ಯ ಇಲ್ಲ. ಬಹುಜನ ಸಮಾಜ‌ ಎನ್ನುವ ನೀವು ಸರ್ಕಾರಿ ದಾಖಲೆಯಲ್ಲಿ ಹಿಂದೂ ಧರ್ಮ‌ ಎಂದು ಬಳಸುತ್ತಿರಿ. ಹಿಂದೂ ಎನ್ನುವುದು ಜೀವನ ಪದ್ದತಿ ಎಂದು ನ್ಯಾಯಾಲಯವೇ ಹೇಳಿದೆ. ಹಿಂದೂ ಧರ್ಮ‌ ಪ್ರತ್ಯೇಕಗೊಳಿಸುವ ಕಮ್ಯುನಿಷ್ಟರ ಹುನ್ನಾರದ ವಿರುದ್ದ ನಾವೆಲ್ಲ ಒಂದಾಗಬೇಕು' ಎಂದು ಶ್ರೀಕಾಂತ್ ಹೇಳಿದ್ದಾರೆ.

  ಲಕ್ಷಾಂತರ ವರ್ಷಗಳ ಇತಿಹಾಸ

  ಲಕ್ಷಾಂತರ ವರ್ಷಗಳ ಇತಿಹಾಸ

  ''ಪ್ರಕೃತಿಯ ಮೂಲ ಆರಾಧನೆಯಿಂದ ಬೆಳೆದು ಬಂದು ಲಕ್ಷಾಂತರ ವರ್ಷಗಳ ಇತಿಹಾಸ ಇರುವ ತೌಳವ ಜನಪದ ಆಚರಣೆವಾಗಿದೆ. ವೈದಿಕ ಸಂಸ್ಕೃತಿಯ ಆನಂತರ ಪ್ರವೇಶ ಆದ್ರೂ ಹಾಲು ಜೇನಿನಂತೆ ನಡೆದುಕೊಂಡು ಬರುತ್ತಿದೆ. ನಮ್ಮಲ್ಲಿ ವೈವಿಧ್ಯತೆ ಇದೆ, ವೈರುದ್ಯ ಇಲ್ಲ. ದೈವದ ನೇಮೋತ್ಸವ ನಡೆಯುವಾಗ ಬ್ರಾಹ್ಮಣ ಸೇರಿದಂತೆ ಎಲ್ಲಾ ವರ್ಗಗಳಿಗೂ ದೈವಗಳು ವಿಶೇಷ ಸ್ಥಾನಮಾನ‌ ಕಲ್ಪಿಸಿದೆ. ಇದು ತುಳುನಾಡಿನ ವಿಶೇಷತೆ. ಇದನ್ನು ಸ್ವೀಕರಿಸದವರು‌ ಅಪ್ರಸ್ತುತರಾಗಿದ್ದಾರೆ'' ಎಂದು ಶ್ರೀಕಾಂತ್ ಹೇಳಿದ್ದಾರೆ.

  'ಕಾಂತಾರ' ಸಿನಿಮಾದ ಸುತ್ತ ಚರ್ಚೆ

  'ಕಾಂತಾರ' ಸಿನಿಮಾದ ಸುತ್ತ ಚರ್ಚೆ

  'ಕಾಂತಾರ' ಸಿನಿಮಾದಲ್ಲಿನ ಭೂತಕೋಲ, ಪಂಜುರ್ಲಿ, ಗುಳಿಗ ದೈವಗಳ ಬಗ್ಗೆ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಈ ಆಚರಣೆಗಳು ವೈದೀಕ ಧರ್ಮದ ವಿರುದ್ಧವೆಂದು ಕೆಲವರು ವಾದಿಸಿದರೆ. ಇದು ಹಿಂದು ಧರ್ಮದ ಸಂಸ್ಕೃತಿ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡಿರುವುದು ಸಹ ಈ ಚರ್ಚೆಯ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದೆ. ಈಗ ಚೇತನ್, ಭೂತಕೋಲ ಹಿಂದೂ ಸಂಸ್ಕೃತಿಯೇ ಅಲ್ಲ ಎಂದಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

  English summary
  Daiva Aradhaka's condemn actor Chetan Ahimsa's statement on Bhooakola. The said Chetan trying to break Hindu religion.
  Wednesday, October 19, 2022, 17:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X