»   » ಗಾಂಧಿನಗರದಲ್ಲಿ ಮತ್ತೆ ಶುರುವಾಯಿತು 'ದಂಡುಪಾಳ್ಯ' ಗ್ಯಾಂಗ್ ಅಟ್ಟಹಾಸ

ಗಾಂಧಿನಗರದಲ್ಲಿ ಮತ್ತೆ ಶುರುವಾಯಿತು 'ದಂಡುಪಾಳ್ಯ' ಗ್ಯಾಂಗ್ ಅಟ್ಟಹಾಸ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ 'ದಂಡುಪಾಳ್ಯ 2' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈಗಾಗಲೇ ಸಾಕಷ್ಟು ವಿಷಯಗಳಿಗೆ ದೊಡ್ಡ ಮಟ್ಟದ ಸುದ್ದಿ ಮಾಡಿದ್ದ ಈ ಸಿನಿಮಾ ಮತ್ತೆ ಟ್ರೈಲರ್ ಮೂಲಕ ಸೌಂಡ್ ಮಾಡುತ್ತಿದೆ.

'ದಂಡುಪಾಳ್ಯ 2' ಸಿನಿಮಾ 'ದಂಡುಪಾಳ್ಯ' ಚಿತ್ರದ ಮುಂದುವರೆದ ಭಾಗ. ಪೂಜಾ ಗಾಂಧಿ ಅವರ ಖಡಕ್ ಡೈಲಾಗ್ ನೊಂದಿಗೆ ಶುರುವಾಗುವ ಟ್ರೈಲರ್ ನೋಡುಗರನ್ನು ಬೆಚ್ಚಿಬೀಳಿಸುತ್ತದೆ. ದಂಡುಪಾಳ್ಯ ಗ್ಯಾಂಗ್ ನ ಖತರ್ನಾಕ್ ಕಳ್ಳರ ರೋಚಕ ಕಥೆಯನ್ನು ಮತ್ತೆ ಇಲ್ಲಿ ಬಿಚ್ಚಿಡಲಾಗಿದೆ.['ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ]

'Dandupalya 2' movie trailer released

'ದಂಡುಪಾಳ್ಯ' ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರೇ ಇಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಶಂಕರ್, ರವಿ ಕಾಳೆ ಆರ್ಭಟ ಇಲ್ಲಿಯೂ ಮುಂದುವರೆದಿದ್ದು, 'ದಂಡುಪಾಳ್ಯ' ಗ್ಯಾಂಗ್ ಗೆ ಈ ಬಾರಿ ಸಂಜನಾ ಗಲ್ರಾನಿ ಸೇರಿಕೊಂಡಿದ್ದಾರೆ. ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಶೃತಿ ಕಾಣಿಸಿಕೊಂಡಿದ್ದಾರೆ.['ದಂಡುಪಾಳ್ಯ 2' ಗ್ಯಾಂಗ್ ಗಿದ್ದ ದೊಡ್ಡ ಗಂಡಾಂತರ ತಪ್ತು]

'Dandupalya 2' movie trailer released

ಅಂದಹಾಗೆ, 'ದಂಡುಪಾಳ್ಯ 2' ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಟ್ರೇಲರ್ ನಲ್ಲಿನ ಬ್ಯಾಕ್ ಗ್ರೌಂಡ್ ಸ್ಕೋರ್ ಸಹ ಹೈಲೈಟ್ ಆಗಿದೆ. 'ದಂಡುಪಾಳ್ಯ 2' ಟ್ರೇಲರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

English summary
Pooja gandhi starrer 'Dandupalya 2' kannada movie trailer is out. Watch the trailer here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada