»   » ದಂಡುಪಾಳ್ಯಕ್ಕೆ ಹದಿಮೂರು ಕಡೆ ಕತ್ತರಿ ಪ್ರಯೋಗ

ದಂಡುಪಾಳ್ಯಕ್ಕೆ ಹದಿಮೂರು ಕಡೆ ಕತ್ತರಿ ಪ್ರಯೋಗ

Posted By:
Subscribe to Filmibeat Kannada
ಪೂಜಾಗಾಂಧಿ ಅಭಿನಯದ ದಂಡುಪಾಳ್ಯ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಹಲವಾರು ಕಡೆ ಕತ್ತರಿ ಪ್ರಯೋಗ ಮಾಡಿದೆ. ಪೂಜಾಗಾಂಧಿಯ ಬೆತ್ತಲೆ ಬೆನ್ನಿನ ಸನ್ನಿವೇಶಗಳು ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಪ್ರಸಾದಿಸುವ ಸಾಧ್ಯತೆಗಳಿವೆ. ಈಗಾಗಲೆ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ 13 ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವಕ್ಕೆ ಕತ್ತರಿ ಪ್ರಯೋಗಿಸುವಂತೆ ಸೂಚಿಸಿದೆ.

ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರತಂಡ ದಂಡುಪಾಳ್ಯಕ್ಕೆ ಎ ಸರ್ಟಿಫಿಕೇಟ್ ಗ್ಯಾರಂಟಿ ಎಂಬ ನಿರೀಕ್ಷೆಯಲ್ಲಿದೆ. ಚಿತ್ರದಲ್ಲಿ ಕೆಲವೊಂದು ಹಸಿಬಿಸಿ ಸನ್ನಿವೇಶಗಳಿದ್ದು ಅವಕ್ಕೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ.

ನೈಜ ಘಟನೆಯಾಧಾರಿದ ದಂಡುಪಾಳ್ಯ ಚಿತ್ರಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿವಾದಗಳು ಬೆನ್ನಿಗೆ ಬಿದ್ದಿದ್ದವು. ಅವುಗಳಲ್ಲಿ ಕತೆ ಕದ್ದ ಆರೋಪವೂ ಒಂದು. 'ದಂಡುಪಾಳ್ಯ ಹಂತಕರು' ಎಂಬ ತಮ್ಮ ಪುಸ್ತಕವನ್ನು ಯಥಾವತ್ತಾಗಿ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ತೆರೆಗೆ ತರುತ್ತಿದ್ದಾರೆ ಎಂದು ಮೈಸೂರಿನ ಲೇಖಕ ಶ್ರೀನಾಥ್ ಆರೋಪಿಸಿದ್ದರು. ಬಳಿಕ ಚಲನಚಿತ್ರ ವಾಣಿಕ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ವಿವಾದ ತಣ್ಣಗಾಗಿತ್ತು.


ದಂಡುಪಾಳ್ಯ ಗ್ಯಾಂಗ್ ಬಗ್ಗೆ ಒಂದಿಷ್ಟು: ಹತ್ತು, ಇಪ್ಪತ್ತು, ಮೂವತ್ತರಂತೆ ಜಮಾಯಿಸಿಕೊಂಡ ಇವರ ಗುಂಪಿನ ಒಟ್ಟು ಸದಸ್ಯರ ಬಲ 80. ಮೂಲ ಕಸುಬಿನಿಂದ ದೂರ ಸರಿದ ಈ ದಂಡುಪಾಳ್ಯ ಗ್ಯಾಂಗ್, ಪಾತಕ ಸಾಮ್ರಾಜ್ಯಕ್ಕೆ ಎಂಟ್ರಿ ಕೊಟ್ಟಿತು. ಹೆಣ್ಣು, ಹೊನ್ನಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟುಕೊಂಡ ಗ್ಯಾಂಗ್ ಯಾವುದೇ ಕಿಂಚಿತ್ ಸುಳಿವು ಇಲ್ಲದೆ ಅಮಾಯಕರ ಕೈ ಕಟ್, ಕಾಲ್ ಕಟ್, ರುಂಡಮುಂಡ ಬೇರೆ ಮಾಡಿದ ಅದೆಷ್ಟೋ ಉದಾಹರಣೆಗಳು ಪೋಲೀಸ್ ಮತ್ತು ಗೃಹ ಇಲಾಖೆಯನ್ನು ಅಕ್ಷರಸಃ ಬೆಚ್ಚಿ ಬೀಳಿಸಿತು.

ಕೆಜಿಎಫ್ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಠಾಣೆಯಲ್ಲೇ ಮರ್ಡರ್ ಮಾಡಿದ್ದು ಈ ಪಾತಕಿ ಗ್ಯಾಂಗ್ ಗಳ ನೋಟೆಡ್ ಕ್ರೈಂಗಳಲ್ಲೊಂದು. ಪೋಲೀಸ್ ಇಲಾಖೆ ಪಟ್ಟಿ ಮಾಡಿದ ಪ್ರಕಾರ ದಂಡುಪಾಳ್ಯ ಗ್ಯಾಂಗ್ ಮೇಲೆ ಇರೋ ದುಷ್ಕೃತ್ಯಗಳ ಪಟ್ಟಿಯೆಂದರೆ 57 ಮರ್ಡರ್, 66 ಡಕಾಯಿತಿ, 50ಕ್ಕೂ ಹೆಚ್ಚು ಅತ್ಯಾಚಾರ, ಹಾಫ್ ಮರ್ಡರ್ ಗಳೆಲ್ಲಾ ಲೆಕ್ಕವಿಲ್ಲದಷ್ಟು.

ದೊಡ್ಡ ಹನುಮ, ವೆಂಕಟರಮಣ, ಸೀನ, ಮುನಿಕೃಷ್ಣ, ಗೋಧಿ ತಮ್ಮ, ಲಕ್ಷ್ಮಿ ಮುಂತಾದವರು ಈ ಗ್ಯಾಂಗ್ ನ ಪ್ರಮುಖ ಸದಸ್ಯರು. ಆ ಕಾಲದಲ್ಲಿ ಪೋಲೀಸ್ ಇಲಾಖೆ ಕಂಡ ದಕ್ಷ ಮತ್ತು ಡೈನಾಮಿಕ್ ಪೋಲೀಸ್ ಅಧಿಕಾರಿ ತಮ್ಮಯ್ಯ ಈ ಗ್ಯಾಂಗ್ ಸದಸ್ಯರುಗಳನ್ನು ಒಂದು ಹಂತಕ್ಕೆ ಮಟ್ಟ ಹಾಕಿದ್ದರು.

1999 -2000 ರಲ್ಲಿ ಬೆಂಗಳೂರಿನಿಂದ ಡೆಪ್ಯೂಟೆಶನ್ ಮೇಲೆ ಬಂದ ಪೋಲೀಸ್ ಅಧಿಕಾರಿಯೇ ಚಲಪತಿ. ದಂಡುಪಾಳ್ಯ ಗ್ಯಾಂಗ್ ನ ಪಾತಕಿಗಳಿಗೆ ಇನ್ನೊಂದು ಲೋಕ ತೋರಿಸಿದ ಲಯನ್ ಹಾರ್ಟೆಡ್ ಎಸ್ ಐ ಚಲಪತಿ. ಪಾತಕಿ ಗ್ಯಾಂಗ್ ಮುಟ್ಟಿ ನೋಡಿಕೊಳ್ಳುವಂತೆ ಬೆಂಡೆತ್ತಿದ ಚಲಪತಿ ನೇತೃತ್ವದ ಪೋಲೀಸ್ ಪಡೆ ದಂಡುಪಾಳ್ಯ ಗ್ಯಾಂಗ್ ಅನ್ನು ಹೇಳ ಹೆಸರಿಲ್ಲದೆ ನಿರ್ನಾಮ ಮಾಡಿತು.

ದಂಡುಪಾಳ್ಯದ ಬಗ್ಗೆ ಇಷ್ಟೆಲ್ಲಾ ಯಾಕೆ ನೆನಪಾಯಿತೆಂದರೆ ಭಯಾನಕವಾದ ಒಂದು ಕಥಾನಕ ಧರಿಸಿದ ಒಂದು ಕನ್ನಡ ಸಿನಿಮಾ ನಮ್ಮೆದುರಿಗೆ ಬರುತ್ತಿದೆ. ಚಿತ್ರೀಕರಣ ಹಂತದಲ್ಲಿರುವ ದಂಡುಪಾಳ್ಯಕ್ಕೆ ಮಳೆಹುಡುಗಿ ಪೂಜಾ ಗಾಂಧಿ ನಾಯಕಿ. ಈ ಚಿತ್ರದಲ್ಲಿ ಪೂಜಾ ಅರೆನಗ್ನ ಫೋಸ್ ಕುಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿಷಯ ಕನ್ನಡ ಚಿತ್ರ ಮತ್ತು ಕಿರುತೆರೆ ಸುದ್ದಿಗಳನ್ನು ಗಮನಿಸುವವರಿಗೆ ಗೊತ್ತೇ ಇರುತ್ತದೆ. (ಒನ್‌ಇಂಡಿಯಾ ಕನ್ನಡ)

English summary
Kannada movie Dandupalya comes under censor axe and suggested thirteen cuts, sources said. The movie team expected that the film will be getting the A certificate.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada