For Quick Alerts
  ALLOW NOTIFICATIONS  
  For Daily Alerts

  'ನಿಧಿಮಾ'ಗೆ ಹುಟ್ಟುಹಬ್ಬದ ಸಂಭ್ರಮ: ಭಾವಿ ಪತ್ನಿಗೆ ಪ್ರೀತಿಯ ಶುಭಾಶಯ ಕೋರಿದ ಕೃಷ್ಣ

  |

  ಸ್ಯಾಂಡಲ್ ವುಡ್ ನಟಿ, ಮಿಲನಾ ನಾಗರಾಜ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಲವ್ ಮಾಕ್ ಟೇಲ್ ಸಕ್ಸಸ್ ಖುಷಿಯಲ್ಲಿರುವ ಮಿಲನಾಗೆ ಈ ಬಾರಿಯ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಆದರೆ ಕೊರೊನಾ ಲಾಕ್ ಡೌನ್ ಹಿನ್ನಲೆ ಮಿಲನಾ ಅದ್ದೂರಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲು ಸಾಧ್ಯವಾಗಿಲ್ಲ.

  Love Mocktail behind the scenes also has tears | Darling krishna | Milana Nagraj

  ಸಾಮಾಜಿಕ ಜಾಲತಾಣದ ಮೂಲಕವೇ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ನಿಧಿಮಾ ಪಾತ್ರದ ಮೂಲಕ ಕನ್ನಡ ಚಿತ್ರಪ್ರಿಯರ ನಿದ್ದೆಗೆಡಿಸಿರುವ ಮಿಲನಾಗೆ, ಭಾವಿ ಪತಿ ಡಾರ್ಲಿಂಗ್ ಕೃಷ್ಣ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಹಿನ್ನಲೆ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ವಿರಹ ವೇದನೆ ಅನುಭವಿಸುತ್ತಿರು ಇವರು ಸಾಮಾಜಿಕ ಜಾಲತಾಣದ ಮೂಲಕವೆ ವಿಶ್ ಮಾಡಿದ್ದಾರೆ. ಮುಂದೆ ಓದಿ..

  ಅವರಲ್ಲಿ... ಇವರಿಲ್ಲಿ... ವಿರಹ ವೇದನೆಯಲ್ಲಿ ಆದಿ ಮತ್ತು ನಿಧಿಮಾ!ಅವರಲ್ಲಿ... ಇವರಿಲ್ಲಿ... ವಿರಹ ವೇದನೆಯಲ್ಲಿ ಆದಿ ಮತ್ತು ನಿಧಿಮಾ!

  'ಸಂತೋಷ ಏನು ಎಂದು ತೋರಿಸಿದವಳು ನೀನು..'

  'ಸಂತೋಷ ಏನು ಎಂದು ತೋರಿಸಿದವಳು ನೀನು..'

  "ನಿನ್ನ ಪರಿಶುದ್ಧವಾದ ಪ್ರೀತಿ, ನಿನ್ನ ಪರಿಶುದ್ಧವಾದ ಹೃದಯ, ಪರಿಶುದ್ಧವಾದ ನಗು, ನಿನ್ನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನಿಜವಾದ ಸಂತೋಷ ಅಂದರೆ ಏನು ಎಂದು ನನಗೆ ತೋರಿಸಿದೆ. ಇದು ನನಗೆ ನಿಧಿಮಾ ಬರೆಯಲು ಪ್ರೇರಣೆಯಾಯಿತು. ಹುಟ್ಟುಹಬ್ಬದ ಶುಭಾಶಯಗಳು" ಎಂದು ವಿಶ್ ಮಾಡಿದ್ದಾರೆ.

  ನಿಜ ಜೀವನದ ಪ್ರೇಮಿಗಳು

  ನಿಜ ಜೀವನದ ಪ್ರೇಮಿಗಳು

  ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆ ಮಾತಾಗಿದ್ದಾರೆ. ನಿಜ ಜೀವನದಲ್ಲಿಯೂ ಇಬ್ಬರೂ ಪ್ರೇಮಿಗಳೆಂಬ ವಿಚಾರ ಬಹಿರಂಗವಾಗಿದ್ದು ಲವ್ ಮಾಕ್ ಟೇಲ್ ಸಿನಿಮಾ ನಂತರ. ಈ ಸಿನಿಮಾ ನಂತರ ಇಬ್ಬರೂ ಯಾವುದೇ ಮುಚ್ಚುಮರೆಯಿಲ್ಲದೆ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದಾರೆ.

  ಚಿತ್ರರಂಗದ 10 ವರ್ಷದ ಪಯಣ: ಇಬ್ಬರು ಸ್ಟಾರ್ ನಟರಿಗೆ ಧನ್ಯವಾದ ತಿಳಿಸಿದ ಡಾರ್ಲಿಂಗ್ ಕೃಷ್ಣಚಿತ್ರರಂಗದ 10 ವರ್ಷದ ಪಯಣ: ಇಬ್ಬರು ಸ್ಟಾರ್ ನಟರಿಗೆ ಧನ್ಯವಾದ ತಿಳಿಸಿದ ಡಾರ್ಲಿಂಗ್ ಕೃಷ್ಣ

  ವಿರಹ ವೇದನೆಯಲ್ಲಿ ಆದಿ-ನಿಧಿಮಾ

  ವಿರಹ ವೇದನೆಯಲ್ಲಿ ಆದಿ-ನಿಧಿಮಾ

  ಲಾಕ್‌ಡೌನ್ ಕಾರಣದಿಂದ ಇಬ್ಬರೂ ಅನೇಕ ದಿನಗಳಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಮಿಲನಾ ನಾಗರಾಜ್ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಇತ್ತೀಚಿಗೆ ಮಿಲನಾ 'ಮಿಸ್ಸಿಂಗ್ ಮೈ ಲವ್' ಎಂದು ಡಾರ್ಲಿಂಗ್ ಕೃಷ್ಣ ಜೊತೆಗಿನ ಫೋಟೊ ಹಾಕಿಕೊಂಡು ತಮ್ಮ ಬೇಸರ ವ್ಯಕ್ತಪಡಿಸಿದ್ದರು.

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಇಬ್ಬರು ಪ್ರೀತಂ ಗುಬ್ಬಿ ನಿರ್ದೇಶನದ 'ನಮ್ ದುನಿಯಾ ನಮ್ ಸ್ಟೈಲ್' ಮೊದಲ ಬಾರಿಗೆ ನಟಿಸಿದ್ದಾರೆ. ಮಿಲನಾ ನಾಗರಾಜ್ ಗೆ ಇದು ಮೊದಲ ಸಿನಿಮಾ. ನಂತರ ಇಬ್ಬರೂ 'ಚಾರ್ಲಿ' ಚಿತ್ರದಲ್ಲಿ ಎರಡನೆ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ. ಆ ನಂತರ ಈಗ ಸೂಪರ್ ಹಿಟ್ ಲವ್ ಮಾಕ್ ಟೇಲ್ ಮೂಲಕ ಕನ್ನಡಿಗರ ಮೋಡಿ ಮಾಡುತ್ತಿದ್ದಾರೆ.

  ಲವ್ ಮಾಕ್ ಟೇಲ್ 2ನೇ ಭಾಗಕ್ಕೆ ತಯಾರಿ

  ಲವ್ ಮಾಕ್ ಟೇಲ್ 2ನೇ ಭಾಗಕ್ಕೆ ತಯಾರಿ

  ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ 'ಲವ್ ಮಾಕ್ ಟೇಲ್ 2' ಚಿತ್ರದ ಕಥೆ ಬರೆಯುವ ಕಾರ್ಯ ಆರಂಭಿಸಿದ್ದರು. ಆದರೆ ಈಗ ಲಾಕ್‌ಡೌನ್ ಕಾರಣದಿಂದ ಅವರ ಪ್ರಯತ್ನಕ್ಕೆ ಸದ್ಯಕ್ಕೆ ಅಡ್ಡಿಯಾಗಿದೆ. ಮೊದಲ ಸಿನಿಮಾ ಯಶಸ್ವಿಯಾಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಗುಣಮಟ್ಟದ ಸ್ಕ್ರಿಪ್ಟ್ ನೀಡುವ ಜವಾಬ್ದಾರಿ ಅವರ ಮೇಲಿದೆ.

  English summary
  Darling Krishna birthday wishes to his love Milana Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X