»   » ನಟ ದರ್ಶನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದೇಕೆ?

ನಟ ದರ್ಶನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದೇಕೆ?

Posted By:
Subscribe to Filmibeat Kannada

ಸದ್ಯ, 'ಚಕ್ರವರ್ತಿ' ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ನಿರ್ದೇಶಕ ತರುಣ್ ಸುಧೀರ್ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಇದೇನಾದ್ರೂ ನಿರ್ದೇಶಕ ತರುಣ್ ಸುಧೀರ್ ಅವರ ಹುಟ್ಟುಹಬ್ಬ ಇರಬಹುದು ಎಂಬ ಕಲ್ಪನೆ ಮಾಡಿದ್ರೆ ಅದು ನಿಜ ಅಲ್ಲ. ಯಾಕಂದ್ರೆ, ಇದು ಬರ್ತ್ ಡೇ ಸೆಲೆಬ್ರೇಷನ್ ಅಲ್ಲ. ಮತ್ತೆ ಇವರಿಬ್ಬರು ಸೇರಿ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ ಅಲ್ವ ಅದರ ವಿಶೇಷನ ಎಂದುಕೊಳ್ಳಬೇಡಿ. ಅದು ಅಲ್ಲ.....ಮತ್ತ್ಯಾಕೆ? ಮುಂದೆ ಓದಿ......


'ಚೌಕ' ಚಿತ್ರದ ಸಕ್ಸಸ್ ಪಾರ್ಟಿ

ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದ 'ಚೌಕ' ಸಿನಿಮಾ ಯಶಸ್ವಿ 50 ದಿನವನ್ನ ಪೂರೈಸಿದೆ. ಈ ಖುಷಿಗೆ ನಟ ದರ್ಶನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.[ವಿದೇಶದಲ್ಲಿ ಮೋಡಿ ಮಾಡುತ್ತಿದೆ ಕನ್ನಡದ 'ಚೌಕ']


ತರುಣ್ ಸುಧೀರ್ ಮತ್ತು ದರ್ಶನ್

ತರುಣ್ ಸುಧೀರ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಸಿನಿಮಾ 'ಚೌಕ'. ಹೀಗಾಗಿ, ತಮ್ಮ ಸ್ನೇಹಿತನ ಚೊಚ್ಚಲ ಸಿನಿಮಾ ಯಶಸ್ಸು ಕಂಡಿರುವುದಕ್ಕೆ ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿದ್ದಾರೆ.['ಚೌಕ' ವಿಜಯಯಾತ್ರೆಗೆ ಚಾಲೆಂಜಿಂಗ್ ಸ್ಟಾರ್ 'ಸಾರಥಿ']


'ಚೌಕ' ಚಿತ್ರದಲ್ಲಿ ದರ್ಶನ್ ನಟನೆ

ಅಂದ್ಹಾಗೆ, 'ಚೌಕ' ಚಿತ್ರದಲ್ಲಿ ದರ್ಶನ್ ಸ್ನೇಹ ಪೂರ್ವಕವಾಗಿ ವಿಶೇಷ ಪಾತ್ರವೊಂದನ್ನ ನಿರ್ವಹಿಸಿದ್ದಾರೆ. 'ರಾಬರ್ಟ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ಎಂಟ್ರಿ ಚಿತ್ರಪ್ರೇಮಿಗಳು ಸಿಕ್ಕಾಪಟ್ಟೆ ಖುಷಿ ಕೊಟ್ಟಿತ್ತು.[ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ]


ದರ್ಶನ್-ತರುಣ್ ಜುಗಲ್ ಬಂದಿ

'ಚೌಕ' ಚಿತ್ರದ ಸಕ್ಸಸ್ ನಂತರ ತರುಣ್ ಸುಧೀರ್, ದರ್ಶನ್ ಅವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೌದು, ದರ್ಶನ್ ಅವರ 50ನೇ ಚಿತ್ರವನ್ನ ತರುಣ್ ನಿರ್ದೇಶನ ಮಾಡುತ್ತಿದ್ದಾರೆ.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]


ದ್ವಾರಕೀಶ್ 50ನೇ ಚಿತ್ರ 'ಚೌಕ'

'ಚೌಕ' ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ. ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್, ದಿಗಂತ್, ವಿಜಯರಾಘವೇಂದ್ರ ನಾಲ್ಕು ಜನ ನಾಯಕರಾಗಿ ಅಭಿನಯಿಸಿದ್ದರು. ಐಂದ್ರಿತಾ ರೇ, ಭಾವನಾ, ಪ್ರಿಯಾಮಣಿ, ದೀಪಾ ಸನ್ನಿಧಿ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಇನ್ನು ಕಾಶಿನಾಥ್ ಮಾನ್ವಿತಾ, ಚಿಕ್ಕಣ್ಣ, ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಫೆಬ್ರವರಿ ತಿಂಗಳಲ್ಲಿ ತೆರೆಕಂಡಿದ್ದ ಚೌಕ, ಹಾಫ್ ಸೆಂಚುರಿ ಬಾರಿಸಿ ಶತದಿನದತ್ತ ದಾಪುಗಾಲಿಟ್ಟಿದೆ.[ವಿಮರ್ಶೆ: ಒಳ್ಳೆಯ ಕೆಲಸಗಳಿಗೆ ತಾಳ್ಮೆ ಇರಲಿ ಎಂದು ಹೇಳುವ 'ಚೌಕ']


English summary
Challenging Star Darshan and Director Tarun Sudhir Celebrate Chowka 50 Days Party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada