»   » 'ಕ್ಯಾಡ್ಬರಿ' ಜೋಡಿಗೆ 'ನವಗ್ರಹ' ದರ್ಶನ್ ಕೃಪೆ

'ಕ್ಯಾಡ್ಬರಿ' ಜೋಡಿಗೆ 'ನವಗ್ರಹ' ದರ್ಶನ್ ಕೃಪೆ

Posted By:
Subscribe to Filmibeat Kannada

ವಿಶ್ವಪ್ರಸಿದ್ಧ ಮೈಸೂರು ಅಂಬಾರಿ ಮೇಲೆ 'ನವಗ್ರಹ'ಗಳ ವಕ್ರದೃಷ್ಟಿ ಬಿದ್ದದ್ದನ್ನ ಗಾಂಧಿನಗರ ಮರೆಯುವ ಹಾಗಿಲ್ಲ. ಅಂತಹ ನವಗ್ರಹಗಳಲ್ಲಿ ಯುವ ಪ್ರೇಮಿಗಳ 'ಕಣ್ ಕಣ್ಣ ಸಲಿಗೆ' ಕೂಡ ಎಲ್ಲರ ನೆನಪಲ್ಲಿದೆ. 'ಕ್ಯಾಡ್ಬರಿ ಜೋಡಿ'ಯಂತಲೇ ಅಂದು ಫೇಮಸ್ ಆಗಿದ್ದ ಧರ್ಮ ಕೀರ್ತಿರಾಜ್ ಮತ್ತು ಶರ್ಮಿಳಾ ಮಾಂಡ್ರೆ 'ಮುಮ್ತಾಜ್' ಕೃಪೆಯಿಂದ ಮತ್ತೆ ಒಂದಾಗಿರುವುದು ಹಳೇ ಸಮಾಚಾರ.

ಈಗ ಗಾಂಧಿನಗರದ ಅಂಗಳದಿಂದ ಬಂದಿರುವ ಹೊಸ ಸಮಾಚಾರ ಏನಂದ್ರೆ, ಅಂದು 'ನವಗ್ರಹ'ಗಳ ಅಧಿಪತಿಯಾಗಿ 'ಕ್ಯಾಡ್ಬರಿ'ಗೆ ಶರ್ಮಿಳಾರನ್ನ ಜೊತೆಯಾಗಿಸಿದ ದರ್ಶನ್, ಇಂದು ಕೂಡ ಅದೇ ಕೆಲಸ ಮಾಡುತ್ತಿದ್ದಾರೆ. ಅರ್ಥಾತ್ ಶರ್ಮಿಳಾ-ಧರ್ಮ ಜೋಡಿಯಾಗಿರುವ 'ಮುಮ್ತಾಜ್'ನಲ್ಲಿ ಅತಿಥಿ ಪಾತ್ರ ನಿರ್ವಹಿಸುತ್ತಿರುವ ದರ್ಶನ್, ಚಿತ್ರದಲ್ಲಿ ಜೋಡಿಯನ್ನ ಒಂದು ಮಾಡುತ್ತಾರಂತೆ. [ಕನ್ನಡದ 'ಮುಮ್ತಾಜ್' ಆದ ಶರ್ಮಿಳಾ ಮಾಂಡ್ರೆ ]

Darshan as Underworld Don in Mumtaaz1

ಕೈಲಿ ನಾಲ್ಕೈದು ಸಿನಿಮಾಗಳನ್ನಿಟ್ಟುಕೊಂಡು ಇನ್ನೆರಡು ವರ್ಷ ಡೇಟ್ ಗಳೇ ಇಲ್ಲದಿರುವಷ್ಟು ಬಿಜಿಯಾಗಿರುವ ದರ್ಶನ್, ಅತಿಥಿ ಪಾತ್ರ ಮಾಡಿರುವುದು ಸ್ನೇಹಕ್ಕೋಸ್ಕರ. ಧರ್ಮ ಕೀರ್ತಿರಾಜ್ ಮತ್ತು ಶರ್ಮಿಳಾ ದರ್ಶನ್ ಗೆ ಅತ್ಯಾಪ್ತರು. ದರ್ಶನ್ ಕುಟುಂಬ ಒಡೆತನದ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಿಸಿದ್ದ 'ನವಗ್ರಹ' ಚಿತ್ರದಲ್ಲಿ ಧರ್ಮ-ಶರ್ಮಿಳಾ ನಟಿಸಿದ್ದರು.

ಇದೀಗ ಅದೇ ಜೋಡಿ ಒಂದಾಗಿರುವ ಚಿತ್ರದಲ್ಲಿ 'ಅಂಡರ್ ವರ್ಲ್ಡ್ ಡಾನ್' ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ತಿದ್ದಾರೆ. ಹಾಗಂತ ಚಿತ್ರದಲ್ಲಿ ದರ್ಶನ್ ವಿಲನ್ ಅಲ್ಲ. ಡಾನ್ ಪಾತ್ರ ನಿರ್ವಹಿಸಿದ್ದರೂ, ಧರ್ಮ ಸ್ನೇಹಿತನಾಗಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಈಗಾಗಲೇ ಮೂರು ದಿನ ಶೂಟಿಂಗ್ ಕೂಡ ಮಾಡಿ ಮುಗಿಸಿದ್ದಾರೆ ದರ್ಶನ್. [ದರ್ಶನ್ 'ಅಂಬರೀಶ'ನಿಗೆ 'ಭೂತ'ದ ಕಾಟ]

Darshan as Underworld Don in Mumtaaz3

ಆಕ್ಷನ್ ಕಟ್ ಕ್ರಿಯೇಷನ್ಸ್ ಲಾಂಛನದಲ್ಲಿ ಸದಾಶಿವ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮುರುಳಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ 'ಮುಮ್ತಾಜ್' ತೆರೆಗೆ ಬರುವುದು ಮುಂದಿನ ವರ್ಷದಲ್ಲಿ. (ಏಜೆನ್ಸೀಸ್)

English summary
Challenging Star Darshan is playing Underworld Don in Dharma Keerthiraj and Sharmila Mondre starrer Mumtaaz. Though Darshan has a tight schedule for another two years, he agreed to do this cameo for his friendship with Dharma Keerthiraj and Sharmila Mondre.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada