For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಬೃಂದಾವನ'ಕ್ಕೆ ಭರ್ಜರಿ ಸ್ಯಾಟಲೈಟ್ ರೈಟ್ಸ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿರುವ 'ಬೃಂದಾವನ' ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ ಬಂದಿದೆ. ಖಾಸಗಿ ವಾಹಿನಿಯೊಂದು ಚಿತ್ರದ ಪ್ರಸಾರ ಹಕ್ಕನ್ನು ರು.5 ಕೋಟಿಗೆ ಕೇಳಿದೆ ಎನ್ನಲಾಗಿದೆ. ಕನ್ನಡ ಚಿತ್ರವೊಂದಕ್ಕೆ ಸಿಕ್ಕ ಭರ್ಜರಿ ಬೆಲೆ ಇದಾಗಿದೆ.

  ಆದರೆ ಚಿತ್ರದ ನಿರ್ಮಾಪಕ ಸುರೇಶ್ ಗೌಡ ಅವರು ಇನ್ನೂ ಈ ಬೆಲೆಯಯನ್ನು ಅಂಗೀಕರಿಸಿಲ್ಲ. ಮೂಲಗಳ ಪ್ರಕಾರ ಅವರು ರು.6 ಕೋಟಿ ನಿರೀಕ್ಷಿಸಿದ್ದಾರೆ ಎನ್ನಲಾಗಿದೆ. ವಾಹಿನಿ ಹಾಗೂ ನಿರ್ಮಾಪಕರ ನಡುವೆ ಚೌಕಾಶಿ ವ್ಯಾಪಾರ ನಡೆಯುತ್ತಿತ್ತು ಬಹುಶಃ ರು.5.25 ಕೋಟಿಗೆ ಡೀಲ್ ಕುದುರುವ ಸಾಧ್ಯತೆಗಳಿವೆ.

  ಸದ್ಯಕ್ಕೆ ಬೃಂದಾವನ ಚಿತ್ರತಂಡ ಐಸ್ ಲ್ಯಾಂಡ್ ನಲ್ಲಿದೆ. ಚಿತ್ರತಂಡ ಹಿಂತಿರುಗಿದ ಬಳಿಕ ಮಾತುಕತೆ ನಡೆಯಲಿದೆಯಂತೆ. ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ 'ಬೃಂದಾವನಂ' ಚಿತ್ರದ ರೀಮೇಕ್ ಇದು. ಕೆ.ಮಾದೇಶ್ ಆಕ್ಷನ್, ಕಟ್ ಹೇಳುತ್ತಿದ್ದು, ಅವರ ಬಹುತೇಕ ರೀಮೇಕ್ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಿದ್ದಾರೆ.

  ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಬಳಿಕ ಬಹಳಷ್ಟು ಕುತೂಹಲ ಮೂಡಿಸಿರುವ ಚಿತ್ರ ಇದು. (ಏಜೆನ್ಸೀಸ್)

  English summary
  Challenging Star Darshan's upcoming film Brindavana has been offered Rs 5 crore for the satellite telecast rights. Sources says that film producer Suresh Gowda have not agreed to the offer and are expecting even more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X