»   » ಅಣ್ಣಾಬಾಂಡ್ ದಾಖಲೆ ಮುರಿದ ದರ್ಶನ್ ಬುಲ್ ಬುಲ್

ಅಣ್ಣಾಬಾಂಡ್ ದಾಖಲೆ ಮುರಿದ ದರ್ಶನ್ ಬುಲ್ ಬುಲ್

By: ಉದಯರವಿ
Subscribe to Filmibeat Kannada

ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಇನ್ನೊಂದು ದಾಖಲೆ ಎಂದೇ ಹೇಳಬೇಕು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ ಸಿಕ್ಕಿದೆ. ಮೂಲಗಳ ಪ್ರಕಾರ ಚಿತ್ರದ ಟಿವಿ ಪ್ರಸಾರದ ಹಕ್ಕುಗಳು ರು.4.15 ಕೋಟಿಗೆ ಮಾರಾಟವಾಗಿದೆ.

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಣ್ಣಾಬಾಂಡ್' ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4 ಕೋಟಿಗೆ ಮಾರಾಟವಾಗಿತ್ತು. ಹಾಗೆಯೇ 'ಪರಮಾತ್ಮ' ಚಿತ್ರ ರು.3.75 ಕೋಟಿಗೆ ಖಾಸಗಿ ವಾಹಿನಿ ಪಾಲಾಗಿತ್ತು. ಈಗ ದರ್ಶನ್ ಚಿತ್ರ ಆ ದಾಖಲೆಯನ್ನು ಮುರಿದಿದೆ.


ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ರೈಟ್ಸ್ ಗೂ ಬಲು ಬೇಡಿಕೆ ಇದೆಯಂತೆ. ಆದರೆ ಚಿತ್ರದ ನಿರ್ಮಾಪಕರು ಇನ್ನೂ ದೊಡ್ಡ ಮನಸ್ಸು ಮಾಡಿಲ್ಲ ಎಂಬ ಸಮಾಚಾರವೂ ಇದೆ. ರಾಯಣ್ಣ ಸ್ಯಾಟಲೈಟ್ ರೈಟ್ಸ್ ಗೆ ರು.6 ಕೋಟಿ ಬೇಡಿಗೆ ಬಂದಿದೆ ಎನ್ನುತ್ತವೆ ಮೂಲಗಳು.

ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಪಕರಾದ ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಈ ಹಿಂದೆ ಜೊತೆಜೊತೆಯಲಿ' ಹಾಗೂ ನವಗ್ರಹ' ಚಿತ್ರಗಳನ್ನು ನಿರ್ಮಿಸಿದ್ದರು. ಈ ಚಿತ್ರಗಳನ್ನು ದಿನಕರ್ ತೂಗುದೀಪ ನಿರ್ದೇಶಿಸಿದ್ದರು. ಸಂಸ್ಥೆಯ ಮೂರನೇ ಕಾಣಿಕೆಯಾದ 'ಬುಲ್ ಬುಲ್' ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ.

ವಿ.ಹರಿಕೃಷ್ಣ 'ಬುಲ್ ಬುಲ್' ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿದೆ. ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತರಾಂ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್‍ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ.

English summary
Challenging star Darshan's upcoming film 'Bulbul' Satellite rights has been sold for Rs 4.15 crore to a private satellite channel. It is all time record in Kannada film industry.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada