Don't Miss!
- Technology
ಭಾರತಕ್ಕೆ ಕೋಕ-ಕೋಲಾ ಫೋನ್ ಬರುತ್ತೆ!..ನೋಡೊಕೆ ಯಾವ ತರಹ ಇದೆ ಗೊತ್ತಾ?
- News
ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?
- Sports
ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಸಿಟ್ಟಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
- Automobiles
ಕೈಗೆಟುಕುವ ಬೆಲೆಯ ಹುಂಡೈ ಔರಾ, ಡಿಜೈರ್, ಅಮೇಜ್, ಟಿಗೋರ್ ಕಾರುಗಳು: ಯಾವುದು ಉತ್ತಮ!
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಬಗ್ಗೆ ಅಪ್ಪು ಫ್ಯಾನ್ಸ್ ಅಸಮಾಧಾನ: ನಡೆದಿದ್ದು ಏನು?
ನಟ ದರ್ಶನ್ ತಮ್ಮ ಮುಂದಿನ ಸಿನಿಮಾ ಕ್ರಾಂತಿ ಮೂಲಕ ಸದ್ದು ಮಾಡಲು ಸಜ್ಜಾಗಿದ್ದಾರೆ. 'ಕ್ರಾಂತಿ' ಸಿನಿಮಾದ ಪ್ರಚಾರಕ್ಕೆ ನಟ ದರ್ಶನ್ ಅಭಿಮಾನಿಗಳು ಇಳಿದು ಬಿಟ್ಟಿದ್ದಾರೆ. ದರ್ಶನ್ ಸಿನಿಮಾಗಳು ಬಂದರೆ ಅಭಿಮಾನಿಗಳು ಹೊತ್ತು ಮೆರೆಸುತ್ತಾರೆ. ಆದರೆ 'ಕ್ರಾಂತಿ' ಸಿನಿಮಾದ ವಿಚಾರದಲ್ಲಿ ಇದು ಕೊಂಚ ವಿಭಿನ್ನ.
'ಕ್ರಾಂತಿ' ಸಿನಿಮಾ ರಿಲೀಸ್‌ಗೂ ಮುನ್ನವೇ, ರಾಜ್ಯದ ಮೂಲೆ ಮೂಲೆಯಲ್ಲೂ ಕ್ರಾಂತಿ ಸದ್ದು ಕೇಳಿ ಬರ್ತಿದೆ. ನಟ ದರ್ಶನ್ ಇತ್ತೀಚೆಗೆ ಯುಟ್ಯೂಬ್ ಸಂದರ್ಶನದಲ್ಲಿ ನಟ ದರ್ಶನ್ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ.
'ಕ್ರಾಂತಿ'
ಪ್ಯಾನ್
ಇಂಡಿಯಾ
ಸಿನಿಮಾ
ಅಲ್ಲ
ಅಂದವರು
ಈ
ಸ್ಟೋರಿ
ನೋಡಿ!
ಮಾತನಾಡುತ್ತಾ ನಟ ದರ್ಶನ್ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗೆ ಪುನೀತ್ ರಾಜ್‌ಕುಮಾರ್ ಹೆಸರು ಪ್ರಸ್ತಾಪ ಮಾಡಿರುವುದು ಅಪ್ಪು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿದೆ. ಅಷ್ಟಕ್ಕೂ ನಟ ದರ್ಶನ್ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿದ್ದು ಏನು, ಯಾಕೆ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ ಎನ್ನುವುದನ್ನು ಮುಂದೆ ಓದಿ...

ಅಭಿಮಾನಕ್ಕೆ ಸೋತ ದಾಸ!
'ಕ್ರಾಂತಿ' ಸಿನಿಮಾದ ಪ್ರಚಾರವನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ ನಟ ದರ್ಶನ್ ಅಭಿಮಾನಿಗಳು. ದರ್ಶನ್ ಅಭಿಮಾನಿಗಳು ಅವ್ರನ್ನು ಈ ಮಟ್ಟಿಗೆ ಹೊತ್ತಿ ಮೆರೆಸುತ್ತಾರೆ ಎನ್ನುವುದನ್ನು ಕಂಡ ಸ್ವತಃ ನಟ ದರ್ಶನ್ ಅವರೇ ಮೂಕ ವಿಸ್ಮಿತಾರಾಗದ್ದಾರಂತೆ. ಏನೂ ಹೇಳದೇ ಇಷ್ಟು ದೊಡ್ಡ ಮಟ್ಟಿಗೆ ಮೆರೆಸುತ್ತಿರುದು ಅವರಿಗೇ ಸರ್ಪ್ರೈಸ್, ಈಗ ಅಭಿಮಾನಿಗಳು ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಪುನೀತ್ ಅವ್ರನ್ನು ಮೆರೆಸಿದ ಫ್ಯಾನ್ಸ್!
ಹೀಗೆ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ, ದರ್ಶನ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ. "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಆದ್ರೆ ನಾನು ಬದುಕಿದ್ದಾಗಲೇ ಫ್ಯಾನ್ಸ್‌ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು". ಎಂದು ದರ್ಶನ್ ಹೇಳಿದ್ದಾರೆ. ಇಲ್ಲಿ ಅಭಿಮಾನಿಗಳ ಶಕ್ತಿ ಎಂಥದ್ದು ಎನ್ನುವುದರ ಬಗ್ಗೆ ದರ್ಶನ್ ಮಾತನಾಡಿದ್ದಾರೆ.
|
ದರ್ಶನ್ ಹೇಳಿಕೆಯನ್ನು ತಿರುಚಲಾಯಿತೇ?
ನಟ ದರ್ಶನ್ ತಮ್ಮ ಸಂದರ್ಶನದಲ್ಲಿ ಪುನೀತ್ ರಾಜ್‌ಕುಮಾರ್ ಹೆಸರನ್ನು ಪ್ರಸ್ತಾಪ ಮಾಡುತ್ತಲೇ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳು, ದರ್ಶನ್ ಕೊಟ್ಟಿರುವ ಹೇಳಿಕೆಯನ್ನು ತಿರುಚಲಾಗುತ್ತಿದೆ. ಇದಕ್ಕೆ ಅಪ್ಪು ಫ್ಯಾನ್ಸ್ ಸೊಪ್ಪು ಹಾಕಬೇಡಿ, ದರ್ಶನ್ ಮಾತನಾಡಿರುವು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಶಕ್ತಿ ಬಗ್ಗೆ ಎಂದಿದ್ದಾರೆ.

ಡಬ್ಬಿಂಗ್ ಹಂತದಲ್ಲಿ 'ಕ್ರಾಂತಿ'!
'ಕ್ರಾಂತಿ' ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ, ಡಬ್ಬಿಂಗ್ ಹಂತದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದೆ ಚಿತ್ರತಂಡ. ಸದ್ಯದ ಮಾಹಿತಿಯಂತೆ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರ್ತಿದೆ.