»   » 'ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

'ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಆರು ತಿಂಗಳ ಕಾಲ 'ಚಕ್ರವರ್ತಿ' ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಭಾಗದ ಚಿತ್ರೀಕರಣವನ್ನ ಮುಗಿಸಿಕೊಟ್ಟಿದ್ದಾರೆ. ಕೆಲವು ಪ್ಯಾಚ್ ಅಪ್ ಶಾಟ್ ಗಳು ಮಾತ್ರ ಪೆಂಡಿಂಗ್ ಇದ್ದು, ಅವುಗಳ ಶೂಟಿಂಗ್ ಕಂಪ್ಲೀಟ್ ಆದರೆ, 'ಚಕ್ರವರ್ತಿ' ಚಿತ್ರತಂಡ ಕುಂಬಳಕಾಯಿ ಹೊಡೆದಂತೆ.

ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕೂಡ ಬೇಗ ಪೂರ್ಣಗೊಂಡರೆ ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ 'ಚಕ್ರವರ್ತಿ' ಚಕ್ರಾಧಿಪತ್ಯ ಶುರು ಆಗಲಿದೆ.


ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ದರ್ಶನ್

'ಚಕ್ರವರ್ತಿ' ಚಿತ್ರದಲ್ಲಿ ನಿಮ್ಮೆಲ್ಲರ ಪ್ರೀತಿಯ ದಾಸ ದರ್ಶನ್ ಅಂಡರ್ ವರ್ಲ್ಡ್ ಡಾನ್ ಪಾತ್ರ ನಿರ್ವಹಿಸಿದ್ದಾರೆ. ರೆಟ್ರೋ ಸ್ಟೈಲ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. [ರಿವಿಲ್ ಆಯ್ತು 'ಚಕ್ರವರ್ತಿ'ಯಲ್ಲಿ ದರ್ಶನ್ ಕಹಾನಿ!]


ಡಿಫರೆಂಟ್ ಗೆಟಪ್ ನಲ್ಲಿ ದರ್ಶನ್

'ಚಕ್ರವರ್ತಿ' ಪಾತ್ರಕ್ಕೋಸ್ಕರ ತಮ್ಮ ಹೇರ್ ಸ್ಟೈಲ್ ಕೂಡ ಚೇಂಜ್ ಮಾಡಿಕೊಂಡಿದ್ದರು ದರ್ಶನ್. [ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ]


ದೀಪಾ ಸನ್ನಿಧಿ ಜೋಡಿ

'ಸಾರಥಿ' ಚಿತ್ರದ ನಂತರ ದರ್ಶನ್ ಗೆ ದೀಪಾ ಸನ್ನಿಧಿ ನಾಯಕಿ ಆಗಿ ಅಭಿನಯಿಸಿರುವ ಸಿನಿಮಾ ಇದು. ['ಚಕ್ರವರ್ತಿ'ಯಲ್ಲಿ ದರ್ಶನ್ ನ್ಯೂ ಲುಕ್ ಹೇಗಿದೆ, ನೋಡಿದ್ರಾ?]


ದರ್ಶನ್ ಕುಚ್ಚಿಕ್ಕು ಗೆಳೆಯರು

ದರ್ಶನ್ ಜೊತೆ ಕುಚ್ಚಿಕ್ಕು ಗೆಳೆಯರಾದ ಸೃಜನ್ ಲೋಕೇಶ್ ಮತ್ತು ಆದಿತ್ಯ ಕೂಡ 'ಚಕ್ರವರ್ತಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. [ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ಲಾಂಗ್ ಗ್ಯಾಪ್ ನಂತರ ಬಣ್ಣ ಹಚ್ಚಿದ ಕುಮಾರ್ ಬಂಗಾರಪ್ಪ

ಸುದೀರ್ಘ ಕಾಲದ ನಂತರ ನಟ ಕಮ್ ರಾಜಕಾರಣಿ ಕುಮಾರ್ ಬಂಗಾರಪ್ಪ ಬಣ್ಣ ಹಚ್ಚಿರುವುದು ಕೂಡ 'ಚಕ್ರವರ್ತಿ' ಚಿತ್ರದಲ್ಲೇ.


ದರ್ಶನ್ ಸಹೋದರ ವಿಲನ್

ದರ್ಶನ್ ಸಹೋದರ ದಿನಕರ್ ತೂಗುದೀಪ್ ಕೂಡ ಖಡಕ್ ಕೇಡಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದಲ್ಲೇ.!


ಮಲೇಶಿಯಾದಲ್ಲಿ ಚಿತ್ರೀಕರಣ

ಮೈಸೂರು ಸುತ್ತಮುತ್ತ ಮತ್ತು ಮಲೇಶಿಯಾದಲ್ಲಿ 'ಚಕ್ರವರ್ತಿ' ಚಿತ್ರೀಕರಣ ನಡೆದಿದೆ. ಚಿಂತನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಅಣಜಿ ನಾಗರಾಜ್ ಬಂಡವಾಳ ಹಾಕಿದ್ದಾರೆ.


ಸದ್ಯದಲ್ಲೇ ಆಡಿಯೋ ರಿಲೀಸ್

'ಚಕ್ರವರ್ತಿ' ಚಿತ್ರದ ಆಡಿಯೋ ರಿಲೀಸ್ ದಿನಾಂಕವನ್ನು ಸದ್ಯದಲ್ಲೇ ಪ್ರಕಟ ಮಾಡುತ್ತೇವೆ ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.


English summary
Kannada Actor Darshan has completed his portion of shooting of Kannada Movie 'Chakravarthy'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada