Don't Miss!
- Sports
Ind vs NZ 2nd T20I: 2ನೇ ಪಂದ್ಯದ ಸಂಭಾವ್ಯ ಆಡುವ ಬಳಗ, ಸಮಯ, ನೇರಪ್ರಸಾರದ ಮಾಹಿತಿ
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Lifestyle
ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸತೀಶ್ ರೆಡ್ಡಿ ಹೆಗಲ ಮೇಲೆ ಗನ್ನಿಟ್ಟು ಉಮಾಪತಿಗೆ ಗುರಿ, ಮಾಜಿ ಗೆಳೆಯನ ವಿರುದ್ಧ ಅಖಾಡಕ್ಕೆ ದರ್ಶನ್
ಸಿನಿಮಾ ರಂಗವೇ ಹಾಗೆ ಇಲ್ಲಿ ಗೆಳೆಯರು ದುಶ್ಮನ್‌ಗಳಾಗಲು, ದುಶ್ಮನ್‌ಗಳು ಗೆಳೆಯರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅದರಲ್ಲಿಯೂ ದರ್ಶನ್ ಅಂತೂ ತಮ್ಮ ಗೆಳೆಯರ ಪಟ್ಟಿಯಲ್ಲಿ ಆಗಾಗ್ಗೆ ರೀಫ್ರೆಷ್ ಮಾಡುತ್ತಲೇ ಇರುತ್ತಾರೆ.
ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಉತ್ತಮ ಗೆಳೆಯರಾಗಿದ್ದರು. ಇಬ್ಬರೂ ಒಟ್ಟಿಗೆ ಸೇರಿ ಮಾಡಿದ 'ರಾಬರ್ಟ್' ಸಿನಿಮಾ ಬಹುದೊಡ್ಡ ಹಿಟ್ ಆಯಿತು. ಆ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಓಡಾಡಿದರು. ಪರಸ್ಪರರ ಬಗ್ಗೆ ಮಾಧ್ಯಮಗಳಲ್ಲಿಯೂ ಒಳ್ಳೆಯ ಮಾತುಗಳನ್ನಾಡಿದರು.
ಆದರೆ ತಪ್ಪು ತಿಳುವಳಿಕೆಯಿಂದ ಉಮಾಪತಿ ಹಾಗೂ ದರ್ಶನ್ ದೂರಾದರು. ಆ ಸಮಯದಲ್ಲಿ ದರ್ಶನ್‌ರ ಮೈಸೂರು ಗೆಳೆಯರ ವಿರುದ್ಧ ಉಮಾಪತಿ ವಾಗ್ದಾಳಿ ನಡೆಸಿದ್ದರು. ದರ್ಶನ್‌ರ ಕೆಲವು ಗೆಳೆಯರ ವಿರುದ್ಧ ದೂರು ಸಹ ನೀಡಿದ್ದರು. ದರ್ಶನ್ ಸಹ ಗೆಳೆಯರ ಮೂಲಕ ಉಮಾಪತಿ ವಿರುದ್ಧ ದೂರು ಸಲ್ಲಿಸಿದ್ದರು. ಅಲ್ಲಿಗೆ ಇಬ್ಬರ ಗೆಳೆತನ ಮುರಿದು ಬಿತ್ತು. ಆದರೆ ಈಗ ಸ್ವತಃ ದರ್ಶನ್ ಮಾಜಿ ಗೆಳೆಯನ ವಿರುದ್ಧ ಅಖಾಡಕ್ಕೆ ಇಳಿದಿದ್ದು, ಉಮಾಪತಿಯ ವಿರೋಧಿಯ ಬೆಂಬಲಕ್ಕೆ ನಿಂತಿದ್ದಾರೆ.

ಬೊಮ್ಮನಹಳ್ಳಿಯಿಂದ ಕಣಕ್ಕಿಳಿಯಲಿರುವ ಉಮಾಪತಿ
ಉಮಾಪತಿ ಶ್ರೀನಿವಾಸ್ ಗೌಡ ಚುನಾವಣೆ ರಾಜಕೀಯಕ್ಕೆ ಬರುವುದು ಬಹುತೇಕ ಖಾತ್ರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮಾಪತಿ ಶ್ರೀನಿವಾಸ್‌ಗೆ ಟಿಕೆಟ್ ಮಿಸ್ ಆಗಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಟಿಕೆಟ್ ಪಡೆದೇ ತೀರಲು ಉಮಾಪತಿ ಸಜ್ಜಾಗಿದ್ದಾರೆ. ಇದೇ ಕಾರಣವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಸಹ ಉಮಾಪತಿ ಭೇಟಿಯಾಗಿ ಮಾತುಕತೆ ಸಹ ನಡೆಸಿದ್ದಾರೆ.

ಸತೀಶ್ ರೆಡ್ಡಿ ಪರ ದರ್ಶನ್ ಅಖಾಡಕ್ಕೆ
ಆದರೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹಾಗೂ ಮುಂದಿನ ಚುನಾವಣೆಯಲ್ಲಿ ಉಮಾಪತಿ ಎದುರಾಳಿ ಸತೀಶ್ ರೆಡ್ಡಿ. ಇವರ ಪರವಾಗಿ ನಟ ದರ್ಶನ್ ಅಖಾಡಕ್ಕೆ ಇಳಿದಿದ್ದಾರೆ. ನಿನ್ನೆ (ಡಿಸೆಂಬರ್ 12) ರಂದು ಸತೀಶ್ ರೆಡ್ಡಿ ಹುಟ್ಟುಹಬ್ಬ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದಲ್ಲದೆ, ಸತೀಶ್ ರೆಡ್ಡಿ ಜೊತೆಗೆ ರೋಡ್ ಶೋ ಸಹ ನಡೆಸಿದ್ದಾರೆ. ಚುನಾವಣೆ ಹತ್ತಿರವಿರುವ ಕಾರಣದಿಂದಲೇ ಸತೀಶ್ ರೆಡ್ಡಿ ಈ ರೋಡ್ ಶೋ ಆಯೋಜಿಸಿದ್ದರೆನ್ನುವುದು ಸುಲಭದ ಊಹೆ. ರೋಡ್ ಶೋ ನಲ್ಲಿ ಭಾಗವಹಿಸುವ ಮೂಲಕ ಬೊಮ್ಮನಹಳ್ಳಿಯಲ್ಲಿ ದರ್ಶನ್, ಸತೀಶ್ ರೆಡ್ಡಿಗೆ ಬಹಿರಂಗ ಬೆಂಬಲವನ್ನೇ ಘೋಷಿಸಿದಂತಾಗಿದೆ.

ಉಮಾಪತಿಯನ್ನು ಸೋಲಿಸಲೆಂದು ಕಣಕ್ಕೆ ದರ್ಶನ್
ಉಮಾಪತಿ ಶ್ರೀನಿವಾಸ್ ಗೌಡ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ನಿಲ್ಲುವುದು ಬಹುತೇಕ ಖಾತ್ರಿಯಾಗಿದೆ. ಇದೀಗ ನಟ ದರ್ಶನ್, ತಮ್ಮ ಮಾಜಿ ಗೆಳೆಯನನ್ನು ಸೋಲಿಸಬೇಕೆಂದೇ ಸತೀಶ್ ರೆಡ್ಡಿ ಪರವಾಗಿ ರೋಡ್ ಶೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಉಮಾಪತಿ ಸಹ ದರ್ಶನ್ ಗೆಳೆತನವನ್ನು ತ್ಯಜಿಸಿ ಆಗಿದೆ. ಇದೇ ಕಾರಣಕ್ಕೆ ಉಮಾಪತಿಗೆ 'ತಕ್ಕ ಪಾಠ' ಕಲಿಸುವ ಉದ್ದೇಶದಿಂದ ದರ್ಶನ್, ಸತೀಶ್ ರೆಡ್ಡಿ ಪರ ನಿಂತಿರುವ ಸಾಧ್ಯತೆ ಇದೆ. ಆದರೆ 'ತಕ್ಕ ಪಾಠ' ಯಾರು ಕಲಿಯುತ್ತಾರೆಂಬುದು ಚುನಾವಣೆಯಲ್ಲಿ ತಿಳಿದುಬರಲಿದೆ.

ಎಲ್ಲ ಪಕ್ಷದ ಪರ ಚುನಾವಣಾ ಪ್ರಚಾರ ಮಾಡುವ ದರ್ಶನ್
ನಟ ದರ್ಶನ್ ಪ್ರತಿ ಚುನಾವಣೆಯಲ್ಲಿಯೂ ಕೆಲವರ ಪರವಾಗಿ ಚುನಾವಣೆ ಪ್ರಚಾರಕ್ಕೆ ಹೋಗುತ್ತಾರೆ. ಹೀಗೆ ಪ್ರಚಾರಕ್ಕೆ ಹೋದಾಗ ಪಕ್ಷದ ಚಿಹ್ನೆಯನ್ನು ಧರಿಸುವುದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಲ್ಲಿಯೂ ದರ್ಶನ್‌ಗೆ ಗೆಳೆಯರಿದ್ದು, ಮೂರೂ ಪಕ್ಷದವರ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತಾರೆ ದರ್ಶನ್. ಇನ್ನು ಉಮಾಪತಿ ಶ್ರೀನಿವಾಸ್ ಗೌಡ ತಾವೊಬ್ಬ ಮಹಾತ್ವಾಕಾಂಕ್ಷಿ ಉದ್ಯಮಿ ಎಂದು ಈ ಹಿಂದೆಯೇ ಹೇಳಿಕೊಂಡಿದ್ದು, ರಾಜಕೀಯದಲ್ಲಿ ಬೆಳೆಯುವ, ಜನಸೇವೆ ಮಾಡುವ ಉದ್ದೇಶವಿದೆ ಹಾಗಾಗಿ ಟಿಕೆಟ್‌ಗೆ ಯತ್ನಿಸುತ್ತಿರುವುದಾಗಿಯೂ ಹೇಳಿದ್ದರು. ಕಾಂಗ್ರೆಸ್‌ನಿಂದ ಉಮಾಪತಿಗೆ ಟಿಕೆಟ್ ದೊರೆತರೆ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.