For Quick Alerts
  ALLOW NOTIFICATIONS  
  For Daily Alerts

  ಅನಾರೋಗ್ಯದಿಂದ ಬಳಲುತ್ತಿದ್ದ ದರ್ಶನ್ ಪುಟ್ಟ ಅಭಿಮಾನಿ ನಿಧನ

  |

  ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ನಟ ದರ್ಶನ್ ಅವರ ಪುಟ್ಟ ಅಭಿಮಾನಿ ಪೂರ್ವಿಕ ಸಾವನ್ನಪ್ಪಿದ್ದಾರೆ. ದರ್ಶನ್ ಅವರನ್ನ ತನ್ನ ಜೀವಕ್ಕಿಂತಲು ಹೆಚ್ಚು ಪ್ರೀತಿಸುತ್ತಿದ್ದ ಪೂರ್ವಿಕ, ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಾಮದವರು.

  ಕಳೆದ ಕೆಲವು ತಿಂಗಳುಗಳ ಹಿಂದೆ ದರ್ಶನ್ ಅವರನ್ನು ಭೇಟಿಯಾಗಿ ಕಣ್ತುಂಬಿಕೊಂಡಿದ್ದಳು. ಈ ಮೂಲಕ ಪೂರ್ವಿಕ ತನ್ನ ಬಹಳ ವರ್ಷದ ಆಸೆಯನ್ನು ಈಡೇರಿಸಿಕೊಂಡಿದ್ದರು.

  ಪುಟ್ಟ ಅಭಿಮಾನಿಗೆ ಅಪಾರ ಪ್ರೀತಿ ನೀಡಿದ 'ದಾಸ'

  ಚಿಕ್ಕಮಗಳೂರಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಅಭಿಮಾನಿ ಪೂರ್ವಿಕ ಅವರ ಬಗ್ಗೆ ತಿಳಿದುಕೊಂಡ ದರ್ಶನ್, ಚಿತ್ರೀಕರಣ ಸ್ಥಳದಲ್ಲೇ ಆಕೆಯನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಪೋರಿಯ ನರಳಾಟ ನೋಡಿ ದರ್ಶನ್ ಮನಮಿಡಿದಿತ್ತು.

  ವೈರಲ್ ವಿಡಿಯೋ: ಮಗನ ಅಭಿನಯ ಕಂಡು ದರ್ಶನ್ ದಂಪತಿ ಸಂತಸ

  ನೆಚ್ಚಿನ ನಟನನ್ನು ನೋಡಿದ ಸಂಭ್ರಮ ಮತ್ತು ದರ್ಶನ್ ಅವರ ಧೈರ್ಯದ ಮಾತುಗಳ ನೆನಪಿನಲ್ಲಿ ದಿನ ಕಳೆಯುತಿದ್ದ ಪೂರ್ವಿಕ ನಿನ್ನೆ (ಮಾರ್ಚ್ 8) ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 10 ವರ್ಷದ ಬಾಲಕಿ ಪೂರ್ವಿಕ ಈ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಮತ್ತು ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವ ಖಾಯಿಲೆಯಿಂದ ಕಷ್ಟಪಡುತ್ತಿದ್ದರು. ಆದ್ರೆ, ವಿಧಿಯಾಟಕ್ಕೆ ಪುಟ್ಟ ಬಾಲಕಿ ತನ್ನ ಜೀವನವನ್ನ ಕೊನೆಗೊಳಿಸಬೇಕಾಯಿತು. ಇದು ನಿಜಕ್ಕೂ ನೋವಿನ ಸಂಗತಿ.

  English summary
  Challenging Star Darshan Fan poorvika dies in mandya. she is suffering from rare disease from last couple of years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X