For Quick Alerts
  ALLOW NOTIFICATIONS  
  For Daily Alerts

  ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿಯಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

  |
  DPL ಶುರುಮಾಡಿ ಕಿಚ್ಚನಿಗೆ ಟಾಂಗ್ ಕೊಟ್ಟ ದರ್ಶನ್..!? | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಬಹುನಿರೀಕ್ಷೆಯ 'ರಾಬರ್ಟ್' ಮುಹೂರ್ತ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಟಿರುವ ದರ್ಶನ್ ಈಗ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

  ಚಿತ್ರೀಕರಣದ ಮಧ್ಯೆಯು ದಚ್ಚು ಅಭಿಮಾನಿಗಳಿಗಾಗಿ ಕ್ರಿಕೆಟ್ ಅಂಗಳಕ್ಕೆ ಇಳಿಯುತ್ತಿದ್ದಾರೆ. ಹೌದು ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಎರಡನೆ ಸೀಸನ್ ಪ್ರಾರಂಭವಾಗಿದೆ. ವಿಶೇಷ ಅಂದ್ರೆ ದರ್ಶನ್ ಅಭಿಮಾನಿಗಳು ನಡೆಯುವ ಕ್ರಿಕೆಟ್ ಲೀಗ್ ಇದು. ಕಳೆದ ವರ್ಷ ಡಿಪಿಎಲ್ ಅದ್ಧೂರಿಯಾಗಿ ನಡೆದು ಅಚ್ಚರಿ ಮೂಡಿಸಿದ್ದರು ದಚ್ಚು ಫ್ಯಾನ್ಸ್.

  ಖ್ಯಾತ ನಟ ಜಗಪತಿ ಬಾಬುಗೆ ಸ್ವಾಗತ ಕೋರಿದ 'ರಾಬರ್ಟ್' ಟೀಂ

  ಈಗ ಎರಡನೆ ಆವೃತ್ತಿಗು ಕೂಡ ಅಷ್ಟೆ ಅದ್ಧೂರಿ ಚಾಲನೆ ಸಿಕ್ಕಿದೆ. ಈಗಾಗಲೆ ಡಿಪಿಲ್ ಪ್ರಾರಂಭವಾಗಿದೆ. ಇಂದು ಮತ್ತು ನಾಳೆ(ಮೇ 11/12) ಕ್ರಿಕೆಟ್ ಪಂದ್ಯಾಗಳು ನಡೆಯಲಿವೆ. ರಾಜ್ಯದ ಮೂಲೆ ಮೂಲೆಯಲ್ಲಿರುವ ದಚ್ಚು ಅಭಿಮಾನಿಗಳು ಡಿಪಿಎಲ್ ನಲ್ಲಿ ಭಾಗಿಯಾಗಿ ಸಂತಸಪಡಲಿದ್ದಾರೆ.

  ವಿಶೇಷ ಅಂದ್ರೆ ದರ್ಶನ್ ಕೂಡ ಭಾಗಿಯಾಗಲಿದ್ದಾರೆ. ಕಳೆದ ವರ್ಷ ಫೀಲ್ಡ್ ಗೆ ಇಳಿದು ಅಭಿಮಾನಿಗಳ ಜೊತೆ ಬ್ಯಾಟಿಂಗ್ ಮಾಡಿ ಅಭಿಮಾನಿಗಳನ್ನು ಹುರಿದುಂಬಿಸಿದ್ರು. ಈ ಬಾರಿ ಕೂಡ ಡಿಪಿಎಲ್ ನಲ್ಲಿ ಭಾಗಿಯಾಗಲಿದ್ದಾರೆ ದರ್ಶನ್. ನಾಳೆ ಬೆಳಗ್ಗೆ ಡಿ ಬಾಸ್ ಅಭಿಮಾನಿಗಳ ಜೊತೆ ಫೀಲ್ಡ್ ಗೆ ಇಳಿಯುತ್ತಿದ್ದಾರೆ.

  ಅಭಿಮಾನಿಗಳ ಜೊತೆ ಬೆರೆತು ಅಭಿಮಾನಿಗಳ ಅಭಿಮಾನದಲ್ಲಿ ಕರಗಿಹೋಗುತ್ತಾರೆ. ಅಂದ್ಹಾಗೆ ಕಳೆದ ವರ್ಷ ಕಿಚ್ಚ ಸುದೀಪ್ ಕನ್ನಡ ಚಲನ ಚಿತ್ರ ಕಪ್ ಪ್ರಾರಂಭಿಸಿದ್ರು. ಇಡೀ ಚಿತ್ರರಂಗ ಕೆಸಿಸಿಯಲ್ಲಿ ಭಾಗಿಯಾಗಿತ್ತು. ಆದ್ರೆ ದಚ್ಚು ಆ ಪಂದ್ಯದಲ್ಲಿ ಭಾಗಿಯಾಗಿರಲಿಲ್ಲ. ಆದ್ರೆ ದರ್ಶನ್ ಅಭಿಮಾನಿಗಳು ಡಿಪಿಎಲ್ ಪ್ರಾರಂಭಿಸಿದ್ದಾರೆ. ಮೊದಲ ಆವೃತ್ತಿ ಯಶಸ್ಸು ಕಾಣುತ್ತಿದಂತೆ ಎರಡನೆ ಸೀಸನ್ ಕೂಡ ಅದ್ಧೂರಿಯಾಗಿ ನಡೆಯುತ್ತಿದೆ.

  English summary
  Kannada actor Darshan fans are starting D Brother's Premier League season-2. Darshan will participate fans DPL cricket match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X