Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿಡಿಗೇಡಿಗಳ ವಿರುದ್ಧ ದರ್ಶನ್ ಅಭಿಮಾನಿಗಳ ದೂರು: ಕೊಲೆ ಯತ್ನ ಆರೋಪ!
ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದ ಹುಟ್ಟಿಕೊಂಡಿರುವ ಸ್ಟಾರ್ ವಾರ್ ಕೆಟ್ಟ ಘಟ್ಟ ತಲುಪಿದೆ. ದರ್ಶನ್ ಮೇಲೆ ಚಪ್ಪಲಿ ಬಿದ್ದ ಪ್ರಸಂಗದ ಬಳಿಕವಂತೂ ದರ್ಶನ್-ಅಪ್ಪು ಅಭಿಮಾನಿಗಳು ಪರಸ್ಪರರ ಮೇಲೆ ಜಿದ್ದಿಗೆ ಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಂತೂ ದರ್ಶನ್ ಅಭಿಮಾನಿಗಳು, ಪುನೀತ್ ಅಭಿಮಾನಿಗಳು ಎಂದು ಹೇಳಿಕೊಳ್ಳುವ ಕೆಲವು ಗುಂಪುಗಳು ಮಿತಿ ಮೀರಿ ವರ್ತಿಸುತ್ತಿವೆ. ಎರಡು ದಿನದ ಹಿಂದಷ್ಟೆ ಸೈಬರ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವ ನಾಲ್ಕು ಪ್ರಮುಖ ಫೇಸ್‌ಬುಕ್ ಪೇಜ್‌ಗಳನ್ನು ಗುರುತಿಸಿ ರದ್ದು ಮಾಡಿದ್ದರು. ನಾಲ್ಕರಲ್ಲಿ ಮೂರು ಪೇಜ್‌ಗಳು ದರ್ಶನ್ ಅಭಿಮಾನಿಗಳದ್ದು ಎನ್ನಲಾಗಿತ್ತು.
ಇದೀಗ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳದ್ದು ಎಂದು ಹೇಳಿಕೊಳ್ಳುವ ಕೆಲವು ಫೇಸ್‌ಬುಕ್ ಪೇಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದರ್ಶನ್ ವಿರುದ್ಧ ಕೊಲೆ ಯತ್ನ!
'ಡಿ ಕಂಪೆನಿ ಫ್ಯಾನ್ಸ್ ಅಸೋಸಿಯೇಷನ್' ಹೆಸರಿನ ತುಮಕೂರು ದರ್ಶನ್ ಅಭಿಮಾನಿಗಳು ತುಮಕೂರಿನ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದು, ''ನಟ ದರ್ಶನ್ ವಿರುದ್ಧ ಕೆಲ ಕಿಡಿಗೇಡಿಗಳು ಹಲವರ ಕುಮ್ಮಕ್ಕಿಕೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದಬಳಕೆ ಮಾಡಿ ದರ್ಸನ್‌ರ ಪ್ರತಿಷ್ಠೆ, ಗೌರವಕ್ಕೆ ಚ್ಯುತಿ ತರುವ ಕೀಳು ಮಟ್ಟದ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂಥಹಾ ಹೇಳಿಕೆಗಳು ಮೊದಲಿನಿಂದಲೂ ನಡೆಯುತ್ತಿದ್ದು ದರ್ಶನ್ ಅವರ ಮೇಲೆ ಕಳೆದ ವಾರ ಕೊಲೆ ಯತ್ನವೂ ನಡೆದಿದೆ'' ಎಂದಿದ್ದಾರೆ.

ಅಪ್ಪು ಅಭಿಮಾನಿಗಳೆಂದು ಹೇಳಿಕೊಳ್ಳುವವರ ಪೇಜ್‌ಗಳು
ದರ್ಶನ್ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಕೆಲವು ಪೇಜ್‌ಗಳ ಪಟ್ಟಿಯನ್ನು ಸಹ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪಟ್ಟಿಯಲ್ಲಿ ಬಹುತೇಕ ಪುನೀತ್ ಫ್ಯಾನ್ಸ್ ಎಂದು ಹೇಳಿಕೊಳ್ಳುವ ಪೇಜ್‌ಗಳ ಹೆಸರೇ ಇದೆ. 'ಟ್ರೋಲ್ ಹೂ ಟ್ರೋಲ್ಸ್ ಪುನೀತ್', 'ಆರ್ಯಕಾವ್ಯಾ', 'ಮಧು ಅರಸು', 'ದೊಡ್ಮನೆ ಹುಡುಗ', 'ಯುವ ಅಪ್ಪುರತ್ನ', 'ಅಪ್ಪು ಫ್ಯಾನ್ ಫಾರೆವರ್', 'ಯೂಥ್ ಐಕಾನ್ ಎಫ್‌ಸಿ ಮೈಸೂರು', 'ಕನ್ನಡಿಗ ಯೋಗಿ', 'ಚೇತನ್ ವಂಶಿ', 'ಗಂಧದ ಗುಡಿ 01' ಪೇಜ್‌ಗಳ ಹೆಸರನ್ನು ದೂರಿನಲ್ಲಿ ದರ್ಶನ್ ಅಭಿಮಾನಿಗಳು ಉಲ್ಲೇಖಿಸಿದ್ದಾರೆ.

'ಕನ್ನಡಿಗರನ್ನು ರೊಚ್ಚಿಗೇಳಿಸುವ ಷಡ್ಯಂತ್ರ'
ಇವರ ಪೋಸ್ಟ್‌ಗಳಿಂದ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲವನ್ನುಂಟು ಮಾಡಿ ಕನ್ನಡಿಗರನ್ನು ರೊಚ್ಚಿಗೇಳಿಸುವ ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ಇಂಥ ಅಸಭ್ಯ ವರ್ತನೆಯನ್ನು ತೋರುತ್ತಿರುವ ಕಿಡಿಗೇಡಿಗಳ ಸಂಪೂರ್ಣ ವಿವರವನ್ನು ಸಾಕ್ಷಿ ಸಮೇತವಾಗಿ ನಿಮ್ಮ ಮುಂದೆ ದಾಖಲಿಸಿದ್ದೇವೆ. ತಾವು ದಯಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು'' ಎಂದು ತುಮಕೂರಿನ ಡಿ ಕಂಪೆನಿ ಫ್ಯಾನ್ಸ್ ಅಸೋಸಿಯೇಷನ್ ಅವರು ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಎಫ್‌ಐಆರ್ ದಾಖಲಾಗಿದೆಯೇ?
ದರ್ಶನ್ ಅಭಿಮಾನಿಗಳು ಸೈಬರ್ ಪೊಲೀಸರಿಗೆ ಬರೆದ ದೂರಿನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆಯೇ ಅಥವಾ ಸ್ವೀಕೃತಿ ಪತ್ರ ನೀಡಿದ್ದಾರೆಯೇ ಎಂಬ ಬಗ್ಗೆ ಖಾತ್ರಿ ಇಲ್ಲ. ದರ್ಶನ್ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಬಿದ್ದ ಘಟನೆ ಬಳಿಕ ಮೊನ್ನೆ ಭಾನುವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, 'ನಾವು ಉರಿಸೋಕೆ ರೆಡಿ' ಎನ್ನುವ ಮೂಲಕ ಬಹಿರಂಗ ಸ್ಟಾರ್ ವಾರ್‌ಗೆ ಆಹ್ವಾನ ನೀಡಿದ್ದರು. ಇದರ ಪ್ರತಿಫಲವೇ ಈ ದೂರು ಎನ್ನುವ ಸಂಶಯ ಇದೆ.