»   » ಮ್ಯೂಸಿಯಂ ಆಯ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಳೆ ಮನೆ ?

ಮ್ಯೂಸಿಯಂ ಆಯ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಳೆ ಮನೆ ?

Posted By:
Subscribe to Filmibeat Kannada
ದರ್ಶನ್ ಮೈಸೂರಿನ ಮನೆ ಈಗ ಮ್ಯೂಸಿಯಂ | Filmibeat Kannada

ದರ್ಶನ್ ಮನೆ ವಿಚಾರ ಬಂದರೆ ಸಾಕು ವಿವಾದದ ಸುದ್ದಿಯೇ ನೆನಪಾಗಿತ್ತೆ, ಕೋಟಿ ಕೋಟಿ ಕೊಟ್ಟು ಖರೀದಿ ಮಾಡಿದ್ದ ಮನೆ ಬಿ ಬಿ ಎಂ ಪಿ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದೆಲ್ಲಾ ಸುದ್ದಿ ಆಗಿ ಬಿಟ್ಟಿತ್ತು.

ನಾವು ಈಗ ಹೇಳ ಹೊರಟಿರುವುದು ದರ್ಶನ್ ಅವರ ಹಳೆ ಮನೆಯ ಬಗ್ಗೆ. ದರ್ಶನ್ ಅವರ ಸ್ವಂತ ಮನೆ ಮೈಸೂರಿನಲ್ಲಿಯೂ ಇದೆ ಅನ್ನೋದು ಅದೆಷ್ಟೋ ಜನರಿಗೆ ತಿಳಿಯದೇ ಇರುವ ವಿಚಾರ. ಮೈಸೂರಿನಲ್ಲಿರುವ ಅವರ ಹಳೆ ಮನೆ ಮ್ಯೂಸಿಯಂ ಆಗಿದೆ.

ಸದಾ ಮಲ್ಲಿಗೆ ಹೂವು ಮುಡಿಯುತ್ತಿದ್ದ ದರ್ಶನ್ ತಾಯಿ ಕೂದಲನ್ನ ಕತ್ತರಿಸಿದ್ದೇಕೆ?

ದರ್ಶನ್ ಬಿಡುವಿದ್ದಾಗ ಮೈಸೂರಿಗೆ ಭೇಟಿ ಕೊಡುತ್ತಾರೆ. ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಹೆಚ್ಚಾಗಿ ಹಳೆ ಮನೆಯಲ್ಲೇ ಸಮಯ ಕಳೆಯುತ್ತಾರೆ ಎನ್ನುವ ಸುದ್ದಿಗಳನ್ನ ಈ ಹಿಂದೆಯೇ ಓದಿರುತ್ತೀರಾ. ಅದೇ ಮನೆ ಮ್ಯೂಸಿಯಂ ಆಗಿರುವುದು. ಹಾಗಾದ್ರೆ ಆ ಮನೆಯ ಯಾವ ಮ್ಯೂಸಿಯಂ ಆಯ್ತು? ಯಾಕೆ ಮ್ಯೂಸಿಯಂ ಆಯ್ತು? ಅಂತೆಲ್ಲಾ ತಲೆಗೆ ಹುಳ ಬಿಟ್ಟುಕೊಳ್ಳುವ ಮುಂದೆ ಮುಂದೆ ಓದಿ.

ಅಪ್ಪನ ನೆನಪನ್ನ ಉಳಿಸಿರುವ ಮನೆ

ದರ್ಶನ್ ಅವರ ಮೈಸೂರಿನ ಮನೆಯಲ್ಲಿ ಇಂದಿಗೂ ದರ್ಶನ್ ಅವರ ತಾಯಿ ಮ್ಯೂಸಿಯಂ ನಂತೆ ಕಾಪಾಡಿಕೊಂಡು ಬಂದಿದ್ದಾರಂತೆ. ತೂಗುದೀಪ ಶ್ರೀನಿವಾಸ್ ಅವರ ಮರಣದ ನಂತರ ಅವರು ಉಪಯೋಗಿಸುತ್ತಿದ್ದ ಪ್ರತಿ ವಸ್ತುವನ್ನು ಹಾಳು ಮಾಡದಂತೆ ಯಳಿಸಿಕೊಂಡಿದ್ದಾರಂತೆ.

ಎಲ್ಲವನ್ನೂ ಹಾಗೇ ಉಳಿಸಿಕೊಂಡ ಮೀನಾ

ತೂಗುದೀಪ ಶ್ರೀನಿವಾಸ್ ಬದುಕಿದ್ದಾಗ ಆ ಮನೆಯಲ್ಲಿ ಏನೇನಿತ್ತೋ ಈಗಲೂ ಅವೆಲ್ಲವೂ ಹಾಗೆಯೇ ಇವೆಯಂತೆ. ಫ್ಯಾನ್, ಟಿ.ವಿ, ಗೋದ್ರೇಜ್, ತೊಟ್ಟಿಲು, ಸೈಕಲ್, ಹಾಸಿಗೆ, ಮಂಚ, ಗೋಡೆ ಮೇಲಿನ ದೇವರ ಫೋಟೋ ಎಲ್ಲವನ್ನೂ ಗಂಡನ ನೆನಪಿಗಾಗಿ ಹಾಗೆಯೇ ಉಳಿಸಿಕೊಂಡಿದ್ದಾರೆ ಮೀನಾ ತೂಗುದೀಪ ಶ್ರೀನಿವಾಸ್.

ರಾಜ್ ಕುಮಾರ್, ಪಾರ್ವತಮ್ಮ ಕೃಪಾ

ಮೈಸೂರಿನಲ್ಲಿರುವ ಮನೆಯ ಮೇಲೆ ಮು.ಪಾ ಕೃಪಾ ಎನ್ನುವ ಹೆಸರನ್ನ ಹಾಕಿಸಲಾಗಿದೆ. ಮು ಎಂದರೆ ಮುತ್ತುರಾಜ್ ಪಾ ಎಂದರೆ ಪಾರ್ವತಮ್ಮ ಕೃಪೆ ಎಂದು. ತೂಗುದೀಪ ಶ್ರೀನಿವಾಸ್ ಇರುವಾಗಲೇ ಈ ಹೆಸರನ್ನ ಹಾಕಿಸಲಾಗಿತ್ತು.

ಅಣ್ಣಾವ್ರ ಪ್ರತಿ ಚಿತ್ರದಲ್ಲಿ ತೂಗುದೀಪ್ ಶ್ರೀನಿವಾಸ್

ಡಾ ರಾಜ್ ಕುಮಾರ್ ಹಾಗೂ ತೂಗುದೀಪ್ ಶ್ರೀನಿವಾಸ್ ಅತೀ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಅವರ ಬಹುತೇಕ ಚಿತ್ರದಲ್ಲಿ ಖಳನಟ ಎಂದರೆ ಇಂದಿಗೂ ನೆನಪಾಗುವುದು ತೂಗುದೀಪ್ ಶ್ರೀನಿವಾಸ್ ಅವರೇ.

English summary
Kannada actor challenging star Darshan has maintained his mysore house like museum .The house built by Darshan's father, Thoogudeepa Srinivas is in Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X