For Quick Alerts
  ALLOW NOTIFICATIONS  
  For Daily Alerts

  ಕಮರ್ಷಿಯಲ್ ವಾಸುಗೆ ಜೊತೆಯಾದ ಚಾಲೆಂಜಿಂಗ್ ಸ್ಟಾರ್

  By Pavithra
  |
  ವಾಸುಗೆ ದರ್ಶನ್ ಸಾಥ್...!! | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಕಲಾವಿದರಿಗೆ ಬೆನ್ನೆಲುಬಾಗಿ ನಿಂತುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಯಲ್ಲಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟರಿಗೂ ಸಪೋರ್ಟ್ ಮಾಡುವುದನ್ನು ಮರೆಯುವುದಿಲ್ಲ.

  ಈಗಾಗಲೇ ಸಾಕಷ್ಟು ಕಲಾವಿದರ ಚಿತ್ರಗಳಿಗೆ ಬೆಂಬಲ ನೀಡಿರುವ ಚಾಲೆಂಜಿಂಗ್ ಸ್ಟಾರ್ ಸದ್ಯ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಪರವಾಗಿ ನಿಂತಿದ್ದಾರೆ. ನಟ ಅನಿಶ್ ತೇಜೇಶ್ವರ್ ಹಾಗೂ ದರ್ಶನ್ ಒಟ್ಟಿಗೆ ಸೇರಿ ಈ ಹಿಂದೆ ಚಿತ್ರರಂಗದಲ್ಲಿ ಯಾರು ಮಾಡದ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

  ಶೂಟಿಂಗ್ ಮುಗಿದಿದೆ, ಬಿಡುಗಡೆ ಆಗ್ಬೇಕಿದೆ: ಯಾವ್ಯಾವ ಚಿತ್ರಗಳು.?ಶೂಟಿಂಗ್ ಮುಗಿದಿದೆ, ಬಿಡುಗಡೆ ಆಗ್ಬೇಕಿದೆ: ಯಾವ್ಯಾವ ಚಿತ್ರಗಳು.?

  ಕಮರ್ಷಿಯಲ್ ವಾಸು ಹಾಗೂ ಚಾಲೆಂಜಿಂಗ್ ಸ್ಟಾರ್ ಒಟ್ಟಿಗೆ ಸೇರಿ ಮಾಡುತ್ತಿರುವ ಕೆಲಸವಾದರೂ ಏನು? 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ ದರ್ಶನ್ ನೀಡುತ್ತಿರುವ ಬೆಂಬಲ ಯಾವ ರೀತಿಯದ್ದೂ ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಹೊಸ ಪ್ರಯತ್ನದಲ್ಲಿ ದರ್ಶನ್-ಅನಿಶ್

  ಹೊಸ ಪ್ರಯತ್ನದಲ್ಲಿ ದರ್ಶನ್-ಅನಿಶ್

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಇನ್ನು ಮುಂದೆ ಪ್ರೀ ರಿಲೀಸ್ ಸಮಾರಂಭ ಶುರುವಾಗಲಿದೆ. ಇದೇ ಮೊದಲ ಬಾರಿಗೆ ಇಂಥದೊಂದು ಕಾರ್ಯಕ್ರಮಕ್ಕೆ ದರ್ಶನ್ ಚಾಲನೆ ನೀಡುತ್ತಿದ್ದಾರೆ.

  ಪ್ರೀ ರಿಲೀಸ್ ಸಮಾರಂಭಕ್ಕೆ ದರ್ಶನ್

  ಪ್ರೀ ರಿಲೀಸ್ ಸಮಾರಂಭಕ್ಕೆ ದರ್ಶನ್

  ಅನಿಶ್ ತೇಜೇಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಪ್ರೀ ರಿಲೀಸ್ ಸಮಾರಂಭ ಇದೇ ತಿಂಗಳ 21 ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ.

  ಹೊಸ ರೀತಿ ಪ್ರಯತ್ನಕ್ಕೆ ಮುಂದಾದ ತಂಡ

  ಹೊಸ ರೀತಿ ಪ್ರಯತ್ನಕ್ಕೆ ಮುಂದಾದ ತಂಡ

  ಸಿನಿಮಾ ಆರಂಭದಲ್ಲಿ ಮುಹೂರ್ತ ಮಾಡುವುದು, ನಂತರ ಟೀಸರ್ ಬಿಡುಗಡೆ, ಆಡಿಯೋ ರಿಲೀಸ್, ಫೈನಲ್ ಆಗಿ ಚಿತ್ರವನ್ನು ತೆರೆ ಮೇಲೆ ಪ್ರೇಕ್ಷಕರಿಗೆ ತೋರಿಸುವುದು. ಇದು ಕನ್ನಡ ಚಿತ್ರರಂಗದಲ್ಲಿರುವ ಪದ್ಧತಿ. ಆದರೆ ಇದೇ ಮೊದಲ ಬಾರಿಗೆ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಿ ನಮ್ಮ ಚಿತ್ರ ಇಂತಹ ದಿನಾಂಕದಂದು ಬಿಡುಗಡೆ ಆಗುತ್ತಿದೆ ಎನ್ನುವುದನ್ನು ಅದ್ಧೂರಿ ಸಮಾರಂಭದ ಮೂಲಕ ಹೇಳಿಕೊಳ್ಳುತ್ತಿದೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರತಂಡ.

  ಕುಣಿದು ಕುಪ್ಪಳಿಸಲಿರುವ ತಾರೆಯರು

  ಕುಣಿದು ಕುಪ್ಪಳಿಸಲಿರುವ ತಾರೆಯರು

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಾಕಷ್ಟು ಕನ್ನಡ ಸಿನಿಮಾ ತಾರೆಯರು ಅನಿಶ್ ಅಭಿನಯದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಈ ಮೂಲಕ ಸಮಾರಂಭಕ್ಕೆ ಮತ್ತಷ್ಟು ಕಳೆ ತರಲಿದ್ದಾರೆ.

  ಸಿನಿಮಾ ಬಗ್ಗೆ ಮಾಹಿತಿ

  ಸಿನಿಮಾ ಬಗ್ಗೆ ಮಾಹಿತಿ

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರವನ್ನು ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡುತ್ತಿದ್ದು ವಿಂಕ್ ವಿಷಲ್ ಪ್ರೊಡಕ್ಷನ್ ಲಿಮಿಟೆಡ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಶರತ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  English summary
  Challenging star Darshan is coming to the Vaasu Naan Pakka commercial cinema pre-release program. Anish Tejeshwar is acting as hero in Vasu Naan Pakka commercial film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X