Just In
Don't Miss!
- News
ಐತಿಹಾಸಿಕ ಕೊರೊನಾ ಲಸಿಕೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಾಲನೆ
- Automobiles
ರಾಜಸ್ಥಾನದಲ್ಲಿ ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು
- Finance
ದೇಶದ ಪ್ರಮುಖ ನಗರಗಳಲ್ಲಿ ಜನವರಿ 16ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಹಾರ್ದಿಕ್-ಕೃನಾಲ್ ಪಾಂಡ್ಯ ತಂದೆ ಸಾವಿಗೆ ವಿರಾಟ್ ಕೊಹ್ಲಿ ಸಂತಾಪ
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕ್ಟ್ 1978 ಚಿತ್ರತಂಡಕ್ಕೆ ಬಲ ತುಂಬಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಸಿನಿಮಾ ಚೆನ್ನಾಗಿದೆ ಎಂದು ತಿಳಿದರೆ ಸಾಕು ಖುದ್ದು ಚಿತ್ರತಂಡವನ್ನು ತಮ್ಮ ಮನೆಗೆ ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸುವ ಸಂಪ್ರದಾಯವನ್ನು ಡಿ ಬಾಸ್ ಬಹಳ ಹಿಂದಿನಿಂದಲೂ ಆಚರಿಸಿಕೊಳ್ಳುತ್ತಾ ಬಂದಿದ್ದಾರೆ. ಅದು ಹೊಸಬರ ಸಿನಿಮಾ ಇರಬಹುದು, ಅನುಭವಿ ಕಲಾವಿದರ ಚಿತ್ರವಿರಬಹುದು, ಒಳ್ಳೆಯ ಚಿತ್ರಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ನಂಬುವ ನಟ ದರ್ಶನ್.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿಬಂದಿರುವ 'ಆಕ್ಟ್ 1978' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವುದನ್ನು ಗಮನಿಸಿದ ದಾಸ ದರ್ಶನ್, ಇಡೀ ಚಿತ್ರತಂಡಕ್ಕೆ ಬಲ ತುಂಬಿದ್ದಾರೆ. ಸಿನಿಮಾವನ್ನು ನೋಡಿ ಎಂದು ತಮ್ಮ ಪರವಾಗಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಮುಂದೆ ಓದಿ...

ಆಕ್ಟ್-1978 ಚಿತ್ರತಂಡ ಮೆಚ್ಚಿದ ದರ್ಶನ್
'ಆಕ್ಟ್-1978' ಸಿನೆಮಾದ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ಮಾಧ್ಯಮ ಮಿತ್ರರ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡ ದರ್ಶನ್ ಸರ್ ಅವರು 'ಆಕ್ಟ್-1978' ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿದ್ದಾರೆ.
Act-1978 Review: ಹಲವು ಭಾವಗಳ ಹೋರಾಟದ ಕಥನ

ಜೊತೆಯಾಗಿ ನಿಂತ ಯಜಮಾನ
ಡಿ ಬಾಸ್ ಆಹ್ವಾನದ ಮೆರೆಗೆ ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಛಾಯಾಗ್ರಾಹಕ ಸತ್ಯ ಹೆಗಡೆ ಸೇರಿದಂತೆ ಇತರೆ ತಂತ್ರಜ್ಞರು ಇಂದು ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿರುವುದಕ್ಕೆ ಸಂತಸಗೊಂಡ ದರ್ಶನ್ ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ.

ಸಿನಿಮಾ ಚೆನ್ನಾಗಿದೆ, ಬನ್ನಿ ಸಿನಿಮಾ ನೋಡಿ
''ಆಕ್ಟ್ 1978 ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಬಂದಿದೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಏನು ನಡೆಯುತ್ತಿದೆ ಎಂಬ ಅಂಶವನ್ನಿಟ್ಟು ಕಥೆ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲರೂ ಕಷ್ಟದಲ್ಲಿದ್ದರು. ಈಗ ನಿಧಾನವಾಗಿ ಹೊರಗೆ ಬರ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬನ್ನಿ ಸಿನಿಮಾ ನೋಡಿ'' ಎಂದು ವಿಡಿಯೋ ಮೂಲಕ ನಟ ದರ್ಶನ್ ವಿನಂತಿಸಿದ್ದಾರೆ.
ACT 1978 ಚಿತ್ರ ವಿಮರ್ಶೆ: ಈ ಸಿನೆಮಾ ತಪ್ಪದೇ ನೋಡಿ
ಫಿಲ್ಮಿಬೀಟ್ ವಿಮರ್ಶೆ
'ಆಕ್ಟ್-1978' ಸಿನಿಮಾ ಗಮನ ಸೆಳೆಯುವುದು ಅದರ ಕಥಾ ವಸ್ತು ಮತ್ತು ಎಲ್ಲಿಯೂ ಅದನ್ನು ಹಿಂಜದೆ ಏರಿಳಿತಗಳಿಲ್ಲದೆ ಹದವಾಗಿ ನಿರೂಪಿಸಿರುವ ಅಚ್ಚುಕಟ್ಟುತನದಿಂದ. ಮಂಸೋರೆ ಅವರ ಹಿಂದಿನ ಎರಡೂ ಸಿನಿಮಾಗಳಿಗಿಂತ ಈ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ವ್ಯವಸ್ಥೆಯ ವಿರುದ್ಧದ ಹೋರಾಟದ ಕುರಿತಾದ ಕಥೆಯುಳ್ಳ ಅನೇಕ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಹೋರಾಟಗಳಲ್ಲಿ ಸೋತು ಬಸವಳಿಯುವ ಜನರ ನೋವು-ಸಂಕಟಗಳ ಕಥೆ ಒಂದಾದರೆ, ಸಿಡಿದೆದ್ದು ಹಿಂಸೆಯ ಹಾದಿ ಹಿಡಿಯುವ ಮತ್ತೊಂದು ವರ್ಗದ ಪ್ರೇಕ್ಷಕ ಕಥೆಗಳಿವೆ. ಇವರೆಡನ್ನೂ ಮಂಸೋರೆ ಇಲ್ಲಿ ಬೆರೆಸಿದ್ದಾರೆ. ಪೂರ್ತಿ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ.